fbpx
ಸಮಾಚಾರ

ಭಾರತದ ವಿರುದ್ಧ ತೊಡೆ ತಟ್ಟಿದ್ದ ಪಾಕಿಸ್ತಾನಕ್ಕೆ ಭಾರಿ ಮುಖಭಂಗ- FATFನಿಂದ ಕಪ್ಪುಪಟ್ಟಿಯ ಶಿಕ್ಷೆ.

ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಸಮರ ಸಾರಿದ್ದ ಪಾಕಿಸ್ತಾನವನ್ನು ಜಾಗತಿಕ ಸರ್ವೇಕ್ಷಣಾ ಸಂಸ್ಥೆ ಫತ್ಫ್ (ಎಫ್ಎಟಿಹೆಚ್) ಕಪ್ಪುಪಟ್ಟಿಗೆ ಸೇರಿಸಿದೆ. ಕ್ಯಾನ್ ಬೆರ್ರಾದಲ್ಲಿ ನಡೆದ ಫತ್ಫ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದ್ದು, ಉಗ್ರ ಪೋಷಣೆಗೆ ಆರ್ಥಿಕ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು ‘ವರ್ಧಿತ ಕಪ್ಪುಪಟ್ಟಿಗೆ ಸೇರಿಸಲಾಗಿದೆ.

ಈ ಕುರಿತಂತೆ ಜಾಗತಿಕ ಸರ್ವೇಕ್ಷಣಾ ಸಂಸ್ಥೆ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಫತ್ಫ್-FATF) ಈ ಕ್ರಮ ಕೈಗೊಂಡಿದ್ದು, ಪಾಕಿಸ್ತಾನವನ್ನು ‘ವರ್ಧಿತ ಕಪ್ಪುಪಟ್ಟಿಗೆ ಸೇರಿಸಿದೆ. ಭಯೋತ್ಪಾದನೆಯನ್ನು ನಿಯಂತ್ರಿಸುವಂತೆ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುವುದನ್ನು ನಿಲ್ಲಿಸುವಂತೆ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾದ ಒತ್ತಡಕ್ಕೂ ಮಣಿಯದ ಪಾಕಿಸ್ತಾನದ ದುರಹಂಕಾರಕ್ಕೆ ಈ ಮೂಲಕ ತಕ್ಕ ಶಾಸ್ತಿಯಾದಂತಾಗಿದೆ.

ಪಿಟಿಐ ಪ್ರಕಾರ ಮನಿ ಲಾಂಡರಿಂಗ್ ಮತ್ತು ಭಯೋತ್ಪಾದಕ ಹಣಕಾಸು ಕುರಿತು ಇರುವ 40 ನಿಯತಾಂಕಗಳಲ್ಲಿ 32 ರಲ್ಲಿ ಪಾಕಿಸ್ತಾನ ಅನುಸರಿಸುವುದಿಲ್ಲ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನವು ತನ್ನ ಪ್ರಯತ್ನಗಳ ಹೊರತಾಗಿಯೂ, 41 ಸಮಗ್ರ ಸದಸ್ಯರ ಸಭೆಗೆ ನಿಯತಾಂಕದಲ್ಲಿ ಅಪ್‌ಗ್ರೇಡ್ ಮಾಡುವ ವಿಚಾರವಾಗಿ ಮನವರಿಕೆ ಮಾಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ನಡೆದ ಈ ಎರಡು ದಿನಗಳ ಸಭೆಯಲ್ಲಿ ಏಳು ಗಂಟೆಗಳ ಕಾಲ ಚರ್ಚೆಗಳು ನಡೆದವು ಎನ್ನಲಾಗಿದೆ. ಕಳೆದ ವಾರ ಇಸ್ಲಾಮಾಬಾದ್ 450 ಪುಟಗಳ ಅನುಸರಣಾ ದಾಖಲೆಯನ್ನು ಸಲ್ಲಿಸಿತ್ತು, ಅದು ಸರ್ಕಾರವು ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ ಮಾಡಿದ ಎಲ್ಲಾ ಬದಲಾವಣೆಗಳನ್ನು ಮತ್ತು ಕಳೆದ ಒಂದೂವರೆ ವರ್ಷಗಳಲ್ಲಿ ಭಯೋತ್ಪಾದಕ ಗುಂಪುಗಳ ವಿರುದ್ಧದ ಕ್ರಮಗಳನ್ನು ವಿವರಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top