fbpx
ಸಮಾಚಾರ

ಬಿಜೆಪಿ ವಿರುದ್ಧವೂ ಸಿಡಿದೆದ್ದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ.

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಲು ಪ್ರಮುಖ ಪಾತ್ರವಹಿಸಿದ್ದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಈಗ ಭಾರತೀಯ ಜನತಾ ಪಾರ್ಟಿ ವಿರುದ್ದವೂ ತಿರುಗಿಬಿದ್ದಾರೆ. ಲಕ್ಷ್ಮಣ ಸವದಿಯನ್ನು ಹೇಗೆ ಮಂತ್ರಿ ಮಾಡಿದ್ದೀರಿ ಎಂದು ಬಿಜೆಪಿ ಸರ್ಕಾರದ ವಿರುದ್ಧವೂ ಗರಂ ಆಗಿದ್ದಾರೆ.

ಪರಿವಾಳಗಳ ಪಂಜರಕ್ಕೆ ಬೆಕ್ಕು ಬಿಟ್ಟಂತೆ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದೀರಿ. ಮೊದಲು ನಮಗೆ ಕೊಟ್ಟ ಭರವಸೆಯನ್ನು ಮೊದಲು ಉಳಿಸಿಕೊಳ್ಳಿ. ನಮಗೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿಸಿ ಎಂದು ಸಿಎಂ ಬಿಎಸ್‍ವೈ ಎದುರು ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ..

ಲಕ್ಷ್ಮಣ ಸವದಿ ಶಾಸಕರೂ ಆಗಿಲ್ಲ, ಪರಿಷತ್ ಸದಸ್ಯರೂ ಆಗಿಲ್ಲ. ಹೀಗಿದ್ದರೂ ಮಂತ್ರಿ ಸ್ಥಾನವನ್ನು ಹೇಗೆ ಕೊಟ್ಟಿದ್ದೀರಿ ಎಂದು ಸಿಎಂ ಬಿಎಸ್‍ವೈ ಅವರಿಗೆ ರಮೇಶ್ ಜಾರಕಿಹೊಳಿ ಪ್ರಶ್ನೆ ಮಾಡಿದ್ದು, ಅವರಿಗೆ ಅವಕಾಶ ಕೊಡಬಾರದು ಎಂದು ಒತ್ತಡವನ್ನು ಹಾಕುತ್ತಿದ್ದಾರೆ ಎಂದು ವರದಿ ಮಾಡಿದೆ.

ಆದರೆ ಈ ಬಗ್ಗೆ ಮಾತನಾಡಿರುವ ರಮೇಶ್ ಜಾರಕಿಹೊಳಿ “ರಾಜ್ಯದ ಕಾಂಗ್ರೆಸ್-ಜೆಡಿಎಸ್ ಅನರ್ಹ ಶಾಸಕರಿಗಾಗಲಿ, ಬಿಜೆಪಿ ಸರ್ಕಾರಕ್ಕಾಗಲಿ ಹಾಗೂ ಬಿಜೆಪಿ ಸಚಿವ ಸ್ಥಾನ ಹಂಚಿಕೆಗಾಗಲಿ ಯಾವುದೇ ಸಂಬಂಧ ಇಲ್ಲ. ನಾವು ಈ ಕುರಿತು ಚರ್ಚೆ ಮಾಡಲು ದೆಹಲಿಗೆ ಬಂದಿಲ್ಲ. ಅಮಿತ್ ಶಾ ಅವರನ್ನು ಭೇಟಿಯೂ ಆಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top