fbpx
ಸಮಾಚಾರ

ಹುಡುಗಿಯರ ಜೊತೆಗಿನ ರಾಸಲೀಲೆ ವಿಡಿಯೋ ಲೀಕ್: ಸ್ವಯಂ ಘೋಷಿತ ದೇವಮಾನವ ಎಸ್ಕೇಪ್

ಸ್ವಯಂ ಘೋಷಿತ ದೇವಮಾನವರಾಗಿದ್ದ ಗುರ್ಮೀತ್ ರಾಮ್ ರಹೀಂ ಸಿಂಗ್ ಮತ್ತು ಆಶ್ರಮ ಬಾಪು ಅವರ ಕಾಮಕಾಂಡ ಬಯಲಿಗೆ ಬಿದ್ದ ಬೆನ್ನಲ್ಲೇ ಇದೀಗ ಮತ್ತೊಬ್ಬ ದೇವದೂತನ ನೀಲಿಚಿತ್ರ ಬಯಲಿಗೆ ಬಿದ್ದಿದೆ. ವಯಸ್ಸಿಗೆ ಬಂದ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರೊಂದಿಗೆ ಮಜಾ ಮಾಡುತ್ತಿದ್ದ ದೇವಮಾನವನೊಬ್ಬನ ಕಾಮಕಾಂಡ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಹರಿಯಾಣದ ಗುರುಗ್ರಾಮ್ ನ ಬಹೇದಾ ಕಲಾಗ್ರಾಮದಲ್ಲಿ ಆಶ್ರಮ ನಡೆಸುತ್ತಿದ್ದ ದೇವಮಾನವ ಜ್ಯೋತಿಗಿರಿ ಅನೇಕ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಇದರ ವಿಡಿಯೋಗಳು ಇದೀಗ ವೈರಲ್ ಆಗಿದ್ದು ಸದ್ಯ ಆತ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಅನೇಕ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈ ಕುರಿತು ಎಎಪಿ ಮುಖಂಡ ಸುಧೀರ್ ಯಾದವ್ ದೂರು ದಾಖಲಿಸಿದ್ದಾರೆ.

ವಿಡಿಯೋದಲ್ಲಿ ಜ್ಯೋತಿಗಿರಿ ತನ್ನ ಆಶ್ರಮದಲ್ಲಿ ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ನೀಡುವುದನ್ನು ಕಾಣಬಹುದು. ಜೊತೆ ಈತ ಹುಡುಗಿಯರ ಜೊತೆಯಿದ್ದಾಗಲೇ ಸಿಕ್ಕಿಬಿದ್ದಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಮುಖ ಕಾಣಿಸಿಕೊಂಡಿರುವ ಸಂತ್ರಸ್ತೆಯೊಬ್ಬರು ಆನ್‍ಲೈನ್‍ನಲ್ಲಿ ವಿಡಿಯೋ ಲೀಕ್ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top