fbpx
ಸಮಾಚಾರ

ಮುದ್ದು ಮಗಳ ಪುಟ್ಟ ಕಾಲು, ಕೈಗಳ ಸುಂದರ ಕಲಾಕೃತಿ ನೋಡಿ ಖುಷಿಯಾದ ಯಶ್-ರಾಧಿಕಾ ದಂಪತಿ.

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವಂತೆ ಈ ದಂಪತಿಗೆ ವಿಶೇಷವಾದ ಉಡುಗೊರೆಯೊಂದು ಸಿಕ್ಕಿದೆ. ರಾಧಿಕಾ ಪಂಡಿತ್ ಮೇಕಪ್ ಮ್ಯಾನ್ ಪ್ರಶಾಂತ್ , ಆಯಿರಾಳ ಪುಟ್ಟ ಕಾಲು ಮತ್ತು ಕೈಗಳ ಸುಂದರ ಕಲಾಕೃತಿಗಳನ್ನು ಈ ಸ್ಟಾರ್ ದಂಪತಿಗೆ ನೀಡಿದ್ದಾರೆ. ಪುಟ್ಟ ಕಾಲು ಮತ್ತು ಕೈಗಳ ಕಲಾಕೃತಿಗಳಿಗೆ ಸುಂದರವಾದ ಫ್ರೇಮ್ ಹಾಕಿಸಿದ್ದಾರೆ. ಈ ಕಲಾಕೃತಿ ಮೇಲೆ ಆಯಿರಾ ಜನ್ಮ ದಿನಾಂಕವನ್ನು ಬರೆದು ಗಿಫ್ಟ್ ನೀಡಿದ್ದಾರೆ.

 

 


ಯಶ್ ಮತ್ತು ರಾಧಿಕಾ ಇಬ್ಬರು ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. ಮೊದಲ ಮಗುವಿನ ಪೋಷಕರಾಗಿ ಮಗಳ ನೆನಪನ್ನು ಸ್ಮರಣೀಯವಾಗಿಸಲು ಇಬ್ಬರು ನಿರ್ಧರಿಸಿದ್ದೆವು. ಅದರಂತೆಯೇ ನಮಗೆ ಒಂದು ಹೊಸ ಯೋಚನೆ ಬಂದಿತ್ತು. ಆ ಯೋಚನೆಯನ್ನು ಪ್ರಶಾಂತ್ ಅವರು ಉಡುಗೊರೆಯನ್ನಾಗಿ ಸಿದ್ಧಪಡಿಸಿ ನೀಡಿದ್ದಾರೆ ಎಂದಿದ್ದಾರೆ.

ಪೋಷಕರಾಗಿ ಇದು ನಮಗೆ ಸ್ಮರಣೀಯವಾಗಿದೆ. ಆರ್ಗ್ಯಾನಿಕ್ ಐಟಂ ಮೂಲಕ ಮಗಳ ಪುಟ್ಟ ಪುಟ್ಟ ಕೈ, ಕಾಲಿನ ಪದಗಳನ್ನು ಅಚ್ಚು ಮಾಡಿ ತಯಾರಿಸಲಾಗಿದೆ. ಈ ಅಚ್ಚುಗಳನ್ನು ಸಿದ್ಧಪಡಿಸಲು ಪ್ರಶಾಂತ್ ಹೆಚ್ಚು ಶ್ರಮವಹಿಸಿದ್ದಾರೆ ಎಂದು ರಾಕಿಂಗ್ ದಂಪತಿ ಅವರಿಗೆ ಧನ್ಯವಾದ ತಿಳಿಸಿದರು. ಇನ್ನೂ ಈ ವಿಡಿಯೋ ಸಂಪೂರ್ಣವಾಗಿ ಇಂಗ್ಲಿಷ್ ನಲ್ಲಿಯೇ ಇದ್ದು, ಯಶ್ ಮತ್ತು ರಾಧಿಕಾ ಎಲ್ಲಿಯೂ ಕನ್ನಡ ಪದವನ್ನು ಬಳಸಿಲ್ಲ. ಇದಕ್ಕೆ ನೆಟ್ಟಿಗರು ಗರಂ ಆಗಿದ್ದು, ಕನ್ನಡದಲ್ಲಿ ಹೇಳಿ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top