fbpx
ಸಮಾಚಾರ

ಚೊಚ್ಚಲ ಮಗುವಿಗೆ ತಂದೆಯಾದ ನಟ ಚೇತನ್ ಚಂದ್ರ.

ಕನ್ನಡ ಚಿತ್ರದ ನಟ ಚೇತನ್ ಚಂದ್ರ ತಂದೆಯಾದ ಸಂಭ್ರಮದಲ್ಲಿದ್ದಾರೆ. ಚೇತನ್ ಅವರ ಪತ್ನಿ ರಚನಾ ಹೆಗಡೆ ಆಗಸ್ಟ್‌ 23 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಮ್ಮ ಮಗಳ ಪುಟ್ಟ ಕೈಗಳನ್ನು ಮೆಲ್ಲಗೆ ಹಿಡಿರುವ ಫೋಟೋವನ್ನುಫೇಸ್ಬುಕ್ ನಲ್ಲಿ ಹಂಚಿಕೊಂಡಿರುವ ಈ ಮೂಲಕ ಚೇತನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. “ನಮಗೆ ಮಗಳು ಹುಟ್ಟಿದ್ದಾಳೆ” ಎಂದು ಚೇತನ್ ಬರೆದುಕೊಂಡಿದ್ದಾರೆ.

 

 

ಇನ್ ಫಾರ್ಮೇಶನ್ ಸೈನ್ಸ್‌ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಚೇತನ್ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳತಿ ರಚನಾ ಹೆಗಡೆ ಅವರೊಂದಿಗೆ 2017 ಏಪ್ರಿಲ್ 17 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಪಿಯುಸಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಚೇತನ್ ಚಂದ್ರ ಬಳಿಕ ನಟ ಯಶ್‍ರೊಂದಿಗೆ ರಾಜಧಾನಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಹುಚ್ಚುಡುಗ್ರು, ಕುಂಭರಾಶಿ, ಪ್ಲಸ್, ಜಾತ್ರೆ, ಪ್ರೇಮಿಸಂ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top