fbpx
ಸಮಾಚಾರ

ಮಾರುಕಟ್ಟೆಗೆ ಬಂದ ‘ಮುನಿರತ್ನ ಕುರುಕ್ಷೇತ್ರ’ ದುರ್ಯೋದನ ಗಣೇಶ.

ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿ ಮನೆ ಮನೆಯಲ್ಲೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸೋಕೆ ಸಕಲ ತಯಾರಿಗಳು ನಡೆಯುತ್ತಿವೆ. ಹಾಗೆಯೆ ಈ ಬಾರಿಯ ಗಣೇಶೋತ್ಸವವನ್ನು ನಾನಾ ಬಗೆಯ ಗಣೇಶ ಮೂರ್ತಿಗಳು ಮತ್ತಷ್ಟು ರಂಗೇರಿಸುತ್ತಿವೆ. ಈಗಾಗಲೇ ಮಾರುಕಟ್ಟೆ ಪ್ರವೇಶ ಮಾಡಿರುವ ಮೂರ್ತಿಗಳ ಕೆಲವು ವಿಶೇಷ ಮೂರ್ತಿಗಳು ಭಕ್ತರ ಗಮನ ಸೆಳೆಯುತ್ತಿದೆ.

ಕಳೆದ ಬಾರಿ ಪ್ರಭಾಸ್‌ ಅಭಿನಯದ ‘ಬಾಹುಬಲಿ’, ಸುದೀಪ್‌ ಮತ್ತು ಶಿವರಾಜ್‌ ಕುಮಾರ್‌ ನಟನೆಯ ‘ದಿ ವಿಲನ್‌’ ಸೇರಿದಂತೆ ಹಲವು ಚಿತ್ರಗಳ ಥೀಮ್‌ ಬಳಸಿಕೊಂಡು ಗಣೇಶ ಮೂರ್ತಿಯನ್ನು ತಯಾರು ಮಾಡಲಾಗಿತ್ತು. ಇತ್ತೀಚಿಗೆ ಯಶ್‌ ನಟನೆಯ ‘ಕೆಜಿಎಫ್‌ 2’ ಮತ್ತು ಕಿಚ್ಚ ಸುದೀಪ ನಟನೆಯ ಪೈಲ್ವಾನ್ ಚಿತ್ರಗಳ ಅವತಾರದಲ್ಲಿ ಗಣೇಶನನ್ನು ತಯಾರಿಸಲಾಗಿತ್ತು.. ಇದೀಗ ಮುನಿರತ್ನ ಕುರುಕ್ಷೇತ್ರ ಚಿತ್ರದ ದುರ್ಯೋಧನ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾನೆ.

ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ (ದುರ್ಯೋಧನ) ಕುಳಿತಿರುವ ಸ್ಟೈಲ್ ನಲ್ಲಿ ದುರ್ಯೋಧನ ಗಣೇಶವನ್ನ ಕೂಡ ಡಿಸೈನ್ ಮಾಡಲಾಗಿದೆ. ಸಿಂಹಾಸನದ ಮೇಲೆ ದುರ್ಯೋಧನ ಗಣೇಶ ಕೂತಿದ್ದು, ಕೈಯಲ್ಲಿ ಗದೆ ಹಿಡಿದುಕೊಂಡಿವರುವಂತೆ ತಯಾರು ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top