fbpx
ಸಮಾಚಾರ

“ಬ್ರಿಗೇಡ್ ರೋಡನ್ನು ಫಾರಿನ್ ಎಂದುಕೊಂಡಿದ್ದೆ” ತಮಿಳುನಾಡಿಗಿಂತ ಬೆಂಗಳೂರು ಬೆಸ್ಟ್ ಎಂದ ಟಾಲಿವುಡ್ ನಟ ಪ್ರಭಾಸ್.

ಭಾಸ್ ಈಗ ‘ಸಾಹೋ’ ಎಂಬ ಮತ್ತೊಂದು ಮೆಗಾ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸದ್ಯ ಈ ಸಿನಿಮಾದ ಪ್ರಮೋಷನ್‍ನಲ್ಲಿ ಬ್ಯುಸಿಯಾಗಿರೋ ಪ್ರಭಾಸ್ ಬೆಂಗಳೂರಿಗೂ ಬಂದಿದ್ದರು. ಈ ವೇಳೆ ಪ್ರಭಾಸ್ ಕನ್ನಡ ಚಿತ್ರರಂಗದ ಬಗ್ಗೆ ಮನಸಾರೆ ಮಾತಾನಾಡಿದ್ದಾರೆ.

ಸುದ್ದಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪ್ರಭಾಸ್ ಅವರಿಗೆ ಬೆಂಗಳೂರಿನ ಬಗ್ಗೆ ಪ್ರಶ್ನಿಸಲಾಯಿತು. ಈ ವೇಳೆ ಅವರು, ನನಗೆ 16 ವರ್ಷ ಇದ್ದಾಗ ನನ್ನ ಸ್ನೇಹಿತರು ಪರೀಕ್ಷೆ ಬರೆಯಲು ಬೆಂಗಳೂರಿಗೆ ಬಂದಿದ್ದರು. ನಾನು ಕೂಡ ಅವರ ಜೊತೆ ಬಂದಿದ್ದೆ. ಆದರೆ ನಾನು ಪರೀಕ್ಷೆ ಬರೆಯಲು ಬಂದಿರಲಿಲ್ಲ. ಎಂಜಾಯ್ ಮಾಡಲೆಂದು ಬಂದಿದ್ದೆ. ಆಗ ನಾನು ಬ್ರಿಗೇಡ್ ರೋಡಿಗೆ ಹೋಗಿದ್ದೆ. . ಆಗ ಇದು ಭಾರತ ಅಲ್ಲ ವಿದೇಶ ಎಂದು ಅನಿಸುತ್ತಿತ್ತು ಎಂದರು.

ಬ್ರಿಗೇಡ್ ರೋಡಿನಲ್ಲಿ ಜನರು ಧರಿಸುವ ಉಡುಪು, ಬೈಕ್, ಕಾಫಿ ಶಾಪ್‍ಗಳು ಆ ವಾತಾವರಣ ಅಬ್ರಾಡ್ ರೀತಿ ಇತ್ತು. ಸಂಜೆ 6 ಗಂಟೆ ಆಗುತ್ತಿದ್ದಂತೆ ಮಳೆ ಹನಿ ಬೀಳುತ್ತಿತ್ತು. ಅದು ತುಂಬಾನೇ ಸುಂದರವಾಗಿತ್ತು. ಬೆಂಗಳೂರು ಯಾವಾಗಲೂ ಒಂದು ಸುಂದರ ನಗರವಾಗಿರುತ್ತದೆ. ನಾನು ಚೆನ್ನೈನಲ್ಲಿ ಹುಟ್ಟಿ ಬೆಳೆದಿದ್ದೇನೆ. ಅದು ಕೂಡ ಮಹಾನಗರ. ಆದರೆ ಬೆಂಗಳೂರು ಮಾತ್ರ ಸುಂದರವಾದ ನಗರ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top