fbpx
ಸಮಾಚಾರ

ರೈಲ್ವೆ ಸ್ಟೇಷನ್​ನಲ್ಲಿ ಹಾಡಿ ಜೀವನ ಸಾಗಿಸುತ್ತಿದ್ದ ರಾಣುಗೆ ಬಾಲಿವುಡ್​ನಿಂದ ಬಂತು ಆಫರ್​!

ಇದು ಆನ್‌ಲೈನ್ ಯುಗದ ಅಸಲೀ ಚಮತ್ಕಾರ, ಪಶ್ಚಿಮ ಬಂಗಾಳದ ರಾಣಾಘಾಟ್‌ ರೈಲ್ವೆ ಸ್ಟೇಷನ್‌ನಲ್ಲಿ ಹಾಡು ಹಾಡುತ್ತಾ ಹೊಟ್ಟೆ ತುಂಬಿಸುತ್ತಿದ್ದ ಮಹಿಳೆಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಸೆಲೆಬ್ರಿಟಿಯಾದದ್ದು ನಿಮಗೆ ನೆನಪಿರಬಹುದು. ಆಕೆ ಹಾಡಿದ ‘ಏಕ್‌ ಪ್ಯಾರ್‌ ಕ ನಗ್ಮಾ ಹೈ’ ಹಾಡು ಸಕತ್ ವೈರಲ್ ಆಗಿತ್ತು. ಹಾಡಿನ ಮೂಲಕವೇ ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ರಾಣು ಒಂದು ಹಗಲು ಒಂದು ರಾತ್ರಿ ಕಳೆಯುವಷ್ಟರಲ್ಲಿ ಸ್ಟಾರ್ ಆಗ ಪರಿಣಮಿಸಿದ್ದರು..

 

 

ಎಂಥದ್ದೇ ಶೈಲಿಯ ಹಾಡನ್ನಾದರೂ ಶ್ರುತಿ ತಪ್ಪದೆ ಲೀಲಾಜಾಲವಾಗಿ ಎಂಥವರೂ ತಲೆದೂಗುವಂತೆ ಹಾಡುವ ಅಪರೂಪದ ಕಲೆಯನ್ನು ಹೊಂದಿರುವ ರಾಣು ಈಗ ಬಾಲಿವುಡ್ ಆಫರ್ ಪಡೆದಿದ್ದಾರೆ. ಬಾಲಿವುಡ್ ಸಂಗೀತ ನಿರ್ದೇಶಕ ಹಿಮೇಶ್​ ಅವರು ಈಗ ರಾಣು ಅವರಿಗೆ ಹಾಡಲು ಅವಕಾಶ ಕೊಟ್ಟಿದ್ದು, ಅವರಿಂದ ಒಂದು ಹಾಡನ್ನೂ ಹಾಡಿಸಿದ್ದಾರೆ. ‘ತೇರಿ ಮೇರಿ ತೇರಿ ಮೇರಿ ತೇರಿ ಮೇರಿ ಕಹಾನಿ…. ‘ ಹಾಡನ್ನು ಹಿಮೇಶ್​ ಅವರು ರಾಣು ಅವರ ಕೈಯಲ್ಲಿ ಹಾಡಿಸಿದ್ದಾರೆ. ಈ ವಿಡಿಯೋ ಸಹ ಈಗ ವೈರಲ್​ ಆಗುತ್ತಿದೆ.

ಹಳೇ ಹಿಂದಿ ಚಿತ್ರಗೀತೆಗಳನ್ನು ಹಾಡುತ್ತಾ ರಾತ್ರೋ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಫೇಮಸ್​ ಆಗಿದ್ದ ರಾಣು ಅವರಿಗೆ ಅನೇಕ ಅವಕಾಶಗಳು ಬರುತ್ತಿವೆ. ಟಿವಿಗಳು ಟ್ಯಾಲೆಂಟ್​ ಶೋಗಳಲ್ಲಿ ಭಾಗವಹಿಸುವಂತೆ ದುಂಬಾಲು ಬಿದ್ದಿವೆ. ಟಿವಿ ಟ್ಯಾಲೆಂಟ್‌ ಶೋಗಳಿಂದಷ್ಟೇ ಅಲ್ಲದೇ ಮುಂಬಯಿ, ಕೇರಳ ಹಾಗೂ ಬಾಂಗ್ಲಾದೇಶದಿಂದಲೂ ಅವರಿಗೆ ಆಫರ್‌ಗಳು ಬರುತ್ತಿವೆ.

ಯಾರು ಈ ರಾಣು:
ಕೆಲವು ದಿನಗಳ ಹಿಂದೆ ರಾಣು ಮಂಡಲ್‌ ರೈಲ್ವೆ ನಿಲ್ದಾಣದಲ್ಲಿ ‘ಏಕ್‌ ಪ್ಯಾರ್‌ ಕಾ ನಗಮಾ ಹೈ..’ ಹಾಡು ಹೇಳುತ್ತಿದ್ದುದನ್ನು ಯಾರೋ ವಿಡಿಯೊ ಮಾಡಿ ಅದನ್ನು ಟ್ವಿಟರ್‌ ಹಾಗೂ ವ್ಯಾಟ್ಸ್‌ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಅದು ಬಳಿಕ ವಿವಿಧ ಸೋಷಿಯಲ್‌ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಹರಿದಾಡಿತ್ತು. ಒಂದೇ ದಿನದಲ್ಲಿ ರಾಣು ಆನ್ ಲೈನ್ ಸ್ಟಾರ್ ಆಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top