fbpx
ಸಮಾಚಾರ

ದರ್ಶನ್ ಸಂಸಾರದ ಜಗಳದ ಬಗ್ಗೆ ಸುಮಲತಾ ಪ್ರತಿಕ್ರಿಯೆ! ಹೇಳಿದ್ದೇನು ಗೊತ್ತಾ?

ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಮತ್ತೆ ಹಲ್ಲೆ ಮಾಡಿದ್ದಾರೆ, ಇಬ್ಬರ ನಡುವೆ ಮತ್ತೊಮ್ಮೆ ಜಗಳ ಆಗಿದೆ ಎಂಬ ಸುದ್ದಿ ಬೂದಿ ಮುಚ್ಚಿದ ಕೆಂಡದ ರೀತಿ ಕಳೆದ ಒಂದು ವಾರದಿಂದ ಗಾಂಧಿನಗರದಲ್ಲಿ ಕೇಳಿಬರುತ್ತಲೇ ಇದೆ. ಅಲ್ಲದೇ ಮೊನ್ನೆಯಷ್ಟೇ ಹಿರಿಯ ಪತ್ರಕರ್ತ ರವಿಬೆಳಗೆರೆ ಕೂಡ ಅದೇ ವಿಷಯದ ಬಗ್ಗೆ ಮಾತನಾಡಿದ್ದರು. ಇದೀಗ ಈ ವಿಚಾರದ ಬಗ್ಗೆ ಸುಮಲತಾ ಪ್ರತಿಕ್ರಿಯೆ ನೀಡಿದ್ದು ದರ್ಶನ್ ಮತ್ತು ವಿಜಯಲಕ್ಷ್ಮಿ ನಡುವಿನ ಜಗಳದ ಸುದ್ದಿ ಸುಳ್ಳು ಎಂದಿದ್ದಾರೆ.

“ಇಂತಹ ಸುದ್ದಿಗಳು ಬರುತ್ತಲೇ ಇರುತ್ತದೆ. ನಾನು ಇಂತಹ ಸುದ್ದಿಗಳಗೆ ಪ್ರಾಮುಖ್ಯತೆ ನೀಡುವುದಿಲ್ಲ. ಕೆಲವರು ಬೇಕು ಅಂತಲೇ ಸೃಷ್ಟಿ ಮಾಡುತ್ತಾರೆ. ಇದರ ಮೂಲಕ ಪ್ರಚಾರ ಪಡೆಯುತ್ತಾರೆ. ಗಂಡ – ಹೆಂಡತಿ ಮಧ್ಯೆ ಇಂತಹ ಸುದ್ದಿ ಹಬ್ಬಿಸುವುದು ತಪ್ಪು ಮನೆ ಮುರಿಸಯುವ ಕೆಲಸಗಳನ್ನು ಯಾರು ಮಾಡಬಾರದು.” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಂದಹಾಗೆ ಇನ್ನು ಇತ್ತೀಚೆಗಷ್ಟೇ ವರಮಹಾಲಕ್ಷ್ಮಿ ಹಬ್ಬದ ದಿನ ಚಾಲೆಂಜಿಂಗ್ ಸ್ಟಾರ್ ತಮ್ಮ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆಂಬ ಸುದ್ದಿ ಹರಿದಾಡಿತ್ತು. ಅಲ್ಲದೇ, ಟ್ವಿಟರ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ ಅಂತಿದ್ದ ಹೆಸರನ್ನ ವಿಜಯಲಕ್ಷ್ಮಿ ಅಂತಷ್ಟೇ ಚೇಂಜ್ ಮಾಡಿದ್ದು, ಹಲವು ಅನುಮಾನಕ್ಕೆ ಎಡೆಮಾಡಿ ಕೊಟ್ಟಿತ್ತು. ಆದ್ರೆ ವಿಜಯಲಕ್ಷ್ಮಿ ಟ್ವೀಟ್ ಮಾಡಿ, ಇದೆಲ್ಲ ಗಾಳಿ ಸುದ್ದಿ ಇದನ್ನೆಲ್ಲ ನಂಬಬೇಡಿ ಎಂದು ಹೇಳಿದ್ರು. ಅಲ್ಲದೇ ಸುಮಲತಾ ಅವರು ದರ್ಶನ್ ಮತ್ತು ವಿಜಯಲಕ್ಷ್ಮಿ ನಡುವೆ ಸಂಧಾನ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಕೇಳಿಬಂದಿತ್ತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top