fbpx
ಸಿನಿಮಾ

ಸ್ಯಾಂಡಲ್‍ವುಡ್ ಸ್ಟಾರ್ ಗಳ ಕೃಷ್ಣನ ಹಬ್ಬದ ಕಾರ್ಬಾರು ಹೆಚ್ಚಿಸಿದ ಸ್ಟಾರ್ ಪುತ್ರಿಯರು

ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಜಗದೋದ್ಧಾರಕನ ಜನ್ಮದಿನ, ಕೃಷ್ಣ ಜನ್ಮಾಷ್ಟಮಿಯಂದು ಇಲ್ಲಿ ಕೃಷ್ಣನ ವಿಗ್ರಹವನ್ನು ವೈಭವೋಪೇತವಾಗಿ ಅಲಂಕರಿಸಲಾಗುತ್ತದೆ. ಹಲವೆಡೆ ಕೃಷ್ಣ, ಕೃಷ್ಣನ ಸಾಹಸಗಳನ್ನು ವರ್ಣಿಸುವ ಭಜನೆಗಳು ನಡೆಯುತ್ತವೆ, ದ್ವಾಪರಯುಗದಲ್ಲಿ ವಿಷ್ಣುವಿನ ಅವತಾರವಾದ ಭಗವಾನ್​ ಕೃಷ್ಣನ ಜನನದ ಸ್ಮರಣೆಯೇ ಕೃಷ್ಣ ಜನ್ಮಾಷ್ಟಮಿ. ಹಿಂದೂ ಧರ್ಮದ ಬಹುಮುಖ್ಯ ಆಚರಣೆಯಾಗಿರುವ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ ಪರಾಕಾಷ್ಠೆಯಿಂದ ಆಚರಿಸಲಾಗುತ್ತದೆ.

ಕರ್ನಾಟಕ, ಮಣಿಪುರ, ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾ, ರಾಜಸ್ಥಾನ, ಗುಜರಾತ್​, ತಮಿಳುನಾಡು ಇನ್ನೂ ಮೊದಲಾದ ರಾಜ್ಯಗಳಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ನೋಡುಗರನ್ನು ಮೋಡಿ ಮಾಡಿದ ಕೃಷ್ಣರಾಧೆಯರ ಜೋಡಿ,ಬೆಣ್ಣೆಕದಿಯುವ ಕೃಷ್ಣನ ತುಂಟಾಟ ,ಬಾಲಕೃಷ್ಣನ ವೇಷ ಧರಿಸಿ ಮಿಂಚುವ ಪುಟಾಣಿಗಳು, ಈ ಹಬ್ಬದಂದು ಪ್ರತಿ ಊರಿನಲ್ಲೂ ಮೊಸರಿನ ಮಡಿಕೆ ಒಡೆಯುವ ಸ್ಪರ್ಧೆ ಏರ್ಪಡಿಸುತ್ತಾರೆ. ಕೃಷ್ಣ ವೇಷದ ಸ್ಪರ್ಧೆಗಳು ನಡೆಯುತ್ತವೆ. ಹೀಗಾಗಿ, ಕೃಷ್ಣ ಜನ್ಮಾಷ್ಟಮಿ ಕೇವಲ ಧಾರ್ಮಿಕ ಆಚರಣೆಯಾಗಿರದೆ ಮನರಂಜನೆ ಸಿಗುವ ಹಬ್ಬವೂ ಹೌದು. ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕೂಡ ಒಂದು.

ಇನ್ನು ಸ್ಯಾಂಡಲ್ ವುಡ್ ನ ತಾರೆಯರು ತಮ್ಮ ಮುದ್ದು ಮಕ್ಕಳಿಗೆ ಶ್ರೀ ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದ್ದಾರೆ , ತಮ್ಮ ಮುದ್ದು ಮಕ್ಕಳ ಫೋಟೋ ಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಶ್‌ ಮನೆ ಪುಟ್ಟ ಕೃಷ್ಣ

ತೆರೆ ಮೇಲಿರಲಿ ಅಥವಾ ತೆರೆ ಹಿಂದಿರಲಿ ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾಗೆ ಮೊದಲ ಸ್ಥಾನ ಮೀಸಲಿದೆ , ಈಗ ಒಂದು ಮುದ್ದಾದ ಹೆಣ್ಣು ಮಗುವಿಗೆ ತಂದೆತಾಯಿಯಾಗಿರುವ ಯಶ್ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

 

 

ನಟ ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ದಂಪತಿ, ತಮ್ಮ ಮಗಳಿಗೆ ಯಾವ ಹೆಸರಿಡುತ್ತಾರೋ ಎಂಬ ಕುತೂಹಲ ಅಭಿಮಾನಿಗಳಿಗೆ ಇತ್ತು. ಸ್ವತಃ ಅಭಿಮಾನಿಗಳೇ ಸಾಕಷ್ಟು ಹೆಸರುಗಳನ್ನು ಸೂಚಿಸಿದ್ದರು.ಯಶ್‌ ದಂಪತಿ ಮಗಳಿಗೆ ನಾಮಕರಣ ಮಾಡಿದ್ದು, ತಮ್ಮ ಮುದ್ದಾದ ಮಗುವಿಗೆ “ಐರಾ’ ಎಂದು ಹೆಸರಿಟ್ಟಿದ್ದಾರೆ. ಐರಾ ಎಂದರೆ ಗೌರವಾನ್ವಿತ ಎಂದು ಅರ್ಥವಿದೆ. ವಿಭಿನ್ನ ಹೆಸರು ಇರಿಸುವ ಮೂಲಕ ಯಶ್‌ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಕೃಷ್ಣನ ಹಬ್ಬದ ದಿನ ತಮ್ಮ ಮುದ್ದು ಮಗಳನ್ನು ಪುಟ್ಟ ಕೃಷ್ಣನಂತೆ ಅಲಂಕರಿಸಿ ಫೋಟೋ ಹಂಚಿಕೊಂಡಿದ್ದರು ನಟಿ ರಾಧಿಕಾ
ಫೋಟೋದಲ್ಲಿ ಐರಾ ಮುದ್ದಾಗಿ ನಕ್ಕಿದ್ದಾಳೆ ಮಗಳ ಫೋಟೋವನ್ನು ರಾಧಿಕಾ ಅವರು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ‘ನಮ್ಮ ಪುಟ್ಟ ಕೃಷ್ಣ’ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ.

 

 

ಒಟ್ಟಿನಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದ ಬಣ್ಣದ ಜಗತ್ತಿನಲ್ಲಿಕೊಂಡೆ ವರ್ಷಾಂತರಗಳ ಕಾಲ ಪ್ರೀತಿಯನ್ನ ಕಾಪಿಟ್ಟುಕೊಂಡು ಮದುವೆಯಾಗಿ ಈಗ ಮಗುವನ್ನು ಪಡೆದ ಈ ಜೋಡಿ ನೂರ್ಕಾಲ ಸುಖವಾಗಿ ಬಾಳಲಿ, ಬದುಕು ಬಂಗಾರವಾಗಿರಲಿ.

ಅಜೇಯ್ ರಾವ್ ಮನೆ ಪುಟ್ಟ ಕೃಷ್ಣ

ಕೃಷ್ಣಾ ಖ್ಯಾತಿಯ ನಟ ಅಜೇಯ್ ರಾವ್ ಇದೀಗ ಸಂತಸದಲ್ಲಿ ತೇಲಾಡುತ್ತಿದ್ದಾರೆ.. ನವೆಂಬರ್23 ರಂದು ಅಜಯ್ ರಾವ್ ಪತ್ನಿ ಸ್ವಪ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಜಯ್​​ ಮುದ್ದು ಮಗಳಾದ ಚೆರಿಶ್ಮಳಿಗೆ 6 ತಿಂಗಳಾದ ನಂತರ ತಮ್ಮ ಮಗಳ ಫೋಟೋವನ್ನು ಅಜಯ್ ರಾವ್ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು.

 

 

ಕೃಷ್ಣನ ಹಬ್ಬದಂದು ತಮ್ಮ ಮಗಳಿಗೆ ಸಾಂಪ್ರದಾಯಿಕ ಉಡುಪು ಹಾಕಿದ್ದಾರೆ. ಸ್ವಪ್ನ ಅವರು ಚರಿಷ್ಮಾ ಆಕೆಯ ಫೋಟೋ ಹಾಗೂ ಫ್ಯಾಮಿಲಿ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಸ್ವಪ್ನ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಫಿದಾ ಆಗಿದ್ದು ವೈರಲ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 

 

ಅಂದಹಾಗೆ, ಅಜಯ್ ಹಾಗೂ ಸ್ವಪ್ನ ದಂಪತಿಯ ವಿವಾಹ 2014ರ ಡಿಸೆಂಬರ್ 18 ರಂದು ಕೊಪ್ಪಳದ ದೇವಸ್ಥಾನದಲ್ಲಿ ನಡೆದಿತ್ತು. ಸ್ವಪ್ನ ಕೂಡ ಅಜಯ್ ಅವರ ಹುಟ್ಟೂರಾದ ಹೊಸಪೇಟೆಯವರೇ ಆಗಿದ್ದಾರೆ. ಇಬ್ಬರೂ ಪ್ರೀತಿ ನಂತರ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು.

 

 

ಶ್ವೇತಾ ಶ್ರೀವತ್ಸವ ಮನೆ ಪುಟ್ಟ ವರಮಹಾಲಕ್ಷ್ಮಿ

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ’ ಖ್ಯಾತಿಯ ನಟಿ ಶ್ವೇತಾ ಶ್ರೀವಾತ್ಸವ್ ಅವರು ಕೆಲವು ತಿಂಗಳ ಹಿಂದೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಚಿತ್ರರಂಗದಿಂದ ಸ್ವಲ್ಪ ಕಾಲ ದೂರ ಉಳಿದಿರುವ ತಮ್ಮ ಮುದ್ದು ಮಗಳ ಜೊತೆ ಕಾಲ ಕಳೆಯುತ್ತಿದ್ದಾರೆ.

ನಟಿ ಶ್ವೇತಾ ಶ್ರೀವತ್ಸವ ತಮ್ಮ ಮಗಳಿಗೆ ತನ್ನ (ಶ್ವೇತಾ) ಮತ್ತು ತಮ್ಮ ಪತಿಯ(ಅಮಿತ್) ಅವರ ಹೆಸರನ್ನು ಜೋಡಿಸಿ ಸುಂದರವಾದ ಹೆಸರನ್ನು ಇಟ್ಟಿದ್ದಾರೆ. ತಮ್ಮ ಮುದ್ದು ಮಗಳಿಗೆ ‘ಅಶ್ಮಿತಾ’ ಎಂದು ನಾಮಕರಣ ಮಾಡಿದ್ದಾರೆ. ಅಶ್ಮಿತಾ ಜೊತೆ ಊರು ಸುತ್ತಾಡುತ್ತಿರುವ ಶ್ವೇತಾ ಶ್ರೀವತ್ಸವ ತಮ್ಮ ತಾಯ್ತನದ ಘಳಿಗೆಯನ್ನು ಎಂಜಾಯ್ ಮಾಡ್ತಿದ್ದು ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

 

 

ಕೃಷ್ಣನ ಹಬ್ಬದಂದು ತಮ್ಮ ಮಗಳಿಗೆ ಸಾಂಪ್ರದಾಯಿಕ ಉಡುಪು ಹಾಕಿದ್ದಾರೆ. ಮಗಳ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top