fbpx
ಸಿನಿಮಾ

ಕನ್ನಡಕ್ಕೆ ಬಂದಳು ಕಣ್ಣೊಡೆದು ಫೇಮಸ್ ಆದ ಪ್ರಿಯಾ ವಾರಿಯರ್

ಒರು ಅಡಾರ್ ಲವ್ ಚಿತ್ರ ಹಾಡಿನಲ್ಲಿ ಮಾದಕವಾಗಿ ಹುಬ್ಬು ಹಾರಿಸುತ್ತಾ ಎಂಥವರೂ ಹುಬ್ಬೇರಿಸುವಂಥಾ ಚಮಾತ್ಕಾರ ಸೃಷ್ಟಿಸಿದ್ದವಳು ಪ್ರಿಯಾ ವಾರಿಯರ್. ಆಗ ಒಂದೆರಡು ವಾರಗಳ ಕಾಲ ಪ್ರತಿಯೊಬ್ಬರ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲೂ ಪ್ರಿಯಾ ವಾರಿಯರ್‌ಳದ್ದೇ ಸದ್ದು. ಒಂದೇ ಒಂದು ಹಾಡಿನಿಂದ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದಿರೋ ಈ ಹುಡುಗಿಗೆ ಸಿಕ್ಕ ಭಾರಿ ಜನಪ್ರಿಯತೆ ಎಷ್ಟೋ ಜನರ ಹೊಟ್ಟೆಯಲ್ಲಿ ಕಿಚ್ಚು ಹಚ್ಚಿತ್ತು.

 

 

ಹುಬ್ಬು ಹಾರಿಸೋ ವೀಡಿಯೋ ಮೂಲಕ ದೇಶಾದಂತ ಪಡ್ಡೆಗಳನ್ನು ಬಿಸಿಯೇರಿಸುತ್ತಲೇ ಏಕಾ ಏಕಿ ಸ್ಟಾರ್ ಆದವಳು ಪ್ರಿಯಾ ವಾರಿಯರ್. ಒಂದೇ ದಿನದಲ್ಲಿ ಭಾರೀ ಪ್ರಚಾರ ಪಡೆದು ನ್ಯಾಷನಲ್ ಕ್ರಶ್ ಅಂತ ಬಿಂಬಿತಳಾಗಿದ್ದಳು.. ಕೇವಲ ಇಪ್ಪತ್ತು ಸೆಕೆಂಡುಗಳ ವೀಡಿಯೋ ಮೂಲಕವೇ ಇಡೀ ದೇಶವನ್ನೇ ಆವರಿಸಿಕೊಂಡಿದ್ದಳು.. ಇಂಥಾ ಪ್ರಿಯಾ ವಾರಿಯರ್ ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟಸೆಲೆಬ್ರಿಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾಳೆ.

‘ನಲವತ್ತು ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕರ ಮಗ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದು ಗೊತ್ತಿರುವ ವಿಷಯವೇ ‘ಪಡ್ಡೆ ಹುಲಿ’ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದು ಆಗಿ ಒಳ್ಳೆಯ ನಟನಾಗುವ ಎಲ್ಲ ಲಕ್ಷಣಗಳು ಇವೆ ಎಂದು ತೋರಿಸಿಕೊಟ್ಟಿದ್ದರು ಇದೀಗ ಮಲಯಾಳಂನ ವಿಕೆ ಪ್ರಕಾಶ್ ನಿರ್ದೇಶನದಲ್ಲಿ ಶ್ರೇಯಸ್ ಮಂಜು ಮುಂಬರುವ ಚಿತ್ರವು ಮೂಡಿಬರಲಿದೆ. ಇದೀಗ ಬಂದ ಸುದ್ದಿ ಏನೆಂದರೆ ಈ ಚಿತ್ರಕ್ಕೆ ನಾಯಕಿಯಾಗಿ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಈ ಚಿತ್ರಕ್ಕೆ ನಾಯಕಿಯಾಗಿ ಅಭಿನಯಿಸಲಿದ್ದಾರೆ .ಈ ಚಿತ್ರಕ್ಕೆ ‘ವಿಷ್ಣುಪ್ರಿಯ’ ಎಂಬ ಹೆಸರು ಇಡಲಾಗಿದೆ. ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂಬುದು ವಿಶೇಷ.

 

 

ಪಕ್ಕ ಪ್ರೇಮ ಕಥನ ವಿರುವ ಈ ಚಿತ್ರದಲ್ಲಿ ಕಾಲೇಜು ಲವ್ ಸ್ಟಾರ್ ಇರಲಿದೆಯಂತೆ. ಕಾಲೇಜು ಹುಡುಗನ ಪಾತ್ರದಲ್ಲಿ ಹೇಗೆ ಅಭಿನಯಿಸಲಿದ್ದಾರೆ ಎಂದು ಇನ್ನಷ್ಟೇ ನೋಡಬೇಕಾಗಿದೆ. ಬಹಳ ವರ್ಷದಿಂದ ಚಿತ್ರ ಮಾಡಬೇಕೆಂದು ಹಂಬಲಿಸುತ್ತಿದ್ದ ಶ್ರೇಯಸ್ ಪಡ್ಡೆಹುಲಿ ನಂತರ ಈ ಚಿತ್ರದಲ್ಲಿ ಹೇಗೆ ರೀತಿ ಘರ್ಜಿಸಲಿದ್ದಾರೆ ಕಾಡು ನೋಡಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top