fbpx
ಸಮಾಚಾರ

ನಿಮಗಿದು ಗೊತ್ತೇ? ಸುದೀಪ್ ನಟನೆಯ ಸಿನಿಮಾಕ್ಕಾಗಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು ಅರುಣ್​​ ಜೇಟ್ಲಿ!

ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆನ್ನೆ ನವದೆಹಲಿಯಲ್ಲಿ ನಡೆಯಿತು. ಶನಿವಾರ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ಅರುಣ್ ಜೇಟ್ಲಿ ಅವರು ನೆನ್ನೆ ಪಂಚಭೂತಗಳಲ್ಲಿ ಲೀನವಾದರು. ಈ ಮಧ್ಯೆ ಜೇಟ್ಲಿಯವರ ಜೊತೆಗಿನ ಹಳೆಯ ನೆನಪುಗಳು ಒಂದೊಂದಾಗಿಯೇ ಬಿಚ್ಚಿಕೊಳ್ಳುತ್ತಿದ್ದು ನಟ ಸುದೀಪ್ ಮತ್ತು ಅಮಿತಾಬ್ ನಟಿಸಿದ್ದ ಹಿಂದಿ ಸಿನಿಮಾವೊಂದರ ವಿಚಾರವಾಗಿ ಜೇಟ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದನ್ನು ಹಲವರು ಮೆಲುಕು ಹಾಕುತ್ತಿದ್ದಾರೆ.

 

 

2009ರಲ್ಲಿ ಸುದೀಪ್ ಮತ್ತು ಅಮಿತಾಬ್ ಬಚ್ಚನ್ ಮುಖ್ಯಭೂಮಿಕೆಯಲ್ಲಿ ‘ರಣ್​’ ಎಂಬ ಹಿಂದಿ ಸಿನಿಮಾ ಬಂದಿತ್ತು. ಈ ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿದ್ದರು. ಚಿತ್ರದ ಮೊದಲ ಪ್ರೋಮೋ ವಿವಾದಕ್ಕೆ ಸಿಲುಕಿತ್ತು. ಇದಕ್ಕೆ ಕಾರಣ ಪ್ರೋಮೋದಲ್ಲಿದ್ದ ಹಾಡು. ಹೌದು, ಪ್ರೋಮೋನಾ ಹಾಡಿನಲ್ಲಿ ರಾಷ್ಟ್ರಗೀತೆಯ ಸಾಲುಗಳನ್ನು ಬದಲಾಯಿಸಿ ‘ಜನ ಗಣ ರಣ್​’ ಎಂದು ಹಾಡಲಾಗಿತ್ತು. ಬಳಿಕ ಸೆನ್ಸಾರ್ ಮಂಡಳಿಯು ನಿರ್ದೇಶಕ ರಾಮ್​ ಗೋಪಾಲ್​ ವರ್ಮಾರನ್ನು ಬ್ಯಾನ್​ ಮಾಡಿತ್ತು.

ಆ ವೇಳೆ ಇದನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಿದ್ದ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರು ಆಗ ವಕೀಲಿ ವೃತ್ತಿಯಲ್ಲಿ ತಮ್ಮದೆ ಆದ ಹೆಸರುಗಳಿಸಿದ್ದ ಅರುಣ್​ ಜೇಟ್ಲಿಯವರನ್ನು ಸಂಪರ್ಕಿಸಿದ್ದರು. ನಂತರ ಅರುಣ್​ ಜೇಟ್ಲಿ ಈ ಕೇಸಿನ ವಕಾಲತ್ತು ವಹಿಸಿಕೊಂಡು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಜೇಟ್ಲಿಯವರಿಗೆ ಗೆಲುವು ಸಿಗಲಿಲ್ಲವಾದರೂ, ಕೋರ್ಟ್​ನಲ್ಲಿ ಅವರು ಮಂಡಿಸಿದ್ದ ವಾದ ವ್ಯಾಪಕ ಚರ್ಚೆ ಹಾಗೂ ಮೆಚ್ಚುಗೆಗೆ ಕಾರಣವಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top