fbpx
ಸಮಾಚಾರ

ಕಾಶ್ಮೀರದಲ್ಲಿ ಜನರ ಮೇಲಿನ ನಿರ್ಬಂಧಕ್ಕೆ ಬೇಸತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಕಾಶ್ಮೀರಿ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ಬೇಸತ್ತು ಕೇರಳ ಮೂಲದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ರಾಜೀನಾಮೆ ನೀಡಿದ್ದಾರೆ.

2012ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದ 33 ವರ್ಷದ ಕಣ್ಣನ್ ಗೋಪಿನಾಥನ್ ಅವರನ್ನು ದಾದ್ರಾ ಮತ್ತು ನಗರ ಹವೇಲಿಯ ಕೇಂದ್ರ ಪ್ರಾಂತ್ಯದಲ್ಲಿ ವಿದ್ಯುತ್ ಮತ್ತು ಸಾಂಪ್ರದಾಯಿಕವಲ್ಲದ ಇಂಧನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಈ ವೇಳೆ ನಷ್ಟದಲ್ಲಿದ್ದ ಸರ್ಕಾರಿ ವಿದ್ಯುತ್ ವಿತರಣಾ ಸಂಸ್ಥೆಯನ್ನು ಲಾಭದಾಯಕ ಸಂಸ್ಥೆಯನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಏಳು ವರ್ಷ ಐಎಎಸ್ ಅಧಿಕಾರಿಯಾಗಿದ್ದ ಗೋಪಿನಾಥನ್ ಆ. 21ರಂದೇ ಕೇಂದ್ರ ಸರ್ಕಾರದ ನಡೆಗೆ ಬೇಸತ್ತು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

“ಜಮ್ಮು ಮತ್ತು ಕಾಶ್ಮೀರದಲ್ಲಿ, ಲಕ್ಷಾಂತರ ಜನರ ಮೂಲಭೂತ ಹಕ್ಕುಗಳನ್ನು 20 ದಿನಗಳವರೆಗೆ ಅಮಾನತುಗೊಳಿಸಲಾಗಿದೆ. ಮತ್ತು ಭಾರತದಲ್ಲಿ ಅನೇಕರಿಗೆ ಇದು ಸರಿಯೆಂದು ತೋರುತ್ತದೆ. ಇದು ಭಾರತದಲ್ಲಿ 2019 ರಲ್ಲಿ ನಡೆಯುತ್ತಿದೆ.370 ನೇ ವಿಧಿ ಅಥವಾ ಅದನ್ನು ರದ್ದುಪಡಿಸುವುದು ಸಮಸ್ಯೆಯಲ್ಲ, ಆದರೆ ಇದಕ್ಕೆ ನಾಗರಿಕರು ಪ್ರತಿಕ್ರಿಯಿಸುವ ಹಕ್ಕನ್ನು ನಿರಾಕರಿಸುವುದು ಪ್ರಮುಖ ವಿಷಯವಾಗಿದೆ. ಅವರು ಈ ಕ್ರಮವನ್ನು ಸ್ವಾಗತಿಸಬಹುದು ಅಥವಾ ಪ್ರತಿಭಟಿಸಬಹುದು, ಅದು ಅವರ ಹಕ್ಕು “ಎಂದು ಗೋಪಿನಾಥನ್ ತಿಳಿಸಿದರು, ಈ ವಿಷಯವು ತಮಗೆ ರಾಜೀನಾಮೆ ನೀಡುವಷ್ಟು ಆಘಾತಗೊಳಿಸಿದೆ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top