fbpx
ಸಮಾಚಾರ

ಮ್ಯಾನ್​ vs ವೈಲ್ಡ್​​ನಲ್ಲಿ ಗ್ರಿಲ್ಸ್’ಗೆ ಹಿಂದಿ ಹೇಗೆ ಅರ್ಥವಾಯ್ತು? : ರಹಸ್ಯ ಬಿಚ್ಚಿಟ್ಟ ಮೋದಿ.

ಡಿಸ್ಕವರಿ ವಾಹಿನಿಯಲ್ಲಿ ಬೇರ್​ ಗ್ರಿಲ್ಸ್​​ ನಡೆಸಿಕೊಡುವ ‘ಮ್ಯಾನ್​ vs ವೈಲ್ಡ್​​’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಈ ವೇಳೆ ಗ್ರಿಲ್ಸ್​​ ಜೊತೆ ಸಂಭಾಷಣೆ ನಡೆಸಲು ಮೋದಿ ಹಿಂದಿ ಭಾಷೆ ಬಳಕೆ ಮಾಡಿದ್ದರು. ಅಚ್ಚರಿ ಎಂದರೆ, ಗ್ರಿಲ್ಸ್​​ಗೆ ಹಿಂದಿ ಬರುವುದಿಲ್ಲ. ಆದಾಗ್ಯೂ, ಮೋದಿ ಮಾತನ್ನು ಅರ್ಥೈಸಿಕೊಂಡು ಗ್ರಿಲ್​ ಮಾತನಾಡುತ್ತಿದ್ದರು. ಇದು ಹೇಗೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿತ್ತು. ಇದಕ್ಕೆ ಪ್ರಧಾನಿ ‘ಮನ್​ ಕಿ ಬಾತ್​’ನಲ್ಲಿ ಉತ್ತರ ನೀಡಿದ್ದಾರೆ.

ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದದಿಂದಾಗಿ ನಾನು ವಿಶ್ವದ ಯುವ ಜನತೆ ಜೊತೆ ಸಂಪರ್ಕ ಸಾಧಿಸಿದೆ. ನನ್ನೊಂದಿಗೆ ಎಲ್ಲರೂ ಯೋಗದ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಇದೀಗ ವನ್ಯಜೀವಿ ಹಾಗೂ ಜಾಗತಿಕ ತಾಪಮಾನ ಬದಲಾವಣೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು. ಬೇರ್ ಗ್ರಿಲ್ಸ್ ಜೊತೆ ನೀವು ಹೇಗೆ ಮಾತುಕತೆ ನಡೆಸಿದಿರಿ ಎಂದು ಹಲವರು ನನ್ನನ್ನು ಪ್ರಶ್ನಿಸಿದ್ದು, ನಾನು ಅವರೊಂದಿಗೆ ಮಾತನಾಡಲು ತಂತ್ರಜ್ಞಾನ ನೆರವಿಗೆ ಬಂತು ಎಂದು ಮೋದಿ ಹೇಳಿದ್ದಾರೆ.

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ತಮ್ಮಿಬ್ಬರ ನಡುವಿನ ಸಂಭಾಷಣೆಯಲ್ಲಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗಿದೆ ಎಂದು ಅವರು ಹೇಳಿದರು.”ನಾನು ಮಾತನಾಡುವಾಗಲೆಲ್ಲಾ ಅದನ್ನು ತಕ್ಷಣ ಇಂಗ್ಲಿಷ್‌ಗೆ ಅನುವಾದಿಸಲಾಯಿತು. ಬಿಯರ್ ಗ್ರಿಲ್ಸ್ ಅವರ ಕಿವಿಯಲ್ಲಿ ಸಣ್ಣ ಕಾರ್ಡ್‌ಲೆಸ್ ವಾದ್ಯವಿತ್ತು. ಹಾಗಾಗಿ ನಾನು ಹಿಂದಿಯಲ್ಲಿ ಮಾತನಾಡುತ್ತಿದ್ದೆ ಮತ್ತು ಅವರು ಅದನ್ನು ಇಂಗ್ಲಿಷ್‌ನಲ್ಲಿ ಕೇಳುತ್ತಿದ್ದರು…ಇದರಿಂದಾಗಿ ಸಂವಹನವು ತುಂಬಾ ಸುಲಭವಾಯಿತು. ಇದು ತಂತ್ರಜ್ಞಾನದ ಅದ್ಬುತ ಅಂಶವಾಗಿದೆ ಎಂದು ಪ್ರಧಾನಿ ವಿವರಿಸಿದರು.

”ಕೆಲವರು ಕುತೂಹಲದಿಂದ ಹಲವು ಬಾರಿ ನನ್ನನ್ನು ಈ ಕುರಿತು ಪ್ರಶ್ನಿಸಿದ್ದರು. ”ಬೇರ್‌ ಗ್ರಿಲ್ಸ್‌ಗೆ ಹಿಂದಿ ಬರುತ್ತಿತ್ತಾ? ನಿಮ್ಮ ಮಾತನ್ನು ಅವರು ಹೇಗೆ ಅರ್ಥಮಾಡಿಕೊಳ್ಳುತ್ತಿದ್ದರು? ಆ ಎಪಿಸೋಡ್‌ ಅನ್ನು ನಂತರ ಎಡಿಟ್‌ ಮಾಡಲಾಯಿತಾ? ಎಪಿಸೋಡ್‌ಗಾಗಿ ಎಷ್ಟು ಬಾರಿ ಶೂಟಿಂಗ್‌ ನಡೆದಿತ್ತು? ಹೀಗೆ ಹತ್ತಾರು ಪ್ರಶ್ನೆಗಳು ಬಂದಿವೆ. ಆದರೆ, ಇದರಲ್ಲಿ ರಹಸ್ಯವಾಗಿಡುವಂಥದ್ದು ಏನೂ ಇಲ್ಲ. ಎಲ್ಲವೂ ವಾಸ್ತವ. ನನ್ನ ಮತ್ತು ಬೇರ್‌ ಗ್ರಿಲ್ಸ್‌ ನಡುವಿನ ಸಂಭಾಷಣೆಗೆ ತಂತ್ರಜ್ಞಾನವನ್ನು ಬಹುವಾಗಿ ಬಳಕೆ ಮಾಡಲಾಯಿತಷ್ಟೇ,” ಎಂದು ಮೋದಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top