fbpx
ಸಮಾಚಾರ

“ಯಾರು ಏನೇ ಹೇಳಿದರೂ ನಾನು ಅವರನ್ನು ಪ್ರೀತಿಸುತ್ತೇನೆ” ಕಿರಿಕ್ ಹುಡುಗಿ ರಶ್ಮಿಕಾ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಧ್ವನಿಯೆತ್ತಿದ ವಿಚಾರಗಳೇ ಹೆಚ್ಚು ರಾರಾಜಿಸುತ್ತಿದೆ. ತಮಿಳು ಯುಟ್ಯೂಬ್ ಚಾನೆಲ್ ನವರು ಕನ್ನಡ ನಿಮಗೆ ಸುಲಭ ಅಲ್ಲವೇ ಎಂದು ಪ್ರಶ್ನೆಯನ್ನು ಕೇಳಿದ್ದರು. ಆಗ ರಶ್ಮಿಕಾ ನನಗೆ ಕನ್ನಡ ಕಷ್ಟ ಎಂದು ಉತ್ತರಿಸುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ವಿಚಾರವಾಗಿ ಒಕ್ಕೊರಲಿನಿಂದ ರಶ್ಮಿಕಾ ಅವರನ್ನು ಕನ್ನಡ ಸಿನಿಮಾಗಳಿಂದ ಬ್ಯಾನ್ ಮಾಡಬೇಕೆಂದು ಕನ್ನಡಿಗರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮಧ್ಯೆ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.

 

 

 

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗಳಿಗೆ ತಮ್ಮನ್ನು ಪ್ರಶ್ನೆ ಕೇಳುವಂತೆ ಇನ್‍ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿಕೊಂಡಿದ್ದರು. ಈ ವೇಳೆ ಅಭಿಮಾನಿಯೊಬ್ಬರ ಪ್ರಶ್ನೆಗೆ ರಶ್ಮಿಕಾ, “ಯಾರು ಏನೇ ಹೇಳಿದರೂ ನಾನು ಅವರನ್ನು ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ.

ನಿನ್ನೆ ಸೋಷಿಯಲ್​ ಮೀಡಿಯಾ ಇನ್​​ಸ್ಟಾಗ್ರಾಮ್​ ಮೂಲಕ ರಶ್ಮಿಕಾ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸಾಕಷ್ಟು ಅಭಿಮಾನಿಗಳು ರಶ್ಮಿಕಾ ಕುರಿತು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ನಡುವೆ ನಿಮ್ಮ ಕನ್ನಡ ಅಭಿಮಾನಿಗಳನ್ನು ಒಂದು ಪದದಲ್ಲಿ ಬಣ್ಣಿಸಿ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ರಶ್ಮಿಕಾ, “ಯಾರು ಏನೇ ಹೇಳಿದರೂ ನಾನು ಅವರನ್ನು ಪ್ರೀತಿಸುತ್ತೇನೆ” ಎಂದು ಉತ್ತರಿಸಿದ್ದಾರೆ. ಸದ್ಯ ರಶ್ಮಿಕಾ ಉತ್ತರ ನೀಡಿರುವ ಸ್ಕ್ರೀನ್‍ಶಾಟ್ ಸಾಕಷ್ಟು ವೈರಲ್ ಆಗುತ್ತಿದೆ.

ಇನ್ನು ನಟ ವಿಜಯದೇವರಕೊಂಡ ಬಗ್ಗೆ ಕೇಳಲಾಗಿರುವ ಪ್ರಶ್ನೆಗೆ “ಅವರು ನನಗೆ ಕೇವಲ ಗೆಳೆಯ ಮಾತ್ರ. ಇದಕ್ಕೆ ಮೀರಿದ್ದು ಇನ್ನೇನು ಇಲ್ಲ” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top