fbpx
ಸಮಾಚಾರ

ಮೋದಿಗೆ ಪುರಸ್ಕಾರ, ಇಮ್ರಾನ್ ಖಾನ್‍ಗೆ ಡ್ರೈವರ್ ಪಟ್ಟ: ಪಾಕ್​​​ ಸಂಸದೆಯಿಂದಲೇ ಟ್ರೋಲ್.

ಪ್ರಧಾನಿ ನರೇಂದ್ರ ಮೋದಿಯವರಿಗೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್ ಆಫ್ ಜಯೀದ್’ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೋದಿಯವರ ಶ್ಲಾಘನೀಯ ಪ್ರಯತ್ನವನ್ನು ಮೆಚ್ಚಿ ಶನಿವಾರ ಈ ಅತ್ಯುನ್ನತ ಗೌರವ ನೀಡಿ ಸನ್ಮಾನಿಸಲಾಗಿದೆ.

ಈ ಮಧ್ಯೆ ಇದೇ ವಿಚಾರವಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಟ್ರೊಲ್ ಗೆ ಆಹಾರವಾಗಿದ್ದಾರೆ.. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪಾಕ್ ನೆಟ್ಟಿಗರೇ ‘ಬೆಸ್ಟ್ ಡ್ರೈವರ್’ ಪಟ್ಟ ಕೊಟ್ಟು ಅಪಹಾಸ್ಯ ಮಾಡಿದ್ದಾರೆ.

 

 

ಕಳೆದ ಫೆಬ್ರವರಿಯಲ್ಲಿ ಸೌದಿ ಯುವರಾಜ ಮೊಹಮದ್​ ಬಿನ್​ ಸಲ್ಮಾನ್​ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶಿಷ್ಟಾಚಾರ ಮುರಿದಿದ್ದ ಇಮ್ರಾನ್​ ಖಾನ್​ ವಿಮಾನ ನಿಲ್ದಾಣದಿಂದ ಪ್ರಧಾನಿ ನಿವಾಸದವರೆಗೂ ಸೌದಿ ಯುವರಾಜ ಇದ್ದ ಕಾರನ್ನು ತಾವೇ ಚಲಾಯಿಸಿಕೊಂಡು ಬಂದಿದ್ದರು. ಈ ಘಟನೆ ಕುರಿತು ಸಂಸದೆಯೊಬ್ಬರು ಪಾಕ್​ ಸಂಸತ್ತಿನಲ್ಲಿ ಪ್ರಸ್ತಾಪಿಸಿ, ಇಮ್ರಾನ್​ ಖಾನ್​ ವಾಹನ ಚಾಲಕರಾಗಿದ್ದಾರೆ ಮತ್ತು ಪ್ರತಿ ಬಾರಿ ಅವರು 5 ಸ್ಟಾರ್​ ರೇಟಿಂಗ್​ ಬಯಸುತ್ತಾರೆ ಎಂದು ಕಾಲೆಳೆದಿದ್ದರು.

 

 

ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ. ಗವರ್ನರ್ ಹೌಸ್ ಅನ್ನು ಮ್ಯೂಸಿಂ ಮಾಡುತ್ತೇನೆ ಎಂದು ಹೇಳುವ ಇಮ್ರಾನ್ ಖಾನ್ ಅವರು ಉಬರ್ ಕಂಪನಿಯ ಕಾರು ಚಾಲಕರಾಗಿದ್ದಾರೆ. ಪ್ರತಿ ಸವಾರಿಯ ಬಳಿಕ ಫೈವ್ ಸ್ಟಾರ್ ನೀಡುವಂತೆ ಕೇಳುತ್ತಿದ್ದಾರೆ ಎಂದು ಪಾಕ್ ಸಂಸದೆ ಕಿಡಿಕಾರಿದ್ದರು. ಈ ವಿಡಿಯೋವನ್ನು ಹಾಕಿ ನೆಟ್ಟಿಗರು ಇಮ್ರಾನ್ ಖಾನ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲ ಹರಿದಾಡುತ್ತಿದೆ. ಈಗ ಅದಕ್ಕೆ ನರೇಂದ್ರ ಮೋದಿ ಅವರಿಗೆ ಪ್ರಶಸ್ತಿ ಸಂದಿರುವುದನ್ನು ಹೋಲಿಕೆ ಮಾಡುತ್ತಿದ್ದು, ಭಾರತದ ಪ್ರಧಾನಿಗೆ ಯುಎಇನ ಅತ್ಯುನ್ನತ ನಾಗರಿಕ ಗೌರವ ಸಂದಿದ್ದರೆ ಇಮ್ರಾನ್​ ಖಾನ್​ಗೆ ಸೌದಿಯ ಯುವರಾಜನ ಬೆಸ್ಟ್​ ಡ್ರೈವರ್​ ಪ್ರಶಸ್ತಿ ಸಂದಿದೆ ಎಂದು ಟ್ರೋಲ್​ ಮಾಡುತ್ತಿದ್ದಾರೆ.

 

 

ಝಾಯೆದ್ ಮೆಡಲ್ ಯಾರಿಗೆ ನೀಡುತ್ತಾರೆ?:
ಸಂಯುಕ್ತ ಅರಬ್ ಸಂಸ್ಥಾನವು ಪ್ರತಿ ವರ್ಷವೂ ಝಾಯೆದ್ ಮೆಡಲ್ ಅನ್ನು ರಾಜರು, ಅಧ್ಯಕ್ಷರು ಹಾಗೂ ರಾಜ್ಯದ ಮುಖ್ಯಸ್ಥರಿಗೆ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು 1995ರಲ್ಲಿ ಮೊದಲ ಬಾರಿ ಜಪಾನ್ ಯುವರಾಜ ನರುಹಿಟೊ ಅವರಿಗೆ ನೀಡಲಾಗಿತ್ತು. 2007ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, 2018ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರಿಗೆ ಈ ಗೌರವ ಸಿಕ್ಕಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top