fbpx
ಸಮಾಚಾರ

ಮಿಸ್ ಇಂಡಿಯಾ ಆದ ‘ಮಹಾನಟಿ’ ಕೀರ್ತಿ ಸುರೇಶ್!

‘ಮಹಾನಟಿ’ ಚಿತ್ರದ ಮನೋಜ್ಞ ಅಭಿನಯಕ್ಕೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ನಟಿ ಕೀರ್ತಿ ಸುರೇಶ್ ಅವರಿಗೆ ಈಗ ತುಂಬಾನೇ ಬೇಡಿಕೆ ಇದೆ. ಸಿನಿಮಾ ಕ್ಷೇತ್ರದಲ್ಲೇ ದೊಡ್ಡ ಸಾಧನೆ ಮಾಡಿರುವ ಕೀರ್ತಿ ಈಗ ಮಿಸ್ ಇಂಡಿಯಾ ಆಗುವ ತವಕದಲ್ಲಿದ್ದಾರೆ.

 


 

“ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಂಡ ಬಳಿಕ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವುದು ವಾಡಿಕೆ. ಆದರೆ ಕೀರ್ತಿ ಏಕೆ ಸಿನಿಮಾ ಬಿಟ್ಟು ಈಗ ಮಿಸ್ ಇಂಡಿಯಾ ಆಗಲು ಪ್ರಯತ್ನಿಸುತ್ತಿದ್ದಾರೆ” ಎಂದು ಯೋಚಿಸುತ್ತಿದ್ದೀರಾ? ಗೊಂದಲ ಬೇಡ. ಅವರು ಯಾವುದೇ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿಲ್ಲ. ಬದಲಿಗೆ, ಅವರು ನಟಿಸಲಿರುವ ಹೊಸ ಚಿತ್ರಕ್ಕೆ ‘ಮಿಸ್ ಇಂಡಿಯಾ’ ಎಂದು ಶೀರ್ಷಿಕೆ ಫಿಕ್ಸ್ ಆಗಿದೆ.

ಮಿಸ್​ ಇಂಡಿಯಾದಲ್ಲಿ ಜಗಪತಿ ಬಾಬು, ನವೀನ್​ ಚಂದ್ರ, ರಾಜೇಂದ್ರ ಪ್ರಸಾದ್, ನರೇಶ್​ ಕೂಡ ಅಭಿನಯಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ, ಟ್ರೈಲರ್​ ಬಿಡುಗಡೆಯಾಗಿದ್ದು ನಟಿ ಕೀರ್ತಿ ಸುರೇಶ್​ಗೆ ಮೆಚ್ಚುಗೆ ಪೂರ ಹರಿದು ಬರುತ್ತಿದೆ. ಹೊಸ ನಿರ್ದೇಶಕ ನರೇಂದ್ರ ನಾಥ್ ‘ಮಿಸ್ ಇಂಡಿಯಾ’ಗೆ ಆಕ್ಷನ್ ಕಟ್ ಹೇಳಲಿದ್ದಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top