fbpx
ಸಮಾಚಾರ

ರಾಬರ್ಟ್ ಚಿತ್ರಕ್ಕಾಗಿ ಬಂದಳು ತೆಲುಗಿನ ಹುಡುಗಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ‘ರಾಬರ್ಟ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದರ್ಶನ್ ಸಿನಿಮಾ ಅಂದರೆ ಸಾಕು ಅವರಿಗೆ ನಾಯಕಿಯಾಗಿ ಯಾರು ಬರುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಇದೀಗ ಅವರ ಕುತೂಹಲಕ್ಕೆ ತೆರೆಬಿದ್ದಿದ್ದು, ರಾಬರ್ಟ್ ಸಿನಿಮಾದಲ್ಲಿ ದರ್ಶನ್‍ಗೆ ಜೋಡಿಯಾಗಿ ಟಾಲಿವುಡ್ ಬೆಡಗಿ ಆಯ್ಕೆಯಾಗಿದ್ದಾರೆ.

ಟಾಲಿವುಡ್‌ ಖ್ಯಾತ ನಟಿ ಮೆಹರಿನ್ ಫ್ರಿಜಾದ್ ಆಯ್ಕೆ ಆಗಿದ್ದಾರೆ. ಎರಡನೇ ಭಾಗದಲ್ಲಿ ನಾಯಕಿಯ ಪಾತ್ರವಿದ್ದು ಮುಂದಿನ ತಿಂಗಳು ಎರಡನೇ ವಾರದಿಂದ ಶೂಟಿಂಗ್ ಶುರುವಾಗಲಿದೆ ಎಂದು ಸಿನಿ ಮೂಲಗಳಿಂದ ತಿಳಿದು ಬಂದಿದೆ. ಎರಡನೇ ಭಾಗವನ್ನು ಹೃದರಾಬಾದ್‌ನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಈಗಾಗಲೇ ಸೆಟ್‌ ಕೂಡ ನಿರ್ಮಾಣವಾಗಿದ್ದು ಸೆಟ್‌ ಲುಕ್‌ ರಿವೀಲ್ ಮಾಡಿಲ್ಲ.

ಉಳಿದಂತೆ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ವಿರುದ್ಧ ಖ್ಯಾತ ಖಳ ನಟ ಜಗಪತಿ ಬಾಬು ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಜಗಪತಿ ಬಾಬು ಚಿತ್ರತಂಡ ಸೇರಿಕೊಂಡಿದ್ದಾರೆ. ಮೊದಲ ಹಂತದ ಚಿತ್ರೀಕರಣದಲ್ಲೆ ಬಾಗಿಯಾಗಿದ್ದಾರೆ ಜಗಪತಿ ಬಾಬು.

ಉಮಾಪತಿ ಫಿಲ್ಮ್ಸ್ ನಿರ್ಮಾಣದ “ರಾಬರ್ಟ್” ಚಿತ್ರಕ್ಕೆ ಚಂದ್ರಮೌಳಿ ಹಾಗೂ ಕೆ.ಎಲ್. ರಾಜಶೇಖರ್ ಸಂಬಾಷಣೆ ಬರೆಯಲಿದ್ದಾರೆ. ಸುಧಾಕರ್ ಜೈನ್ ಛಾಯಾಗ್ರಹಣ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ, ಕೀಂ ಪ್ರಕಾಶ್ ಸಂಕಲನ ಈ ಚಿತ್ರಕ್ಕಿದ್ದು ಚಿತ್ರಕ್ಕೆ ಸಂಗೀತ ನಿರ್ದೇಶಕರನ್ನು ಇನ್ನೂ ಆಯ್ಕೆ ಮಾಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top