fbpx
ಸಮಾಚಾರ

ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸೃಜನ್ ಲೋಕೇಶ್ ಪುತ್ರ.

ಮಜಾ ಟಾಕೀಸ್ ಖ್ಯಾತಿಯ ಸೃಜನ್‌ ಲೋಕೇಶ್‌ ಪುತ್ರ ಸುಕೃತ್‌ ಲೋಕೇಶ್‌ ಈಗ ಬೆಳ್ಳಿತೆರೆಯಲ್ಲಿ ಕಮಲ್ ಮಾಡಲು ತಯಾರಾಗಿದ್ದಾನೆ. ಸ್ವತಃ ಸೃಜನ್‌ ಲೋಕೇಶ್‌ ಅವರೇ ನಟಿಸಿ, ನಿರ್ಮಾಣ ಮಾಡಿರುವ ‘ಎಲ್ಲಿದ್ದೇ ಇಲ್ಲಿ ತನಕ’ ಸಿನಿಮಾದಲ್ಲಿ ಸುಕೃತ್‌ ಬಾಲ ನಟನಾಗಿ ನಟಿಸಿದ್ದಾರೆ..

ಈ ಚಿತ್ರಕ್ಕೆ ಯುವ ನಿರ್ದೇಶಕ ತೇಜಸ್ವಿ ಆ್ಯಕ್ಷನ್‌ ಕಟ್‌ ಹೇಳಿದ್ದರೂ, ಪುತ್ರ ಸುಕೃತ್‌ ಅಭಿನಯಿಸಿರುವ ಸನ್ನಿವೇಶಗಳನ್ನು ಸೃಜನ್‌ ಲೋಕೇಶ್‌ ಅವರೇ ನಿರ್ದೇಶಿಸಿದ್ದಾರಂತೆ. ಆ ಮಟ್ಟಿಗೆ ‘ಎಲ್ಲಿದ್ದೇ ಇಲ್ಲಿ ತನಕ’ ಸಿನಿಮಾ ಸೃಜನ್‌ ಅವರಿಗೆ ತುಂಬಾ ವಿಶೇಷ ಎನಿಸಿದೆ.

“ನಮ್ಮದು ಕಲಾವಿದರ ಕುಟುಂಬ ತಾತ, ಅಪ್ಪ, ಅಮ್ಮ, ಅಕ್ಕ ಎಲ್ಲರೂ ಸಿನಿಮಾರಂಗದಲ್ಲಿ ಸಾಧನೆ ಮಾಡಿದ್ದಾರೆ. ಹಾಗೆಯೇ ನನ್ನ ಮಕ್ಕಳನ್ನೂ ಚಿತ್ರರಂಗದಲ್ಲಿ ಬೆಳೆಸಬೇಕು, ಅವರು ಕೂಡ ಕಲಾ ಸೇವೆ ಮುಂದುವರೆಸಬೇಕೆನ್ನುವ ಆಸೆಯಿಂದ ಸುಕೃತ್‌ನನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದೇನೆ’ ಎನ್ನುತ್ತಾರೆ ನಟ ಸೃಜನ್‌ ಲೋಕೇಶ್‌.

ಉಳಿದಂತೆ ‘ಎಲ್ಲಿದ್ದೆ ಇಲ್ಲಿತನಕ’ ಚಿತ್ರದಲ್ಲಿ ಸೃಜನ್ ಅವರಿಗೆ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದು ಮಂಡ್ಯ ರಮೇಶ್‌, ತಾರಾ, ತಬಲ ನಾಣಿ, ಸಾಧು ಕೋಕಿಲ, ಅವಿನಾಶ್‌ ತಾರಾಗಣದಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top