fbpx
ಸಮಾಚಾರ

“ಮೊದಲ ಬಾರಿಗೆ ಯಶ್ ಕಣ್ಣೀರಿಟ್ಟಿದ್ದನ್ನು ನೋಡಿದೆ” ರಾಧಿಕಾ ಪಂಡಿತ್

ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮುದ್ದು ಮಗಳು ಐರಾಗೆ ಕಿವಿ ಚುಚ್ಚಿಸಿದ್ದಾರೆ. ಈ ವೇಳೆ ಯಶ್ ಕಣ್ಣೀರು ಹಾಕಿದ್ದ ವಿಷಯವನ್ನು ರಾಧಿಕಾ ಪಂಡಿತ್ ಅವರು ಹಂಚಿಕೊಂಡಿದ್ದಾರೆ.

ಕಿವಿ ಚುಚ್ಚುವಾಗ ಮಕ್ಕಳು ಅಳುವುದನ್ನ ನಿಜಕ್ಕೂ ಯಾವ ಪೋಷಕರು ಕೂಡ ನೋಡೋಕೆ ಇಷ್ಟಪಡಲ್ಲ. ಆ ವಿಪರೀತ ನೋವನ್ನ ಮಕ್ಕಳು ಹೇಗೆ ಸಹಿಸಿಕೊಳ್ತಾರೆ ಅನ್ನೋ ಆತಂಕ ಪೋಷಕರಲ್ಲಿ ಮನೆ ಮಾಡಿರುತ್ತೆ. ಐರಾಗೆ ಕಿವಿ ಚುಚ್ಚುವಾಗಲೂ ಯಶ್‌ ಮತ್ತು ರಾಧಿಕಾ ಪಂಡಿತ್‌ ತುಂಬಾ ಎಮೋಷನಲ್ ಆಗಿದ್ದಾರೆ. ಅಷ್ಟೇ ಅಲ್ಲ, ಯಶ್‌ ಕಣ್ಣೀರಿಟ್ಟಿದ್ದಾರೆ ಅಂತಾ ಸ್ವತಃ ರಾಧಿಕಾ ಪಂಡಿತ್‌ ಬರೆದುಕೊಂಡಿದ್ದಾರೆ.

 

 

ರಾಧಿಕಾ ಅವರು ತಮ್ಮ ಮಗಳು ಐರಾ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ನಾವು ಐರಾಳಿಗೆ ಕಿವಿ ಚುಚ್ಚಿಸಿದ್ದೇವೆ. ಪೋಷಕರಾಗಿ ಈ ಸಂದರ್ಭಕ್ಕೆ ಸಾಕ್ಷಿಯಾಗಲು ನಿಜಕ್ಕೂ ಕಷ್ಟವಾಗುತ್ತದೆ. ಅವಳು ತುಂಬಾ ಅಳುತ್ತಿದ್ದಾಗ ನಮ್ಮ ಹೃದಯ ಒಡೆದು ಹೋದ ಅನುಭವವಾಯಿತು. ನಾನು ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಕಣ್ಣಲ್ಲಿ ನೀರು ನೋಡಿದೆ. ಆಗ ಈ ಸಂಬಂಧ ಎಷ್ಟು ಸುಂದರ ಎಂಬುದು ತಿಳಿಯಿತು. ಸದ್ಯ ಅಪ್ಪ-ಮಗಳು ಕ್ಷೇಮವಾಗಿದ್ದಾರೆ” ಎಂದು ರಾಧಿಕಾ ಪೋಸ್ಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top