fbpx
ಸಮಾಚಾರ

“IAS ಅಧಿಕಾರಿ ಮಣಿವನ್ ಅವರಂತೆಯೇ ಇತರ IAS,IPS ಅಧಿಕಾರಿಗಳು ಸೋಶಿಯಲ್ ಮೀಡಿಯವನ್ನು ಸದುಪಯೋಗಪಡಿಸಿಕೊಳ್ಳಬೇಕು” ಮಾಜಿ ಸಚಿವ ಎಂಬಿ ಪಾಟೀಲ್.

ಧಾರಾಕಾರ ಮಳೆಯಿಂದಾಗಿ ಕಳೆದ ತಿಂಗಳು ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿ ಜನಜೀವನ ತತ್ತರವಾಗಿತ್ತು. ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ನಿರಂತರವಾಗಿ ಮಳೆಯಿಂದ ಭೂ ಕುಸಿತ ಉಂಟಾಗಿ, ಪ್ರಮುಖ ಹೆದ್ದಾರಿಗಳ ಸಂಪರ್ಕ ಕಳೆದು ಹೋಗಿತ್ತು. ಜಲ ಪ್ರಳಯದ ಸ್ಥಿತಿಯಲ್ಲಿ ಸಿಲುಕಿ ತತ್ತರಿಸುತ್ತಿರುವ ಜನತೆಯನ್ನು ಕೈ ಎತ್ತಿ ಹಿಡಿಯಲು ಸಾಮಾಜಿಕ ಜಾಲತಾಣವನ್ನು ಸದುಪಯೋಗ ಮಾಡಿಕೊಂಡ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರ ಬಗ್ಗೆ ಮಾಜಿ ಸಚಿವ ಎಂ ಬಿ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 


ನೆರೆ ಪರಿಹಾರ ಕಾರ್ಯವನ್ನು ಸರ್ಕಾರ ನಿರ್ಲಕ್ಷ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ಐಎಎಸ್ ಅಧಿಕಾರಿ ಮಣಿವಣ್ಣನ್ ಮಾದರಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ “ನೆರೆ ಪರಿಹಾರದ ವಿಚಾರದಲ್ಲಿ ಸರ್ಕಾರದ ನಿರಾಸಕ್ತಿ ನೋಡಿ ನಿಜವಾಗಿಯೂ ಬೇಸರವಾಗಿದೆ. ಈ ವಿಚಾರದಲ್ಲಿ ಸರ್ಕಾರ, ಎಲ್ಲಾ ಡಿಸಿಗಳು ಮತ್ತು ಎಸ್‌ಪಿಗಳನ್ನು ಸ್ವಯಂಪ್ರೇರಣೆಯಿಂದ ತಮ್ಮದೇ ಆದ ಸಾಮಾಜಿಕ ಮಾಧ್ಯಮ ನಿರ್ವಹಣೆಯನ್ನು ಪ್ರಾರಂಭಿಸಲು ಪ್ರೋತ್ಸಾಹಿಸಬೇಕು. ಐಎಎಸ್ ಅಧಿಕಾರಿ ಮಣಿವಣ್ಣನ್ ಮಾದರಿಯಲ್ಲಿ ಕೆಲಸ ಮಾಡಿದರೆ ಗರಿಷ್ಟ ಪ್ರಯೋಜನ ಪಡೆದುಕೊಳ್ಳಬಹುದು” ಎಂದು ಟ್ವೀಟ್ ಮಾಡಿದ್ದಾರೆ.

 

 

ಇದಕ್ಕೆ ಪ್ರತಿಕ್ರಿಯಿಸಿರುವ ಮಣಿವಣ್ಣನ್ “ಡಿಸಿಗಳು ಮತ್ತು ಎಸ್ಪಿಗಳು ಅದೇ ರೀತಿ ಮಾಡಲು ನಾನು ವಿನಂತಿಸುತ್ತಿದ್ದೇನೆ. ನೀವು ಗಮನಿಸಿದಂತೆ, ಇದು ಸಾಮಾನ್ಯ ಮನುಷ್ಯರೊಂದಿಗೆ ಸಂಪರ್ಕ ಸಾಧಿಸುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ. ಭಾರತದಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗೆ ನಾಗರಿಕರು ಸಂವಹನ ನಡೆಸುವುದು ಸುಲಭವಲ್ಲ. ಇದು ಅವರ ಕಚೇರಿಯಲ್ಲಿ ಅಥವಾ ಅವರ ಪ್ರವಾಸ ಸಮಯದಲ್ಲಿ ನಾಗರಿಕರಿಗೆ ಸುಲಭವಾಗಿ ಸಂವಹನ ಮಾಡಲು ಆಗುವುದಿಲ್ಲ.. ಆದರೆ ಸಾಮಾಜಿಕ ಮಾಧ್ಯಮವು ಅಧಿಕಾರಿಗಳ ಜೊತೆ ತಮ್ಮ ಸಮಸ್ಯೆ ಹಂಚಿಕೊಳ್ಳಲು ನಾಗರಿಕರಿಗೆ ಪರ್ಯಾಯ, ಸುಲಭವಾದ ಮಾರ್ಗವನ್ನು ಒದಗಿಸುತ್ತದೆ. ಅಧಿಕಾರಿಗಳು ಅದನ್ನು ಏಕೆ ಇದನ್ನು ಬಳಸುವುದಿಲ್ಲ?” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 

 

ಅಂದಹಾಗೆ ಪ್ರವಾಹದ ವೇಳೆ ಸಮೀಕ್ಷೆ ಮಾಡಲು ಕಾನ್ಸ್ಟೇಬಲ್ ಚಂದ್ರನ್ ಜೊತೆ ಬೈಕ್ ನಲ್ಲಿ ಹೊರಟೆ ಬಿಟ್ಟರು ಕ್ಯಾಪ್ಟನ್ ಮಣಿವಣ್ಣನ್

ಅಷ್ಟೇ ಅಲ್ಲದೆ ಕರ್ನಾಟಕ ಸರ್ಕಾರ ಹಾನಿಗೊಳಗಾದ ಜಿಲ್ಲೆಗಳಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದ್ದು , ರಾಜ್ಯದ ಅನೇಕ ಐಎಎಸ್ ಆಫೀಸರ್ ಗಳು ಈ ಕೇಂದ್ರಗಳ ಉಸ್ತುವಾರಿವಹಿಸಿಕೊಂಡಿದ್ದಾರೆ. ಐಎಎಸ್ ಅಧಿಕಾರಿ ಮಣಿವಣ್ಣನ್ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ವಹಿಸಿದ್ದಾರೆ . ಈ ವೇಳೆ ಗಂಜಿ ಕೇಂದ್ರದಲ್ಲಿ ಮಕ್ಕಳ ಜೊತೆ ಉತ್ತಮ ಮಾಡುವ ಮೂಲಕ ಸರಳತೆ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಅಲ್ಲಿನ ನಿರಾಶಿತ ಕೇಂದ್ರದಲ್ಲಿ ಇರುವವರಿಗೆ ಕೂರಿಸಿ ಊಟ ಉಪಚಾರ ಮಾಡಲಾಗಿದೆ .

ಅಷ್ಟೇ ಅಲ್ಲದೇ ಅಲ್ಲಿನ ಮಕ್ಕಳ ಜೊತೆ ಮಾತನಾಡಿ ಅವರಿಗೆ ಶೈಕ್ಷಣಿಕವಾಗಿ ಮಾಹಿತಿ ನೀಡಿದರು.. ಅವರನ್ನು ಉತ್ತೇಜನ ಮಾಡಿ ಪ್ರೋತ್ಸಾಹಿಸಿದರು.

 


ಅಂದಹಾಗೆ ಧಾರವಾಡ ಪಾಲಿಕೆ ಆಯುಕ್ತರಗಿದ್ದಾಗ “ಅಕ್ರಮ ಕಟ್ಟಡ ತೆರವು” ಮಾಡುವ ಮೂಲಕ ಸುದ್ದಿ ಮಾಡಿದ ಮಣಿವಣ್ಣನ್ ಮುಂದಿನ ದಿನಗಳಲ್ಲಿ ಅನೇಕ ಜನ ಪರ ಕಾರ್ಯಕ್ರಮ ಮಾಡಿ, ಜನರ ಮತ್ತು ಕೆಲಸ ಮಾಡಿದ ಜಿಲ್ಲೆಗಳಲ್ಲಿ ಹೆಸರು ಮಾಡಿದರು. ಈಗಲೂ ಕೂಡ ಅವರನ್ನು ಬಲ್ಲ ಮಾಧ್ಯಮದ ಸ್ನೇಹಿತರು ಮತ್ತು ಅವರ ಸ್ನೇಹಿತರು ಅವರನ್ನು “Demolition Man” ಎಂದು ಕರೆಯುತ್ತಾರೆ.

ಬೆಸ್ಕಾಂ, [BESCOM] ಚುನಾವಣ ಆಯೋಗ,[Election Commission] ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿ[Karnataka Pollution Control Board], ಹೀಗೆ ಅನೇಕ ಕಡೆ ಕೆಲಸ ಮಾಡಿ ತಮ್ಮ “ಛಾಪನ್ನು” ಮೂಡಿಸಿರುವ ದಿಟ್ಟ, ನೇರ-ನುಡಿಯ, ಆಡಳಿತದಲ್ಲಿ- “ಕನ್ನಡ ಬಳಿಸುವ ” ಅಧಿಕಾರಿ ನಮ್ಮ ಮಣಿವಣ್ಣನ್ ಸಾಹೇಬರು. ತಮ್ಮ ಕಚೇರಿಯಲ್ಲಿ CCTV ಕ್ಯಾಮೆರಾ ಅಳವಿಡಿಸಿ ಮತ್ತು ಅದನ್ನ ಅವರ ಇಲಾಖೆಯ ಅಂತರ್ಜಾಲಕ್ಕೆ (department website) ಸಂಪರ್ಕ ಮಾಡಿ ಪಾರದರ್ಶಕತೆಯನ್ನು ಮೆರೆದ ಕೆಲವೇ ಕೆಲವು ಐಎಎಸ್ ಅಧಿಕಾರಿಗಳಲ್ಲಿ ಮಣಿವಣ್ಣನ್ ಅವರು ಕೂಡ ಒಬ್ಬರು. ಇಷ್ಟೇ ಅಲ್ಲದೆ ತಮ್ಮ ಅಧಿಕೃತ ಚೇಂಬರ್ ನಲ್ಲಿ “ಗಾಜಿನ ಬಾಗಿಲನ್ನು”[Transparent Door] ಹಾಕಿಸಿ, ತಮ್ಮನ್ನು ಯಾರು ಬೇಕಾದರೂ ಸಂಪರ್ಕಿಸಬಹುದು ಎಂಬ ಅದ್ಬುತ “ವರ್ಕ್ ಎಥಿಕ್ಸ್” ಅನ್ನು ಅನುಷ್ಠಾನಗೊಳಿಸಿರುವುದು ಮಣಿವಣ್ಣನ್ ಸಾಹೇಬರ “ಜನ ಪರ” ಕಾಳಜಿಗೆ ಒಂದು ನಿದರ್ಶನ.

1998 ಬ್ಯಾಚ್ ನ IAS ಅಧಿಕಾರಿಯಾಗಿರುವ ಮಣಿವಣ್ಣನ್ ರವರು 2008 ರಲ್ಲಿ ನಡೆದ ರಾಜ್ಯ ಚುನಾವಣೆಯಲ್ಲಿ ಮೈಸೂರಿನಲ್ಲಿ “ರಾಜ್ಯ ಚುನಾವಣ ಅಧಿಕಾರಿಯಾಗಿ” ಮತ್ತು ಜಿಲ್ಲದಿಕಾರಿಯಾಗಿ ಉತ್ತಮವಾಗಿ ಕಾರ್ಯ-ನಿರ್ವಹಿಸಿದರು. ಅಕ್ರಮ-ಹಣ ವನ್ನು ಜಪ್ತಿ ಮಾಡಿ, ಚುನಾವಣ ನೀತಿ ಸಂಹಿತೆಯನ್ನು[Election Code of Conduct] ಉಲ್ಲಂಘಿಸಿದವರ ವಿರುದ್ದ “ಸಿಡಿದೆದ್ದ” ಮಣಿವಣ್ಣನ್ ರವರು ಯಾವುದೇ ರಾಜಕೀಯ ಪಕ್ಷ, ಧುರೀಣರ ಒತ್ತಡಕ್ಕೆ ಮಣಿಯದೆ, ಕೇಸ್ ಜಡಿದರು. 12 ಕಂಟ್ರೋಲ್ ರೂಂ, 130 ಮೊಬೈಲ್ ಪೋಲಿಸ್ ಠಾಣೆಗಳನ್ನೂ ಹಾಕಿ, ಯಶಸ್ವೀ ಯಾಗಿ ತಮ್ಮ ಕರ್ತವ್ಯವನ್ನು ನೆರವೇರಿಸಿದ ಖ್ಯಾತಿ ಮಣಿವಣ್ಣನ್ ರವರಿಗೆ ಸಲ್ಲುತ್ತದೆ.

ತಮ್ಮ ಯಶಸ್ಸಿಗೆ – ತಮ್ಮ ತಂಡದ “ಸಾಂಘಿಕ ಪ್ರಯತ್ನ” [Team work] ಕಾರಣ ಎಂದು ಹೇಳುವ ಮಣಿವಣ್ಣನ್ ರವರದು ಅತ್ಯಂತ – ನೇರ ನುಡಿಯ ಮತ್ತು ಸರಳ ವ್ಯಕ್ತಿತ್ವ.ಬೇರೆ ರಾಜ್ಯದಲ್ಲಿ ಹುಟ್ಟಿ-ಬೆಳೆದರೂ ನಮ್ಮ ಭಾಷೆಯನ್ನೂ ಕಲಿತು ತನ್ನ ಅದ್ಬುತವಾದ ಸೇವೆಯಿಂದ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರೇ ನಮ್ಮ ಖಡಕ್ ಅಧಿಕಾರಿ – ಮಣಿವಣ್ಣನ್. (IAS)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top