fbpx
ಸಮಾಚಾರ

ಟೀಂ ಇಂಡಿಯಾದಿಂದ ಗೇಟ್ ಪಾಸ್ ಸಿಕ್ಕ ಆಟಗಾರನಿಗೆ, ಇಂಗ್ಲೆಂಡ್‌ನಿಂದ ಆಫರ್!

ನೀರಸ ಪ್ರದರ್ಶನದಿಂದಾಗಿ ಭಾರತ ತಂಡದಿಂದ ಹೊರ​ಬಿ​ದ್ದಿ​ರುವ ಆರಂಭಿಕ ಬ್ಯಾಟ್ಸ್‌ಮನ್‌ ಮುರಳಿ ವಿಜಯ್‌ ಅವರಿಗೆ ಇಂಗ್ಲೆಂಡ್ ನಿಂದ ಆಫರ್ ಬಂದಿದೆ. ಇಂಗ್ಲೆಂಡ್‌ ಕೌಂಟಿ ಕ್ರಿಕೆಟ್‌ನಲ್ಲಿ ಸೋಮರ್‌ಸೆಟ್‌ ತಂಡದಿಂದ ಆಫರ್ ಬಂದಿದೆ.

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಸ್ಪೆಕ್ ಸೇವರ್ಸ್ ಕೌಂಟಿ ಚಾಂಪಿಯನ್ ಷಿಪ್ ಟೂರ್ನಿಯಲ್ಲಿ ಸಮರ್ ಸೆಟ್ ತಂಡದ ಪರ ಭಾರತದ ಮುರಳಿ ವಿಜಯ್ ಅಖಾಡಕ್ಕೆ ಇಳಿಯಲಿದ್ದಾರೆ. ಕೊನೆಯ ಮೂರು ಪಂದ್ಯಗಳಲ್ಲಿ ಸಮರ್ ಸೆಟ್ ತಂಡದ ಓಪನರ್ ಆಗಿ ಬ್ಯಾಟ್ ಬೀಸಲಿದ್ದಾರೆ ಮುರಳಿ ವಿಜಯ್.

 

 

ಕಳೆದ ವರ್ಷವೂ ಟೀಮ್ ಇಂಡಿಯಾದಿಂದ ಸ್ಥಾನ ಕಳೆದುಕೊಂಡಾಗ ಇಂಗ್ಲೆಂಡ್ ಕೌಂಟಿಯಲ್ಲಿ ಎಸೆಕ್ಸ್ ತಂಡದ ಪರ ಆಡಿದ್ದ ಮುರಳಿ ವಿಜಯ್ ಮೂರು ಪಂದ್ಯಗಳಲ್ಲಿ 64.60 ಸರಾಸರಿಯಲ್ಲಿ 320 ರನ್ ಬಾರಿಸಿದ್ದರು. ವಿಜಯ್ ಅಮೋಘ ಆಟಕ್ಕೆ ಫಿದಾ ಆಗಿದ್ದ ಸಮರ್ ಸೆಟ್ ಈ ಬಾರಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.

ಸಮರ್ ಸೆಟ್ ತಂಡದ ಪರವಾಗಿ ಆಡುತ್ತಿದ್ದ ಪಾಕಿಸ್ತಾನದ ಅಜರ್ ಅಲಿ ತಂಡದಿಂದ ಹೊರಗುಳಿದಿದ್ದಾರೆ. ಪಾಕಿಸ್ತಾನ ತಂಡದಿಂದ ಅಜರ್ ಗೆ ಬುಲಾವ್ ಬಂದಿದ್ದು, ಆ ಜಾಗಕ್ಕೆ ಮುರಳಿ ವಿಜಯ್ ಆಯ್ಕೆಯಾಗಿದ್ದಾರೆ ಎಂದು ಸಮರ್ ಸೆಟ್ ಕ್ರಿಕೆಟ್ ಕ್ಲಬ್ ಅಧಿಕೃತವಾಗಿ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top