fbpx
ಸಮಾಚಾರ

ಲಕ್ಷ್ಮಣ್ ಸವದಿಗೆ ಡಿಸಿಎಂ ಹುದ್ದೆ ಕೊಟ್ಟವರಿಗೆ ಅವಾಚ್ಯ ಪದಗಳಲ್ಲಿ ನಿಂದಿಸಿದ ನಿರ್ದೇಶಕ KM ಚೈತನ್ಯ!

2018ರ ವಿಧಾನಸಭಾ ಚುನಾವಣೆಯಲ್ಲಿ ಸೋತು ಮನೆ ಸೇರಿದ್ದ ಬ್ಲೂ ಬಾಯ್​ ಲಕ್ಷ್ಮಣ ಸವದಿಯನ್ನು ಬಿಜೆಪಿ ಸರ್ಕಾರ ಸಚಿವ ಸಂಪುಟದಲ್ಲಿ ಸೇರಿಸಿಕೊಂಡಿದ್ದಲ್ಲದೇ ಡಿಸಿಎಂ ಪಟ್ಟ ಕೂಡ ನೀಡಿರೋದೆ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಲಕ್ಷ್ಮಣ ಸವದಿ ಸಂಪುಟ ಸೇರ್ಪಡೆಗೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕೆಎಂ ಚೈತನ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

‘ವಿಧಾನ ಸೌಧದ ಒಳಗೆ ವಿಡಿಯೋ ನೋಡಿದ, ಚುನಾವಣೆಯಲ್ಲಿ ಸೋತ ಒಬ್ಬನನ್ನು, ರಾಜ್ಯದ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟ ಪಕ್ಷಕ್ಕೆ ಸ್ವಲ್ಪವಾದರೂ ನಾಚಿಕೆ ಮಾನ ಮರ್ಯಾದೆ ಇದೆಯಾ? ಇವರುಗಳಾ ನಮ್ಮ ಮುಂದಿನ ನಾಯಕರು? ಥೂ ಬೇವರ್ಸಿಗಳ. ನಿಮ್ಮ ಜನ್ಮಕ್ಕಷ್ಟು’ ಎಂದು ಕೆ ಎಂ ಚೈತನ್ಯ ಆಕ್ರೋಶ ಭರಿತ ಟ್ಟೀಟ್ ಮಾಡಿದ್ದಾರೆ.

ಸರ್ಕಾರ ಬ್ಲೂ ಫಿಲಂ ಗಳನ್ನ ಬ್ಯಾನ್ ಮಾಡಿದೆ. ಆದರೆ ಚುನಾವಣೆಯಲ್ಲಿ ಸೋತ ನಂತರವೂ ಅಸೆಂಬ್ಲಿಯಲ್ಲಿ ಅಶ್ಲೀಲತೆಯನ್ನು ವೀಕ್ಷಿಸಿದ ವ್ಯಕ್ತಿಯನ್ನು ಕರ್ನಾಟಕದ ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ.” ಎಂದು ವ್ಯಂಗ್ಯ ಮಾಡಿದ್ದಾರೆ.

ಬಳಿಕ ಈ ಎರಡೂ ಟ್ವೀಟ್ ಗಳನ್ನೂ ಕೂಡ ಡಿಲೀಟ್ ಮಾಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top