fbpx
ಭವಿಷ್ಯ

30 ಆಗಸ್ಟ್ : ನಾಳೆಯ ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಸ್ಥಳ- ಬೆಂಗಳೂರು.
ಶುಕ್ರವಾರ, ಆಗಸ್ಟ್ 30 2019
ಸೂರ್ಯೋದಯ : 6:08 am
ಸೂರ್ಯಾಸ್ತ: 6:32 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಶ್ರಾವಣ
ಪಕ್ಷ : ಕೃಷ್ಣ ಪಕ್ಷ
ತಿಥಿ : ಅಮಾವಾಸ್ಯೆ 16:06
ನಕ್ಷತ್ರ: ಮಖ 17:12
ಯೋಗ : ಶಿವ 18:09
ಕರಣ: ನಾಗ 16:06 ಕಿಮ್ಸ್ತುಗ್ನ 26:10

ಅಭಿಜಿತ್ ಮುಹುರ್ತ: 11:55 am – 12:44 pm
ಅಮೃತಕಾಲ : 3:06 pm – 4:30 pm

ರಾಹುಕಾಲ-10:48 am – 12:20 pm
ಯಮಗಂಡ ಕಾಲ- 3:24 pm – 4:56 pm
ಗುಳಿಕ ಕಾಲ- 7:43 am – 9:16 am

 

 

ಮೇಷ (Mesha)

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ದೂರಾಲೋಚನೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಒಮ್ಮೆ ನಿರ್ಧಾರ ಕೈಗೊಂಡ ಮೇಲೆ ಹಿಂದೆ ಮುಂದೆ ಯೋಚಿಸದೆ ಅದರ ಅನುಷ್ಠಾನದತ್ತ ಗಮನ ನೀಡಿರಿ.

 

ವೃಷಭ (Vrushabha)

ಬಂದುಮಿತ್ರರ ದರ್ಶನವು ನಿಮ್ಮಲ್ಲಿ ನವಚೈತನ್ಯವನ್ನು ತುಂಬುವುದು. ಈ ದಿನ ಎಲ್ಲಾ ಕೆಲಸ ಕಾರ್ಯಗಳನ್ನು ಸಂತೋಷದಿಂದ ಮುಗಿಸುವಿರಿ. ಸಂಬಂಕರಿಂದ ಮಹತ್ತರ ಕಾರ್ಯ ಕೈಗೂಡುವುದು.

 

ಮಿಥುನ (Mithuna)

ಅಕಾಲ ಭೋಜನ ತ್ಯಜಿಸಿ ಸಕಾಲದಲ್ಲಿ ಪ್ರಸಾದವನ್ನು ಸ್ವೀಕರಿಸಿರಿ. ಇದರಿಂದ ಆರೋಗ್ಯವೂ ಉತ್ತಮಗೊಳ್ಳುವುದು. ಮತ್ತು ಬುದ್ಧಿಯು ಚುರುಕುಗೊಳ್ಳುವುದು. ಭಿಕ್ಷುಕರನ್ನು ಕಂಡರೆ ತಾತ್ಸಾರ ಮಾಡದೆ ಕೈಲಾದಷ್ಟು ದಾನ ‘ರ್ಮ ಮಾಡಿರಿ.

 

ಕರ್ಕ (Karka)

ನಿಮ್ಮ ವಾದ ಅಥವಾ ವಿಚಾರಧಾರೆ ಸಹೋದ್ಯೋಗಿಗಳಿಗೆ ಅರ್ಥವಾಗದೇ ಇರುವುದರಿಂದ ಕೊಂಚ ಕಿರಿಕಿರಿ ಆಗುವುದು. ಪಾರ್ಟನರ್ ವ್ಯವಹಾರದಲ್ಲಿ ಲಾಭಾಂಶ ಕಡಿಮೆ ಆಗುವುದು. ತಾಳ್ಮೆಯಿಂದ ಇದ್ದಲ್ಲಿ ಈ ದಿನವನ್ನು ನೆಮ್ಮದಿಯಾಗಿ ಕಳೆಯಬಹುದು.

 

ಸಿಂಹ (Simha)

ಮನೋಭಿಲಾಷೆಗಳು ಪೂರ್ಣಗೊಳ್ಳುವುದು. ಸಂಗಾತಿಯು ಸಕಾಲದಲ್ಲಿ ಎಚ್ಚರಿಕೆಯನ್ನು ನೀಡುವುದರಿಂದ ಹಣ ಕೈಜಾರಿ ಹೋಗುವುದನ್ನು ತಪ್ಪಿಸಿಕೊಳ್ಳುವಿರಿ. ಇದರಿಂದ ಮಡದಿಯ ಮೇಲೆ ಪ್ರೀತಿ ಹೆಚ್ಚಾಗುವುದು.

 

ಕನ್ಯಾರಾಶಿ (Kanya)

ಬದುಕಿನ ದಾರಿ ಸುಗಮವಾಗಿದ್ದು ನಿಮ್ಮ ಮನೋರಥಗಳು ಈಡೇರುವುದು. ಉತ್ತಮ ತೀರ್ಮಾನ ಕೈಗೊಂಡು ಸನ್ನಿವೇಶವನ್ನು ನಿಭಾಯಿಸುವಿರಿ. ಈ ದಿನ ನಿಮ್ಮ ಹಳೆಯ ಸ್ನೇಹಿತನ ಭೇಟಿ ಆಗಿ ಹಳೆಯ ನೆನಪುಗಳನ್ನು ಸವಿಯುವಿರಿ.

 

ತುಲಾ (Tula)

ಮಾನಸಿಕ ಒತ್ತಡಗಳಿಂದ ಹೊರಬರಲು ಯೋಗ, ಪ್ರಾಣಾಯಾಮಗಳನ್ನು ಇಂದು ತಪ್ಪದೆ ಮಾಡಿರಿ. ಪ್ರಯಾಣದಲ್ಲಿ ಎಚ್ಚರ. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ. ನೀವು ಬಯಸಿದಷ್ಡು ಈ ದಿನ ಹಣಕಾಸು ದೊರೆಯದೆ ಹೋಗಬಹುದು.

 

ವೃಶ್ಚಿಕ (Vrushchika)

ಸಂಬಂಧಗಳು ಗಟ್ಟಿಯಾಗುವ ದಿನ. ಪ್ರೇಮ ಪ್ರಕರಣದಲ್ಲಿ ಸಿಲುಕಿದವರು ಮನೆಯಲ್ಲಿ ಹಿರಿಯರ ಒಪ್ಪಿಗೆಯನ್ನು ಪಡೆಯುವರು. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಕಂಡುಬರುವುದು.

 

ಧನು ರಾಶಿ (Dhanu)

ಸಾಧನೆಗೆ ಸಂಭ್ರಮಿಸುವ ಕಾಲ. ದೊಡ್ಡ ದೊಡ್ಡ ಜವಾಬ್ದಾರಿಗಳು ನಿಮ್ಮ ಮುಡಿಗೇರುವುದು. ಕಚೇರಿಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಹರ್ಷಿತರಾಗುವಿರಿ. ವೃತ್ತಿ ಸಂಬಂಧ ಪ್ರಮುಖ ತೀರ್ಮಾನಗಳನ್ನು ಕೈಕೊಳ್ಳುವಿರಿ.

 

ಮಕರ (Makara)

ಹಿಂದಿನ ನಿರ್ಧಾರಗಳನ್ನು ಪರಾಮರ್ಶೆ ಮಾಡದೆ ನೂತನ ಕಾರ್ಯಗಳನ್ನು ಹಮ್ಮಿಕೊಳ್ಳಬಾರದು. ಅಂದರೆ ತಪ್ಪು ನಿರ್ಧಾರಗಳ ಬಗ್ಗೆ ಕೊರಗುತ್ತ ಸಮಯ ವ್ಯರ್ಥ ಮಾಡದೇ ಮುಂದಿನ ನಡೆ ಬಗ್ಗೆ ಗಮನ ಕೊಡಿರಿ

 

ಕುಂಭರಾಶಿ (Kumbha)

ಬೌದ್ಧಿಕ ಕೆಲಸಗಳನ್ನು ಮಾಡುವವರಿಗೆ ಒಳ್ಳೆಯ ದಿನಗಳು ಬರುತ್ತವೆ. ವೃತ್ತಿಯಲ್ಲಿ ಮುಂಬಡ್ತಿ ದೊರೆಯುವ ಸಾಧ್ಯತೆ. ಮನೆಯಲ್ಲಿ ಮಕ್ಕಳ ಬಗ್ಗೆ ಕಾಳಜಿ ವಹಿಸಿರಿ.

 

ಮೀನರಾಶಿ (Meena)

ಕೆಲಸದ ಒತ್ತಡಗಳಲ್ಲಿ ಸಿಟ್ಟಿನಿಂದ ಮಾತನಾಡಬೇಡಿ. ಸಹೋದ್ಯೋಗಿಗಳೊಂದಿಗೆ ಪ್ರೀತಿ ವಿಶ್ವಾಸಗಳಿಸುವಿರಿ. ಆಗ ನಿಮ್ಮ ಕಾರ್ಯಗಳು ಸುಲಲಿತವಾಗಿರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top