fbpx
ಸಮಾಚಾರ

ದ. ಆಫ್ರಿಕಾ ವಿರುದ್ದದ ಸರಣಿಯಿಂದಲೂ ಧೋನಿ ಔಟ್: ಕಾರಣವೇನು ಗೊತ್ತಾ?

ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಎದುರಿನ ಟ್ವೆಂಟಿ–20 ಸರಣಿಗೆ ಭಾರತ ತಂಡದ ಆಯ್ಕೆಯನ್ನು ಸೆಪ್ಟೆಂಬರ್ 4ರಂದು ಮಾಡಲಾಗುವುದು. ಆದರೆ ವಿಕೆಟ್‌ ಕೀಪರ್ ಮಹೇಂದ್ರಸಿಂಗ್ ಧೋನಿ ಅವರನ್ನು ಆಯ್ಕೆಗೆ ಪರಿಗಣಿಸದೇ ಯುವ ಆಟಗಾರ ರಿಷಭ್ ಪಂತ್ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ.

2020 ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ಗಾಗಿ ಯುವ ಪಡೆಯ ಮೇಲೆ ಬಿಸಿಸಿಐ ಕಣ್ಣಿಟ್ಟಿದ್ದು ಇದಕ್ಕಾಗಿ ಹೊಸ ಮುಖಗಳನ್ನು ಆಯ್ಕೆ ಮಾಡಲಿದೆಯಂತೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಆಡಿದ ಆಟಗಾರರೇ ದ. ಆಫ್ರಿಕಾ ವಿರುದ್ಧವೂ ಕಣಕ್ಕಿಳಿಯಲಿದ್ದಾರೆ. ಎಲ್ಲಾದರು ಬದಲಾವಣೆ ಆದಲ್ಲಿ ಫಿಟ್​ನೆಸ್ ವಿಚಾರದಲ್ಲಿ ಮಾತ್ರ. ಸಂಭಾವ್ಯ ತಂಡದಲ್ಲಿ, ಮುಖ್ಯವಾಗಿ ಟಿ-20 ಯಲ್ಲಿ 3 ಮಂದಿ ಕೀಪರ್‌ಗಳನ್ನು ಆಯ್ಕೆ ಮಾಡುವತ್ತ ಬಿಸಿಸಿಐ ಚಿತ್ತ ನೆಟ್ಟಿದೆಯಂತೆ.

ವಿಕೆಟ್ ಕೀಪರ್ ಸ್ಥಾನಕ್ಕೆ ಪಂತ್ ಮೊದಲ ಆಯ್ಕೆಯಾಗಿರಲಿದ್ದು, ಸಂಜು ಸ್ಯಾಮ್ಸನ್ಹಾಗೂ ಇಶಾನ್ ಕಿಶಾನ್ ಮೇಲೂ ಆಯ್ಕೆ ಸಮಿತಿ ನಿಗಾ ವಹಿಸಲಿದೆ. ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ, ರಿಷಭ್‌ ಪಂತ್‌ ಜೊತೆಗೆ ಸಂಜು ಸ್ಯಾಮ್ಸನ್‌ ಮತ್ತು ಭಾರತ ಎ ತಂಡದ ಖಾಯಂ ಸದಸ್ಯ ಇಶಾನ್‌ ಕಿಶನ್‌ ಅವರನ್ನು 2ನೇ ಹಾಗೂ 3ನೇ ಕೀಪಿಂಗ್‌ ಸ್ಥಾನಕ್ಕೆ ಸಜ್ಜುಗೊಳಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಆದರೆ, ಇತ್ತ ಎಂ ಎಸ್ ಧೋನಿಯನ್ನು ಕೈ ಬಿಡುವುದು ಅಭಿಮಾನಿಗಳಿಗೆ ಬೇಸರ ತಂದಿದೆ.

ಈಚೆಗೆ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಸರಣಿಯಲ್ಲಿ 3–0ಯಿಂದ ಗೆದ್ದಿದ್ದ ವಿರಾಟ್ ಕೊಹ್ಲಿ ನಾಯಕತ್ವದ ಬಳಗವನ್ನೇ ಇಲ್ಲಿಯ ಸರಣಿಗೂ ಉಳಿಸಿಕೊಳ್ಳುವ ಸಾಧ್ಯತೆ ಇದೆ. ವಿಂಡೀಸ್‌ ಸರಣಿಯಲ್ಲಿ ಧೋನಿ ಆಡಿರಲಿಲ್ಲ. ಸೇನೆಯಲ್ಲಿ ಗೌರವ ಕರ್ನಲ್ ಆಗಿರುವ ಧೋನಿ ಅವರು ಜಮ್ಮು–ಕಾಶ್ಮೀರದಲ್ಲಿ ಕೆಲವು ದಿನಗಳ ಸೇವೆ ಸಲ್ಲಿಸಲು ತೆರಳಿದ್ದರು. . ಇದರೊಂದಿಗೆ ಯಾವಾಗ ನಿವೃತ್ತಿ ಸಲ್ಲಿಸಲಿದ್ದಾರೆ ಎಂಬುದು ಇನ್ನು ನಿಗೂಢವೆನಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top