fbpx
ಸಮಾಚಾರ

ಮಂಡ್ಯದಲ್ಲಿ ಹುಚ್ಚ ವೆಂಕಟ್ ಹುಚ್ಚಾಟ! ವ್ಯಕ್ತಿ ಮತ್ತು ವೆಂಕಟ್ ನಡುವೆ ಜಗಳ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹುಚ್ಚ ವೆಂಕಟ್ ಚೆನ್ನೈನ ಬಿದಿ ಬೀದಿಗಳಲ್ಲಿ ಹಳೆ ಕೊಳಕು ಬಟ್ಟೆ ಹಲ್ಕಿಕೊಂಡು ಕಾಲಿಗೆ ಚಪ್ಪಲಿ ಇಲ್ಲದೆ ಹುಚ್ಚನ ರೀತಿ ಸುತ್ತಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಚೆನ್ನೈನ ಬೀದಿಗಳಲ್ಲಿ ಚಪ್ಪಲಿ ಇಲ್ಲದೆ ತಿರುಗಾಡುತ್ತಿದ್ದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಈಗ ಮಂಡ್ಯ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಪಾಂಡವಪುರದ ಮಂಡ್ಯ ಸರ್ಕಲ್‍ನಲ್ಲಿ ಹುಚ್ಚ ವೆಂಕಟ್ ಕಾಣಿಸಿಕೊಂಡಿದ್ದು ತಮ್ಮ ಟ್ರೇಡ್ ಮಾರ್ಕ್ ನೀಲಿ ಶರ್ಟ್, ಕಪ್ಪು ನೀಲಿ ಬಣ್ಣ ಪ್ಯಾಂಟ್ ಹಾಗೂ ಶೂ ಹಾಕಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದನ್ನು ನೋಡಿದ ಕೆಲ ಯುವಕರು ತಮ್ಮ ಮೊಬೈಲ್‍ನಲ್ಲಿ ಹುಚ್ಚ ವೆಂಕಟ್ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದಿದ್ದಾರೆ.

ಹುಚ್ಚ ವೆಂಕಟ್ ಕಾರಿನಲ್ಲಿ ಬಂದಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಕಾರಿನಿಂದ ಇಳಿದು ರಸ್ತೆಯಲ್ಲಿ ನಡೆದುಕೊಂಡು ಹೋದರು. ಪಾಂಡವಪುರದಲ್ಲಿ ಸುತ್ತಾಡುತ್ತಿರುವ ವೆಂಕಟ್ ಈಗ ಅಲ್ಲಿಯೂ ಜಗಳ ಮಾಡಿಕೊಂಡಿದ್ದಾರೆ. ಮಾತನಾಡಿಸಲು ಮುಂದಾದ ಯುವಕನೊಬ್ಬನಿಗೆ ಹುಚ್ಚ ವೆಂಕಟ್ ಹೊಡೆದಿದ್ದಾರೆ. ಯುವಕನ ಮೇಲೆ ಕೈಮಾಡಿದರಿಂದ ಸಾರ್ವಜನಿಕರು ವೆಂಕಟ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ..

ಇದಕ್ಕೆ ಸಂಭಂದಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈ ವಿಡಿಯೋದಲ್ಲಿ ಹುಚ್ಚ ವೆಂಕಟ್ ಮತ್ತು ವ್ಯಕ್ತಿಯೋರ್ವರು ಪರಸ್ಪರ ಅವಾಚ್ಯ ಶಬ್ದಗಳಲ್ಲಿ ನಿಂದಿಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top