fbpx
ಸಮಾಚಾರ

ಕನ್ನಡದ ಜೊತೆ ಹಿಂದಿಯಲ್ಲೂ ಮರುಬಿಡುಗಡೆಯಾಗಲಿದೆ ‘ಯಜಮಾನ’ನ ನಿಷ್ಕರ್ಷ.

ಎರಡೂವರೆ ದಶಕದ ಹಿಂದೆ ನಟ ವಿಷ್ಣುವರ್ಧನ್‌ ನಟಿಸಿದ್ದ ‘ನಿಷ್ಕರ್ಷ’ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಸುನೀಲ್‌ ಕುಮಾರ್‌ ದೇಸಾಯಿ ಈ ಚಿತ್ರ ನಿರ್ದೇಶಿಸಿದ್ದರು. ಕನ್ನಡದ ಹೊಸ ಬಗೆಯ ಸಿನಿಮಾಗಳಲ್ಲಿ ನಿಷ್ಕರ್ಷ ಕೂಡ ಒಂದು. ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿ ಮಾಡಿತ್ತು.

ಈ ಸಿನಿಮಾ ಸೆ. 20 ರಂದು ನಿಷ್ಕರ್ಷ ಸಿನಿಮಾ ರಾಜ್ಯದಾದ್ಯಂತ ಮತ್ತೊಮ್ಮೆ ಹೊಸ ಡಿಜಿಟಲ್ ಅವತಾರದಲ್ಲಿ ಬಿಡುಗಡೆಯಾಗಲಿದೆ. ಈ ಹಿಂದೆ ನಾಗರ ಹಾವು ಸಿನಿಮಾ ಡಿಜಿಟಲ್​ ಅವತಾರ ಪಡೆದು ರಿಲೀಸ್​ ಆಗಿ ಹೊಸ ಇತಿಹಾಸವನ್ನು ಬರೆದಿತ್ತು ಮತ್ತೊಮ್ಮೆ ಎವರ್ ಗ್ರೀನ್ ಚಿತ್ರ ನಿಷ್ಕರ್ಷ ಬಿಡುಗಡೆಯಾಗಿ ಇತಿಹಾಸ ನಿರ್ಮಾಣ ಮಾಡುವುದರಲ್ಲಿ ಸಂದೇಹವಿಲ್ಲ

ವಿಶೇಷ ಅಂದರೆ ಈ ಚಿತ್ರ ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿಯಲ್ಲಿಯೂ ತೆರೆಕಾಣಲಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು, ಡಿಟಿಎಸ್‌ ಸೌಂಡ್‌ನೊಂದಿಗೆ ಹಿಂದಿ ಮತ್ತು ಕನ್ನಡದಲ್ಲಿ ಇದನ್ನು ತೆರೆಗೆ ತರುತ್ತಿದ್ದೇನೆ. ನೂರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತೇನೆ. ಇದು ವಿಷ್ಣು ಹುಟ್ಟುಹಬ್ಬಕ್ಕೆ ನನ್ನ ಕೊಡುಗೆ’ ಎಂದು ಬಿಸಿ ಪಾಟೀಲ್‌ ತಮ್ಮ ಮನಸ್ಸಿನ ಮಾತು ಹೇಳಿಕೊಂಡಿದ್ದಾರೆ.

ಸಾಹಸ ಸಿಂಹ ವಿಷ್ಣುವರ್ಧನ್​​ ಮುಖ್ಯ ಭೂಮಿಕೆಯಲ್ಲಿ ಬ್ಯಾಂಕ್ ಒಂದರಲ್ಲಿ 24 ಘಂಟೆಯಲ್ಲಿ ನಡೆಯುವ ಘಟನೆಯನ್ನು ಆಧರಿಸಿದ ಚಿತ್ರ ಇದಾಗಿದ್ದು, ಥ್ರಿಲ್ಲರ್​ ಸಿನಿಮಾವಾಗಿ ಹೊರಹೊಮ್ಮಿ ಸೂಪರ್ ಹಿಟ್ ಆಗಿತ್ತು , ದಾದಾ ಅವರಿಗೆ ಹೊಸ ರೀತಿಯ ಇಮೇಜ್ ತಂದು ಕೊಟ್ಟಿತ್ತು, ವಿಷ್ಣುವರ್ಧನ್ ಅನಂತನಾಗ್, ಬಿ.ಸಿ.ಪಾಟಿಲ್, ರಮೇಶ್ ಭಟ್,ಅಂಜನಾ, ಅವಿನಾಶ್, ಪ್ರಕಾಶ್ ರೈ, ಸುಮನ್ ನಗರಕರ್ ಹೀಗೆ ಬಹು ಕಲಾವಿದರ ದಂಡೇ ಆ ಚಿತ್ರದಲ್ಲಿತ್ತು.

1993-94 ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು ಪ್ರಥಮ ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರಕಥೆ-ಸುನೀಲಕುಮಾರ್ ದೇಸಾಯಿ ಅವರಿಗೆ ದೊರಕಿತ್ತು .ಸುನೀಲಕುಮಾರ್ ದೇಸಾಯಿ ಯವರಿಗೆ ಒಳ್ಳೆಯ ಇಮೇಜ್ ತಂದುಕೊಡುವಲ್ಲಿ ಈ ಚಿತ್ರದ ಪಾತ್ರ ಬಹಳ ಮುಖ್ಯವಾದದ್ದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top