fbpx
ಸಮಾಚಾರ

ಲೂಸ್​ ಮಾದ ಯೋಗಿ- ನೀನಾಸಂ ಸತೀಶ ಸಲಿಂಗಿಕಾಮಿಗಳು!

‘ಸಿದ್ಲಿಂಗು’, ‘ನೀರ್​ ದೋಸೆ’ ಸಿನಿಮಾಗಳ ಮೂಲಕ ಒಂದಷ್ಟು ಪೋಲಿ ಮತ್ತೊಂದಷ್ಟು ಸಂದೇಶ ಸಾರಿದ್ದ ನಿರ್ದೇಶಕರು ಈ ಬಾರಿ ನೀನಾಸಂ ಸತೀಶ್ ಹಾಗೂ ಲೂಸ್ ಮಾದ ಯೋಗಿಯನ್ನು ‘ಲಾಡ್ಜ್’​ನಲ್ಲಿ ಸೇರಿಸಿದ್ದಾರೆ. ಅರ್ಥಾತ್ ‘ಪರಿಮಳ ಲಾಡ್ಜ್ ಎಂಬ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ.

 

 

ಪರಿಮಳ ಲಾಡ್ಜ್ ಚಿತ್ರದಲ್ಲಿ ಲೂಸ್ ಮಾದ ಯೋಗಿ ಮತ್ತು ನೀನಾಸಂ ಸತೀಶ್ ಅವರು ಸಲಿಂಗಿಕಾಮಿಗಳ ಪಾತ್ರವನ್ನು ಮಾಡುತ್ತಿದ್ದಾರೆ. ಇದೀಗ ಪಾತ್ರಗಳ ಪರಿಚಯದ ಟೀಸರ್ ಬಿಡುಗಡೆಯಾಗಿದ್ದು, ಲೂಸ್ ಮಾದ ಹಾಗೂ ಕ್ವಾಟ್ಲೆ ಸತೀಶನಿಗೆ ಸಲಿಂಗಕಾಮಿಗಳು ಅಂತ ಟೈಟಲ್ಸ್ ನೀಡಿದ್ದಾರೆ. ಈ ಚಿತ್ರ ಸಲಿಂಗಕಾಮಿಗಳ ಕಥಾ ಹಂದರ ಹೊಂದಿದ್ದು, ಸಾಕಷ್ಟು ನಿರೀಕ್ಷೆ ಮೂಡಸಿದೆ.

 

 

‘ಪರಿಮಳ ಲಾಡ್ಜ್’ಗೆ ಕೈ ಹಾಕಿದ ನಿರ್ದೇಶಕ ವಿಜಯ್ ಪ್ರಸಾದ್ ಟೀಸರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ್ದಾರೆ. ಬುಧವಾರ ಪೂಜೆ ನೆರವೇರಿದ್ದು, ಸಣ್ಣದ್ದೊಂದು ಟೀಸರ್‌ ಅನ್ನು ನಟ ದರ್ಶನ್‌ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ಟೀಸರ್ ಪಡ್ಡೆ ಹುಡುಗರಿಗೆ ಸಂಭಾಷಣೆಯ ಮೂಲಕ ಕಚಗುಳಿ ನೀಡಿದೆ. ಇನ್ನು ಚಿತ್ರದಲ್ಲಿ ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಹಾಗೂ ಹೇಮಾ ದತ್ ಅಭಿನಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top