fbpx
ಸಮಾಚಾರ

“ಪಿಒಪಿ ಗಣೇಶನ ಬದಲು ಮಣ್ಣಿನ ಗಣಪನನ್ನು ಪೂಜಿಸೋಣ” ನಟ ಕಿಚ್ಚ ಸುದೀಪ್ ಮನವಿ.

ಸುದೀಪ್ ಒಬ್ಬ ಒಳ್ಳೆಯ ನಟ ಮಾತ್ರವಲ್ಲದೆ ಅಷ್ಟೇ ಒಳ್ಳೆಯ ಮನಸಿನ ವ್ಯಕ್ತಿಕೂಡ ಹೌದು. ಸುತ್ತಮುತ್ತಲಿನ ಜನರ ಬಗ್ಗೆ ಅಪಾರ ಕಾಳಜಿ ಕಳಕಳಿ ಹೊಂದಿರುವ ಸುದೀಪ್ ಚಿತ್ರರಂಗದ ಒಳಗೂ ಹೊರಗೂ ತಮ್ಮ ಕೈನಲ್ಲಾದಷ್ಟು ಸೇವೆಯನ್ನು ಮಾಡಿದ್ದಾರೆ. ಸಮಾಜದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಅರಿವು ಮೂಡಿಸುತ್ತಿರುತ್ತಾರೆ. ಇಂಥಾ ಕಿಚ್ಚ ಸುದೀಪ್ ಇದೀಗ ಗಣೇಶ ಹಬ್ಬದ ವಿಚಾರದಲ್ಲೂ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

 

 

ಗಣೇಶ್ ಹಾಬಾದ ಆಚರಣೆಗಾಗಿ ಪಿಒಪಿ ಗಣೇಶ ಬೇಡ, ಮಣ್ಣಿನ ಗಣಪನನ್ನು ಪೂಜಿಸಿ ಪ್ರಕೃತಿಯನ್ನು ಕಾಪಾಡೋಣ ಎಂದು ನಟ ಕಿಚ್ಚ ಸುದೀಪ ಕರೆ ನೀಡಿದ್ದಾರೆ.. ಪ್ರಾಕೃತಿಕ ವಿಕೋಪಗಳ ಉದಾಹರಣೆ ನೀಡುವ ಮೂಲಕ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನೇ ಕೂರಿಸಿ ಎಂದು ಸುದೀಪ್ ಮನವಿ ಮಾಡಿದ್ದಾರೆ.

“ನಾವು ನಮ್ಮ ಪ್ರಕೃತಿಗೆ ಕೊಡುವ ನೋವನ್ನು ಪ್ರಕೃತಿಯು ತಿರುಗಿಸಿ ವಾಪಸ್ ಕೊಡುತ್ತಿರುವುದನ್ನು ನಾವು ಆನುಭವಿಸಿದ್ದೇವೆ. ಹಾಗಾಗಿ ಈ ಸಲ ನಮ್ಮ ವಿಘ್ನ ನಿವಾರಕನ ಹಬ್ಬಕ್ಕೆ , ಪಿಓಪಿ ಗಣೇಶನ ಮೂರ್ತಿಗಳನ್ನ ಉಪಯೋಗಿಸದೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನ ಮಾತ್ರ ಬಳಸಿ,ಪ್ರಕೃತಿ ಮಾತೆಯನ್ನ ಕಾಪಾಡೋಣ.”ಇದು ನನ್ನ ನಿಮ್ಮ ನಮ್ಮೆಲ್ಲರ ಜವಾಬ್ದಾರಿ” ಎಂದು ಟ್ವೀಟ್ ಮಾಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top