fbpx
ಸಮಾಚಾರ

ನಿವೃತ್ತಿ ವಿಚಾರದಲ್ಲಿ ಮನಸ್ಸು ಬದಲಿಸಿದ ಅಂಬಟಿ ರಾಯುಡು: ನಿವೃತ್ತಿ ಹಿಂಪಡೆಯಲು ನಿರ್ಧಾರ!

ಐಸಿಸಿ ಕ್ರಿಕೆಟ್ ವಿಶ್ವಕಪ್ ಆಡಿದ ಟೀಂ ಇಂಡಿಯಾದ ಆಡುವ ಅವಕಾಶ ಸಿಗದೆ ಹತಾಶರಾಗಿ ನಿವೃತ್ತಿ ಘೋಷಿಸಿದ್ದ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಈಗ ಯೂ ಟರ್ನ್ ಹೊಡೆದಿದ್ದಾರೆ. ಮತ್ತೊಮ್ಮೆ ಕ್ರಿಕೆಟ್ ಮೈದಾನಕ್ಕೆ ಇಳಿಯಲು ಉತ್ಸುಕರಾಗಿರುವುದಾಗಿ ಅಧಿಕೃತವಾಗಿ ಮನವಿ ಮಾಡಿದ್ದಾರೆ.

 

 

ಹೈದರಾಬಾದ್ ಕ್ರಿಕೆಟ್ ಮಂಡಳಿ (ಎಚ್‍ಡಿಎ)ಗೆ ಪತ್ರ ಬರೆದಿರುವ ಆಂಧ್ರ ಪ್ರದೇಶದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಟಿ ರಾಯುಡು, ಜೂನ್ ತಿಂಗಳಲ್ಲಿ ತುಂಬಾ ಭಾವನಾತ್ಮಕವಾಗಿ ನಿವೃತ್ತಿ ಘೋಷಿಸಿದ್ದೆ. ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ಪಡೆಯುತ್ತೇನೆ ಹಾಗೂ ಎಲ್ಲ ಮಾದರಿಯ ಕ್ರಿಕೆಟ್ ಆಡಲು ನಾನು ಸಿದ್ಧರುವೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕಷ್ಟದ ಸಮಯದಲ್ಲಿ ತಮಗೆ ಬೆಂಬಲ ಸೂಚಿಸಿದ ಚೆನ್ನೈ ಸೂಪರ್ ಕಿಂಗ್ಸ್, ವಿವಿಎಸ್ ಲಕ್ಷ್ಮಣ್ ಹಾಗೂ ನೊವೆಲ್ ಡೇವಿಡ್ ಅವರನ್ನು ರಾಯುಡು ಸ್ಮರಿಸಿದ್ದಾರೆ. ಅದೇ ರೀತಿ ಸೆಪ್ಟೆಂಬರ್ 10ರಿಂದ ಹೈದರಾಬಾದ್ ತಂಡದ ಆಯ್ಕೆಗೆ ಲಭ್ಯವಿರುವುದಾಗಿ ಖಚಿತಪಡಿಸಿದ್ದು, ಯುವ ಕ್ರಿಕೆಟಿಗರೊಂದಿಗೆ ಅನುಭವ ಹಂಚಿಕೊಳ್ಳಲು ಕಾತರದಲ್ಲಿರುವುದಾಗಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top