fbpx
ಸಮಾಚಾರ

“ನಮಗೆ ಕನ್ನಡಧ್ವಜ ಬೇಕಾಗಿಲ್ಲ” ಸಿಟಿ ರವಿ ಹೇಳಿಕೆ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ.

ಕರ್ನಾಟಕ್ಕೆ ಪ್ರತ್ಯೇಕವಾದ ಅಧಿಕೃತ ನಾಡ ಧ್ವಜದ ಅಗತ್ಯವಿಲ್ಲ, ನಮಗೆ ರಾಷ್ಟ್ರ ಧ್ವಜವೇ ಒಂದೇ ಸಾಕು ಎನ್ನುವ ಸಚಿವ ಸಿ.ಟಿ. ರವಿ ಹೇಳಿಕೆ ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸಿದೆ. ಸಚಿವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಸಿಟಿ ರವಿ ಹೇಳಿಕೆ ವಿರೋಧಿಸಿ ಆಂದೋಲನ ಆರಂಭಗೊಂಡಿದೆ.

ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸಿಟಿ ರವಿ ಪ್ರತ್ಯೇಕ ಧ್ವಜ ಹೊಂದಲು ಸಾಧ್ಯವಿಲ್ಲ ಅಂದಿದ್ದಾರೆ. ದೇಶಕ್ಕೊಂದೇ ಧ್ವಜ ಅದು ತ್ರಿವರ್ಣ ಧ್ವಜ. ರಾಷ್ಟ್ರ ಧ್ವಜಕ್ಕೆ ಪರ್ಯಾಯ ಧ್ವಜ ಹೊಂದಲು ಸಾಧ್ಯವಿಲ್ಲ. ಕನ್ನಡದ ಧ್ವಜ ಸಾಂಸ್ಕೃತಿಕ ಧ್ವಜ. ಆದರೆ ದೇಶಕ್ಕೆ ಸಾಂವಿಧಾನಿಕ ವಾಗಿ ಹೊಂದಿರುವುದು ತ್ರಿವರ್ಣ ಧ್ವಜವೊಂದೆ ಅಂದಿದ್ದಾರೆ.

ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಹೊಂದುವ ಸಂಬಂಧ ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಯಾವುದೇ ನಿರ್ಣಯ ಕೈಗೊಳ್ಳದೇ ಇರುವುದರ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ‘ರಾಷ್ಟ್ರಕ್ಕೊಂದೇ ಧ್ವಜ, ಪ್ರತ್ಯೇಕ ಧ್ವಜ ಹೊಂದುವ ಅಗತ್ಯವಿಲ್ಲ’ ಎಂದರು.

ಸದ್ಯ ಸಿಟಿ ರವಿ ಹೇಳಿಕೆಗೆ ರಾಜ್ಯಾದ್ಯಂತ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಪರ ಸಂಘಟನೆಗಳು ಸಿಟಿ ರವಿ ವಿರುದ್ಧ ಹೋರಾಟಕ್ಕೆ ಮುಂದಾಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top