fbpx
ಸಮಾಚಾರ

ಕೆಚ್ಚೆದೆಯ ಕನ್ನಡಿಗರಿಗಾಗಿ ಗೀತಾದಲ್ಲೊಂದು ಕನ್ನಡಾಭಿಮಾನದ ಹಾಡು!

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಗೀತಾ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸುವ ಈ ಹಾಡಿಗೆ ಕಂಚಿನ ಕಂಠ ಧಾರೆಯೆರೆದದ್ದು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್. ಕನ್ನಡದ ಕಾಳಜಿ, ಕನ್ನಡದ ಅರಿವು, ಕನ್ನಡಿಗರಿಗಾಗಿ ಮಾಡಿರುವ ಈ ಗೀತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

 

ಕನ್ನಡವೇ ಸತ್ಯ ಎಂಬ ಸಾಲಿನಿಂದ ಶುರುವಾಗೋ ಈ ಹಾಡನ್ನು ಖ್ಯಾತ ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಬರೆದಿದ್ದಾರೆ. ಇದಕ್ಕೆ ಆ ಸಾಲುಗಳ ಆವೇಗಕ್ಕೆ ತಕ್ಕುದಾದಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿಯಾಗಿದ್ದಾರೆ. ನೊಬಿನ್ ಪೌಲ್ ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಈ ಲಿರಿಕಲ್ ವೀಡಿಯೋ ಬಿಡುಗಡೆಯಾಗಿ ಕೆಲವೇ ಕ್ಷಣಗಳಲ್ಲಿ ಹೆಚ್ಚು ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದೆ. ಅದೇ ರೀತಿ ಕನ್ನಡತನದ ಘನತೆ ಮತ್ತು ಕೆಚ್ಚು ತುಂಬಿಕೊಂಡಂತಿರೋ ಈ ಹಾಡಿಗೆ ಒಳ್ಳೆಯ ಕಮೆಂಟುಗಳೂ ಬರುತ್ತಿವೆ. ಇದು ಗಣೇಶ್ ಸೇರಿದಂತೆ ಚಿತ್ರರಂಡ ಖುಷಿಗೊಳ್ಳುವಂತೆ ಮಾಡಿದೆ.

ಇನ್ನು ಈ ಹಾಡಿನ ಕುರಿತು ಸಂತಸ ವ್ಯಕ್ತಪಡಿಸಿರುವ ಗೋಲ್ಡನ್​ ಸ್ಟಾರ್​​ ಗಣೇಶ್ ‘ಕನ್ನಡ ಕನ್ನಡ ಕನ್ನಡವೇ ಸತ್ಯ..ಕನ್ನಡ ಕನ್ನಡ ಕನ್ನಡವೇ ನಿತ್ಯ…ಎಂದು ಆರಂಭವಾಗುವ ಹಾಡು, ಕನ್ನಡದ ಗರಿಮೆ, ಹಿರಿಮೆ ಸಾರುತ್ತಿರುವ ಈ ಹಾಡು ನಮ್ಮೆಲ್ಲಾ ಕೆಚ್ಚೆದೆಯ ಕನ್ನಡ ಹೋರಾಟಗಾರರಿಗೆ, ಗೋಕಾಕ್ ಹೋರಾಟದಲ್ಲಿ ಹೋರಾಡಿದ ಕಲಿಗಳಿಗೆ, ಸ್ವಾಭಿಮಾನಿ ಕನ್ನಡಿಗ ಬಂಧುಗಳಿಗೆ ಅರ್ಪಣೆ.’ ಅಂತ ಟ್ವಿಟರ್​​​​ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top