fbpx
ಸಮಾಚಾರ

ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಕಿಚ್ಚನ ಪೈಲ್ವಾನ್!

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಮೇಲಿನ ಕುತೂಹಲ ದಿನೇ ದಿನೇ ಹೆಚ್ಚುತ್ತಲೇ ಇದೆ. ಕನ್ನಡವೂ ಸೇರಿ ಒಟ್ಟು 5 ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ಸ್ವತಃ ಕಿಚ್ಚನ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದರೇ ಮಾಮೂಲಿ ಪ್ರೇಕ್ಷಕರಲ್ಲೂ ವಿಭಿನ್ನ ಕ್ರೇಜ್ ಹುಟ್ಟುಹಾಕುತ್ತಿದೆ. ಬಿಡುಗಡೆ ದಿನಾಂಕ ಸೆಪ್ಟೆಂಬರ್ 12ಕ್ಕೆ ಫಿಕ್ಸ್ ಆಗಿದೆ.

ಉತ್ತರ ಭಾರತದಲ್ಲಿಯೇ 1500ಕ್ಕೂ ಹೆಚ್ಚು ಥಿಯೇಟರ್ಸ್, ಕರ್ನಾಟಕದಲ್ಲಿ 500+, ಆಂಧ್ರದಲ್ಲಿ 300+, ತಮಿಳಿನಲ್ಲಿ 200+, ಕೇರಳದಲ್ಲಿ 100+ ಹಾಗೂ ಹೊರ ದೇಶಗಳಲ್ಲಿ ಸುಮಾರು 500 ಥಿಯೇಟರುಗಳಲ್ಲಿ ಪೈಲ್ವಾನ್ ರಿಲೀಸ್ ಆಗಲಿದೆ. ಒಟ್ಟಾರೆಯಾಗಿ ಜಗತ್ತಿನಾದ್ಯಂತ ಒಂದೇ ದಿನ 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆಯಂತೆ.

ಪೈಲ್ವಾನ್ ಚಿತ್ರವನ್ನು ಕರ್ನಾಟಕದಲ್ಲಿ KRG ಸ್ಟುಡಿಯೋಸ್, ತೆಲುಗು ರಾಜ್ಯಗಳಲ್ಲಿ ವಾರಾಹಿ, ತಮಿಳುನಾಡಿನಲ್ಲಿ YNOTX ಮಾರ್ಕೆಟಿಂಗ್ & ಡಿಸ್ಟ್ರಿಬ್ಯೂಷನ್, ಕೇರಳದಲ್ಲಿ ಪಲ್ಲವಿ ರಿಲೀಸ್, ಹಿಂದಿಯಲ್ಲಿ ಜೀ ಸ್ಟುಡಿಯೋಸ್ ಸಿನಿಮಾ ವಿತರಣೆ ಮಾಡಲಿವೆ.

ಈ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿಯಲಿದೆ. ಕನ್ನಡದ ಮಟ್ಟಿಗೆ ಹಿಂದಿದ್ದ ದಾಖಲೆ ‘ಕೆ.ಜಿ.ಎಫ್’ ಸಿನಿಮಾದ್ದು. ‘ಕೆ.ಜಿ.ಎಫ್’ ಒಟ್ಟು 2200 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಉತ್ತರ ಭಾರತದಲ್ಲೇ 1500 ಚಿತ್ರಮಂದಿರಗಳನ್ನು ಆವರಿಸಿಕೊಂಡಿತ್ತು. ಇದೀಗ ಪೈಲವಾನ್ ಚಿತ್ರ ಆ ದಾಖಲೆಯನ್ನು ಮುರಿದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top