fbpx
ಸಮಾಚಾರ

PM ಮೋದಿಯ ಜನಸಂಖ್ಯಾ ನಿಯಂತ್ರಣ ರಾಷ್ಟ್ರೀಯ ಯೋಜನೆಗೆ ದಕ್ಷಿಣ ರಾಜ್ಯಗಳ ವಿರೋಧ!

ಜನಸಂಖ್ಯೆಯ ಸ್ಫೋಟವನ್ನು ನಿಯಂತ್ರಿಸಲು ರಾಷ್ಟ್ರೀಯ ‘ಯೋಜನೆ’ ರೂಪಿಸುವುದಾಗಿ ಹೇಳಿರುವ ಮೋದಿಯ ನಡೆಯನ್ನು ಭಾರತದ ದಕ್ಷಿಣ ರಾಜ್ಯಗಳು ಸಾಕಷ್ಟು ವಿರೋಧಿಸುತ್ತಿದ್ದಾರೆ. ಉತ್ತರ ಭಾರತಕ್ಕೆ ಹೋಲಿಸದರೆ ದಕ್ಷಿಣ ಭಾರತದಲ್ಲಿ ಜನಸಂಖ್ಯಾ ಸಮಸ್ಯೆ ಹೆಚ್ಚಿಲ್ಲ, ಜನಸಂಖ್ಯಾ ಸಮಸ್ಯೆ ತಲೆದೋರಿರುವುದು ಉತ್ತರ ಭಾರತಕ್ಕೆ ಹಾಗಾಗಿ ಇಡೀ ದೇಶಕ್ಕೆ ಈ ಯೋಜನೆ ರೂಪಿಸುವುದು ಮಾರಕ,, ಈ ಯೋಜನೆಯಿಂದ ದಕ್ಷಿಣ ರಾಜ್ಯಗಳಿಗೆ ಮುಂದಿನ ವರ್ಷಗಳಲ್ಲಿ ಸಮಸ್ಯೆಯುಂಟು ಮಾಡಲಿದೆ ಎಂದು ದಕ್ಷಿಣ ಭಾರತದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

 

 

100 ಗಂಡು – 100 ಹೆಣ್ಣಿನ ಜೋಡಿ ಇದೆ ಅಂದುಕೊಳ್ಳಿ. ಜನಸಂಖ್ಯೆ ಏರದೇ, ಇಳಿಯದೇ ಸಮವಾದ ಮಟ್ಟದಲ್ಲಿ ಒಂದು ತಲೆಮಾರನ್ನು ಇನ್ನೊಂದು ತಲೆಮಾರು ರಿಪ್ಲೇಸ್ ಮಾಡಬೇಕು ಅಂದರೆ ಎಷ್ಟು ಮಕ್ಕಳಾಗಬೇಕು? 200 ಅಲ್ಲವೇ? ಬರ, ನೆರೆ, ತಡವಾದ ಮದುವೆ, ತಡವಾಗಿ ಮಕ್ಕಳಾಗುವುದು, ಚಿಕ್ಕವಯಸ್ಸಲ್ಲೇ ಮಕ್ಕಳು ಸಾಯುವುದು, ಹೀಗೆ ಹಲವಾರು ಅಂಶಗಳನ್ನು ಇಟ್ಟುಕೊಂಡು ಸಮತೋಲನದ ರಿಪ್ಲೇಸ್ಮೆಂಟ್ ಮಟ್ಟಕ್ಕೆ 210 ಮಕ್ಕಳಿರಬೇಕು ಅನ್ನುತ್ತೆ ವಿಶ್ವದ ಎಲ್ಲ ಪ್ರಮುಖ ದೇಶಗಳ ಜನಸಂಖ್ಯೆ ನೀತಿ.

 

 

ಈಗ ಕರ್ನಾಟಕಕ್ಕೆ ಬರೋಣ. ನಮ್ಮಲ್ಲಿ ಪ್ರತಿ ನೂರು ಗಂಡ-ಹೆಂಡಿರ ಜೋಡಿಗೆ 170 ಮಕ್ಕಳಾಗುತ್ತಿವೆ. ಕೇರಳದಲ್ಲಿ 170, ಆಂಧ್ರಪ್ರದೇಶದಲ್ಲಿ 160, ತೆಲಂಗಾಣದಲ್ಲಿ 170, ತಮಿಳುನಾಡಿನಲ್ಲಿ 160 ಮಕ್ಕಳಾಗುತ್ತಿವೆ. ಎಲ್ಲವೂ ರಿಪ್ಲೇಸ್ಮೆಂಟ್ ಲೆಕ್ಕವಾದ 210ಕ್ಕಿಂತ ಕೆಳಗೆ ಹೋಗಿದೆ!

ಇದೇ ವೇಳೆ ಬಿಹಾರದಲ್ಲಿ 100ಗಂಡು -100ಹೆಣ್ಣಿಗೆ 320 ಮಕ್ಕಳಾಗುತ್ತಿವೆ, ಉತ್ತರಪ್ರದೇಶದಲ್ಲಿ 300, ಮಧ್ಯಪ್ರದೇಶದಲ್ಲಿ 270, ರಾಜಸ್ಥಾನದಲ್ಲಿ 260 ಮಕ್ಕಳಾಗುತ್ತಿವೆ.

ತಮ್ಮ ಒಕ್ಕೂಟ ಸರಕಾರ ಇಡೀ ಬಾರತದ TFRಅನ್ನು 2.1ಕ್ಕೆ ತರುವ ಗುರಿಯಿಂದ ಎಲ್ಲ ರಾಜ್ಯಗಳಲ್ಲೂ ಮಂದಿಯೆಣಿಕೆಗೆ ಕಡಿವಾಣ ಹಾಕಲು ಹೊರಟಿದೆ. ಈಗಾಗಲೇ ಸುಮಾರು 2.1 ರಶ್ಟು ಇಲ್ಲವೇ ಅದಕ್ಕೂ ಕಡಿಮೆ TFR ಸಾದಿಸಿರುವ ರಾಜ್ಯಗಳಲ್ಲೂ ಮಂದಿಯೆಣಿಕೆಯನ್ನು ಮತ್ತಶ್ಟು ಕಡಿಮೆ ಮಾಡಲು ಒತ್ತಾಯ ಪಡಿಸಲಾಗುತ್ತಿದೆ. ಆದರೆ ಇದರಿಂದ ಮುಂದೆ ಆಗುವ ತೊಂದರೆಗಳ ಬಗ್ಗೆ ಕೊಂಚವೂ ಯೋಚಿಸದೆ ಎಲ್ಲ ರಾಜ್ಯ ಸರಕಾರಗಳೂ ಒಕ್ಕೂಟದ ಈ ಹಮ್ಮುಗೆಯನ್ನು ಕುರುಡಾಗಿ ನಡೆಸುತ್ತಿವೆ. ಮೇಲೆ ನೋಡಿದಂತೆ ನಿಜವಾಗಿಯೂ ಈ ಸಮಸ್ಯೆ ಇರುವುದು ಕೆಲವು ರಾಜ್ಯಗಳಲ್ಲಿ. ಹಾಗಾಗಿ ಈ ಸಮಸ್ಯೆಯನ್ನು ಅಲ್ಲಿಯೇ ಎದುರಿಸಿ ಅಲ್ಲಿಯೇ ಬಗೆಹರಿಕೆಯನ್ನು ಕಂಡುಕೊಳ್ಳಬೇಕು.

ಆದರೆ ಇಂದು ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರಂತೆ’ ಎಂಬ ಗಾದೆ ಮಾತಿನಂತೆ ನಾವು ಕೆಲವು ರಾಜ್ಯಗಳಲ್ಲಿರುವ ಸಮಸ್ಯೆಗೆ, ಸಮಸ್ಯೆಯೇ ಇಲ್ಲದೆಡೆಗಳಲ್ಲಿ ಪರಿಹಾರವನ್ನು ಕಂಡುಕೊಳ್ಳಲು ಹೊರಟಿದ್ದೇವೆ. ಮೇಲೆ ಹೇಳಿದ ಕರ್ನಾಟಕದ ಗಟನೆಯು ನಮ್ಮ ಈ ಎಡವಟ್ಟಿಗೆ ಒಂದು ತಿಳಿಯಾದ ಉದಾಹರಣೆ.

ಇದರ ಅರ್ಥ? ಇನ್ನೂ ಇಪ್ಪತ್ತೈದು ವರ್ಷದಲ್ಲಿ ದಕ್ಷಿಣ ಭಾರತದಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚಿದರೆ ಉತ್ತರದಲ್ಲಿ ವಯಸ್ಸಿನ ಮಕ್ಕಳ ಸಂಖ್ಯೆ ಹೆಚ್ಚುತ್ತದೆ. ಆರ್ಥಿಕ ಅವಕಾಶಗಳು, ಒಳ್ಳೆಯ ಕಾನೂನು ಸುವ್ಯವಸ್ಥೆ, ಒಳ್ಳೆಯ ಶಿಕ್ಷಣ ವ್ಯವಸ್ಥೆ ಎಲ್ಲ ಇರುವ, ಆದರೆ ಭಾರತದ ಒಕ್ಕೂಟದಲ್ಲಿ ರಾಜಕೀಯವಾಗಿ ಅಂತಹ ಮಹತ್ವವಿಲ್ಲದ ದಕ್ಷಿಣದ ರಾಜ್ಯಗಳಿಗೆ ಉತ್ತರದ ರಾಜ್ಯಗಳಿಂದ ಏನಾಗಬಹುದು?

ಕೊರಿಯಾದ TFR 1.23 ಇದ್ದರೆ ಜಪಾನಿನ TFR 1.21 ಇತ್ತು. ಈ ಎರಡೂ ದೇಶದ ಕೂಡಣಗಳಲ್ಲಿ ಕುಸಿದಿರುವ TFRನಿಂದಾಗಿ ದುಡಿಯಬಲ್ಲ ಚಿಕ್ಕ ವಯಸ್ಸಿನ ಮಂದಿ ಕಡಿಮೆಯಾಗಿದ್ದಾರೆ ಮತ್ತು ವಯಸ್ಸಾಗಿ ದುಡಿಯದೇ ಕುಳಿತಿರುವ ಮಂದಿಯನ್ನು ಸಾಕುವ ಹೊಣೆಗಾರಿಕೆ ಚಿಕ್ಕ ವಯಸ್ಸಿನ ಮಂದಿಯ ಮೇಲೆ ಬಿದ್ದಿದೆ. ಹೀಗೇ ಮುಂದುವರಿದರೆ ಈ ದೇಶಗಳ ಇಡೀ ಹಣಕಾಸಿನ ವ್ಯವಸ್ತೆ ದುಡಿಯುವ ಕಯ್ಗಳು ಸಾಕಾಗದೆ ಕುಸಿದು ಬೀಳುವ ಆತಂಕವಿದೆ. ಹಾಗಾಗಿ TFR ಹೆಚ್ಚಿಸಿಕೊಳ್ಳಲು ಅಲ್ಲಿನ ಸರಕಾರಗಳು ಹಲವಾರು ಹಮ್ಮುಗೆಗಳನ್ನು ಹಮ್ಮಿಕೊಂಡಿವೆ.

ಯಾವುದೇ ಕೂಡಣದ ಮಂದಿಯೆಣಿಕೆ ಸರಿತೂಕವನ್ನು ಕಾಪಾಡಿಕೊಳ್ಳಬೇಕಾದರೆ ಅಲ್ಲಿನ TFR 2.1ರಶ್ಟು ಇರಬೇಕು. ಇದಕ್ಕೂ ಕಡಿಮೆಯಾದಲ್ಲಿ ಈಗ ತೆಂಕಣ ಕೊರಿಯಾ ಮತ್ತು ಜಪಾನ್ ಎದುರಿಸುತ್ತಿರುವ ಸಮಸ್ಯೆಯೇ ಅದೂ ಎದುರಿಸಬೇಕಾಗುತ್ತದೆ. ಮುಂದೆ ಆ ಜನಾಂಗ ಅಳಿದು ಹೋಗುವ ಆತಂಕವೂ ಇರುತ್ತದೆ. ಈಗ 7 ಕೋಟಿಯಶ್ಟು ಮಂದಿಯೆಣಿಕೆ ಇರುವ ಕನ್ನಡಿಗರ TFR 2.0 ಇದೆ. ಕರ್ನಾಟಕದ ಈಗಿನ ಮಂದಿಯೆಣಿಕೆ ಮತ್ತು ಮಂದಿದಟ್ಟಣೆಗಳನ್ನು ಗಮನಕ್ಕೆ ತೆಗೆದುಕೊಂಡರೆ ಇದೇನು ತೀರಾ ಆತಂಕ ಪಡುವ ವಿಶಯವೇನಲ್ಲ. ಹಾಗಾಗಿ, ಇಂದಾಗಲಿ ಮುಂಬರುವ ವರುಶಗಳಲ್ಲಾಗಲಿ, ಕರ್ನಾಟಕಗೆ ಮಂದಿಯೆಣಿಕೆಯ ಏರಿಕೆಯ ಸಮಸ್ಯೆ ಇಲ್ಲ. ಕರ್ನಾಟಕದ ಮಟ್ಟಿಗೆ ನೋಡಿದರೆ ಈಗಿರುವ ಮಂದಿಯೆಣಿಕೆಯನ್ನು ಅವರು ಎಚ್ಚರದಿಂದ ಸರಿಯಾಗಿ ಕಾಪಾಡಿಕೊಂಡು ಹೋಗುವತ್ತ ಗಮನ ಹರಿಸಬೇಕೇ ಹೊರತು, ದೇಶದ ಮಂದಿಯೆಣಿಕೆ ಹೆಚ್ಚಿದೆ ಎಂದು ಕುರುಡಾಗಿ ತಮ್ಮ ಮಂದಿಯೆಣಿಕೆಯ ಏರಿಕೆಗೆ ಕಡಿವಾಣ ಹಾಕಬಾರದು. ತಮ್ಮ ಮಂದಿಯೆಣಿಕೆ ಮುಂಬರುವ ವರುಶಗಳಲ್ಲಿ ಎಶ್ಟಿರಬೇಕು ಎಂಬುದನ್ನು ಯೋಚಿಸಿ ಅದರ ತಕ್ಕಂತೆ ತೀರ್‍ಮಾನಗಳನ್ನು ತೆಗೆದುಕೊಳ್ಳ ಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top