fbpx
ಸಮಾಚಾರ

ಚಿತ್ರರಂಗದಿಂದ ಬ್ರೇಕ್ ಪಡೆದು ಸದ್ಯವೇ ಕೀನ್ಯಾಗೆ ಹೊರಡಲಿದ್ದಾರೆ ನಟ ದರ್ಶನ್‌

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿಯ ಬಗ್ಗೆ ಬಿಡಿಸಿ ಹೇಳೋ ಅಗತ್ಯವೇನಿಲ್ಲ. ಅವರ ಫಾರ್ಮ್ ಹೌಸ್, ಅಲ್ಲಿರೋ ಹಸು, ಕುದುರೆಗಳ ಕಥೆಯೆಲ್ಲ ಅಭಿಮಾನಿಗಳ ಪಾಲಿಗೆ ಹೊಸತೇನಲ್ಲ. ದರ್ಶನ್ ಮೈಸೂರು ಮೃಗಾಲಯದಲ್ಲಿನ ಕೆಲ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಲಹುತ್ತಿರೋದೂ ಕೂಡಾ ತಿಳಿದದ್ದೇ. ಇನ್ನು ಬೆಂಗಳೂರಿನ ದರ್ಶನ್ ಅವರ ಮನೆ ಮುಂದೆ ತರಹೇವಾರಿ ಪ್ರಬೇಧದ ನಾಯಿಗಳು ಕಾವಲಿಗಿರುತ್ತವೆ.

ವನ್ಯಜೀವಿಗಳ ಫೋಟೋಗ್ರಫಿಯಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು, ಇದೀಗ ವಿವಿಧ ಬಗೆಯ ಪ್ರಾಣಿಗಳನ್ನು ಶೂಟ್‌ ಮಾಡಲು ಆಫ್ರಿಕಾ ಖಂಡದ ಕೀನ್ಯಾದ ಕಾಡುಗಳಿಗೆ ತೆರಳಲಿದ್ದಾರೆ. ಅದಕ್ಕಾಗಿ ಈಗಿನಿಂದಲೇ ಭರ್ಜರಿ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಡಿ ಬಾಸ್ ದರ್ಶನ್ ಸೆಪ್ಟೆಂಬರ್ 20ಕ್ಕೆ ಕೀನ್ಯಾ ಪ್ರವಾಸಕ್ಕೆ ಹೊರಡಲಿದ್ದಾರೆ.

ಅಂತೆಯೇ ಆಫ್ರಿಕಾ ಕಾಡಿನಲ್ಲಿರುವ ಹುಲಿ, ಸಿಂಹ, ಚಿರತೆಗಳ ವಿವಿಧ ಭಂಗಿಗಳ ಫೋಟೋ ‘ಗಜ’ನ ಕ್ಯಾಮೆರಾದಲ್ಲಿ ಸೆರೆ ಆಗಲಿದೆ. ಚಾಲೆಂಜಿಂಗ್ ಸ್ಟಾರ್ ಅವರ ಇಂತಹದೊಂದು ಪ್ಲ್ಯಾನ್​ನ ಉದ್ದೇಶ ಏನು ಎಂಬುದು ಮಾತ್ರ ತಿಳಿದು ಬಂದಿಲ್ಲ. ಇನ್ನು ದರ್ಶನ್ ಸೆರೆ ಹಿಡಿಯಲಾಗುವ ಫೋಟೋಗಳ ಮಾರಾಟದಿಂದ ಒಂದಷ್ಟು ಪ್ರಾಣಿಗಳ ದತ್ತು ತೆಗೆದುಕೊಳ್ಳುವ ಯೋಜನೆ ಕೂಡ ಇದೆ ಎನ್ನಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top