fbpx
ಸಮಾಚಾರ

ಯುವಕರ ಬಳಿ ಖರ್ಚಿಗೆ ದುಡ್ಡು ಕೇಳಿದ ಹುಚ್ಚ ವೆಂಕಟ್‌!

ನಿನ್ನೆಯಷ್ಟೇ ಮಡಿಕೇರಿಯ ಕೆಎಸ್ ಆರ್ ಟಿಸಿ ಡಿಪೋ ಬಳಿ ನಿಂತಿದ್ದ ಕಾರ್ ಮೇಲೆ ಸುಖಾಸುಮ್ಮನೆ ತಮ್ಮ ಸಿಟ್ಟು ತೋರಿಸಿದ್ದಾರೆ. ಕಾರ್ ನ ಗಾಜು ಒಡೆದು ಹಾಕಿ ರಂಪಾಟ ಮಾಡಿದ ಹುಚ್ಚ ವೆಂಕಟ್ ಗೆ, ಸ್ಥಳೀಯರು ಸಖತ್ತಾಗೇ ಪಾಠ ಕಲಿಸಿದ್ದಾರೆ. ರೊಚ್ಚಿಗೆದ್ದ ಸ್ಥಳೀಯರು ಹುಚ್ಚ ವೆಂಕಟ್ ಗೆ ಹಿಗ್ಗಾಮುಗ್ಗ ಗೂಸಾ ಕೊಟ್ಟಿದ್ದಾರೆ.

ಆದರೆ ಅದಕ್ಕೂ ಮುನ್ನ ಗುರುವಾರ ಸಂಜೆ 5.10ರ ಸಮಯದಲ್ಲಿ ಮಡಿಕೇರಿಯತ್ತ ಕಾರಿನಲ್ಲಿ ಹೋಗುತ್ತಿದ್ದ ಹುಚ್ಚ ವೆಂಕಟ್‌, ಸುಂಟಿಕೊಪ್ಪ ಸಮೀಪದ ಸೆವೆಂತ್‌ ಮೈಲ್‌ನಲ್ಲಿ ರಸ್ತೆ ಬದಿ ನಿಂತಿದ್ದ ಮೂವರು ಯುವಕರನ್ನು ಕಂಡು ಕಾರನ್ನು ನಿಲ್ಲಿಸಿದ್ದಾನೆ.

ಬಳಿಕ ಅವರ ಬಳಿಗೆ ತೆರಳಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ‘ಖರ್ಚಿಗೆ ದುಡ್ಡು ಕೊಡಿ’ ಎಂದು ಯುವಕರನ್ನು ಕೇಳಿದ್ದಾನೆ. ಬಳಿಕ ಆ ಯುವಕರು ವೆಂಕಟ್ ಅವರಿಗೆ 100 ರೂಪಾಯಿಯನ್ನು ಕೊಟ್ಟಿದ್ದಾರೆ. ದುಡ್ಡು ಸಿಕ್ಕಿದ ಕೂಡಲೇ ಕಾರನ್ನು ಹತ್ತಿ ಮಡಿಕೇರಿ ಕಡೆಗೆ ಪ್ರಯಾಣ ಬೆಳೆಸಿದ ಎಂದು ಯುವಕರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top