fbpx
ಸಮಾಚಾರ

ಸಂಸದ ಮತ್ತು ಐಎಎಸ್ ಅಧಿಕಾರಿ ಟ್ವಿಟ್ಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಗೆ ಟ್ವಿಟ್ಟಿಗರ ಮೆಚ್ಚುಗೆ!

ಸಂಸದ ಜಿಸಿ ಚಂದ್ರ ಶೇಖರ್ ಮತ್ತು ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು ಟ್ವಿಟ್ಟರ್ ನಲ್ಲಿ ನಡೆಸಿರುವ ಸಂಭಾಷಣೆ ಈಗ ಭಾರಿ ಮೆಚ್ಚುಗೆಗೆ ವ್ಯಕ್ತಪಡಿಸುತ್ತಿದ್ದಾರೆ.. ಸಾಮಾಜಿಕ ಜಾಲತಾಣಗಳನ್ನೂ ಹೇಗೆಲ್ಲಾ ರೀತಿ ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದನ್ನೂ ತೋರಿಸಿದ್ದಾರೆ.

 

 

“ಕೆಲಸದಲ್ಲಿ ನಿರತರಾಗಿರುವಾಗ ಕೂಲಿ ಕಾರ್ಮಿಕರ ಮಕ್ಕಳು ರಸ್ತೆ ಬದಿಯಲ್ಲಿ ಇರುವುದು ಸಾಮಾನ್ಯ.ಇವರಿಗೂ ಇನ್ನಿತರ ಮಕ್ಕಳಿಗೆ ಯಾವದೇ ವ್ಯತ್ಯಾಸವಿಲ್ಲ. ಶಿಕ್ಷಣದಿಂದ ವಂಚಿತರಾಗಿರುವುದು ನಮ್ಮ ದೌರ್ಭಗ್ಯ. ಕಾರ್ಮಿಕ ಇಲಾಖೆಯಿಂದ ಈ ಬಗ್ಗೆ ಗಮನಹರಿಸಿ ಮೊಬೈಲ್ ಶಾಲೆಯನ್ನು ಪ್ರಾರಂಭಿಸಿದಲ್ಲಿ ಅವರ ಭವಿಷ್ಯಕ್ಕೆ ದಾರೀ ದೀಪವಾಗುತ್ತದೆ.” ಎಂದು ಸಂಸದ ಜಿಸಿ ಚಂದ್ರಶೇಖರ್ ಟ್ವೀಟ್ ಮಾಡಿದ್ದರು.

 

 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು “ನಾವು ಸಹ ಈ ಸಮಸ್ಯೆಯನ್ನು ಗಮನಿಸಿದ್ದೇವೆ. ಶಾಲೆಯನ್ನು ಪ್ರಾರಂಭಿಸುವುದು ಉತ್ತಮವೇ ಆದರೆ ಅದಕ್ಕೂ ಮುನ್ನ ಬಹುಶಃ ನಾವು ಮೊಬೈಲ್ ಲೈಬ್ರರಿ ಪ್ರಾರಂಭಿಸಬೇಕು. ನಿಮ್ಮ ಸಂಸದರ ನಿಧಿಯಿಂದ ನೀವು ಇದನ್ನು ಬೆಂಬಲಿಸಿದ್ದರೂ ಸಹ ಚೆನ್ನಾಗಿರುತ್ತದೆ.”

 

 

ಮಣಿವಣ್ಣನ್ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸಂಸದ “ಅಂತಹ ಉದಾತ್ತ ಕಾರಣಕ್ಕಾಗಿ ಎಂಪಿಎಎಲ್ಎಡಿ ನಿಧಿಯನ್ನು ಖರ್ಚು ಮಾಡಲು ನಾನು ಹೆಚ್ಚು ಸಂತೋಷಪಡುತ್ತೇನೆ. ವಾಹನ ಮತ್ತು ಸೌಕರ್ಯಗಳ ಸಂಗ್ರಹಕ್ಕೆ ಕಾರ್ಮಿಕ ಇಲಾಖೆಯು ಅದರ ನಿರ್ವಹಣೆಯನ್ನು ತೆಗೆದುಕೊಳ್ಳಬಹುದೇ? ನೀವು ಸೂಚಿಸಿದಂತೆ ಮೊಬೈಲ್ ಲೈಬ್ರರಿಗಳೊಂದಿಗೆ ಪ್ರಾರಂಭಿಸೋಣ” ಎಂದಿದ್ದಾರೆ.

 

 

“ಅದು ನಿಜವಾಗಿಯೂ ಚಿಂತನಶೀಲ. ನಿಮ್ಮ ಪ್ರಸ್ತಾಪವನ್ನು ಸಿದ್ಧಪಡಿಸಲು ದಯವಿಟ್ಟು ನನಗೆ ಎರಡು ದಿನಗಳನ್ನು ನೀಡಿ.” ಎಂದು ಮಣಿವಣ್ಣನ್ ಟ್ವೀಟ್ ಮಾಡಿದ್ದಾರೆ..

ಸಂಸದ ಮತ್ತು ಐಎಎಸ್ ಅಧಿಕಾರಿ ಟ್ವಿಟ್ಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಯನ್ನು ನೋಡಿರುವ ನೆಟ್ಟಿಗರು ಮೆಚ್ಚುಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top