fbpx
ಸಮಾಚಾರ

ರಾಯುಡುಗೆ ‘ಭಾರತದ ಅಫ್ರಿದಿ’ ಎಂದು ಟ್ರೋಲ್ ಮಾಡಿದ ನೆಟ್ಟಿಗರು! ಕಾರಣವೇನು ಗೊತ್ತಾ?

ಐಸಿಸಿ ಕ್ರಿಕೆಟ್ ವಿಶ್ವಕಪ್ ಆಡಿದ ಟೀಂ ಇಂಡಿಯಾದ ಆಡುವ ಅವಕಾಶ ಸಿಗದೆ ಹತಾಶರಾಗಿ ನಿವೃತ್ತಿ ಘೋಷಿಸಿದ್ದ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಈಗ ಯೂ ಟರ್ನ್ ಹೊಡೆದಿದ್ದಾರೆ. ಮತ್ತೊಮ್ಮೆ ಕ್ರಿಕೆಟ್ ಮೈದಾನಕ್ಕೆ ಇಳಿಯಲು ಉತ್ಸುಕರಾಗಿರುವುದಾಗಿ ಅಧಿಕೃತವಾಗಿ ಮನವಿ ಮಾಡಿದ್ದಾರೆ.

ಹೈದರಾಬಾದ್ ಕ್ರಿಕೆಟ್ ಮಂಡಳಿ (ಎಚ್‍ಡಿಎ)ಗೆ ಪತ್ರ ಬರೆದಿರುವ ಆಂಧ್ರ ಪ್ರದೇಶದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಟಿ ರಾಯುಡು, ಜೂನ್ ತಿಂಗಳಲ್ಲಿ ತುಂಬಾ ಭಾವನಾತ್ಮಕವಾಗಿ ನಿವೃತ್ತಿ ಘೋಷಿಸಿದ್ದೆ. ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ಪಡೆಯುತ್ತೇನೆ ಹಾಗೂ ಎಲ್ಲ ಮಾದರಿಯ ಕ್ರಿಕೆಟ್ ಆಡಲು ನಾನು ಸಿದ್ಧರುವೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ನಡುವೆ ರಾಯುಡು ನಿರ್ಧಾರ ಬದಲಿಸುತ್ತಿದ್ದಂತೆ ಮತ್ತೆ ಟ್ರೋಲ್ ಆಗಿದ್ದಾರೆ. ರಾಯುಡು ಭಾರತದ ಶಾಹಿದ್ ಆಫ್ರಿದಿ ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಪಾಕಿಸ್ತಾನದ ಆಟಗಾರ ಶಾಹಿದ್ ಅಫ್ರಿದಿ ಕೂಡ ನಿವೃತ್ತಿ ಘೋಷಿಸಿ ಸ್ವಲ್ಪ ದಿನಗಳ ನಂತರವೇ ತಮ್ಮ ನಿವೃತ್ತಿಯನ್ನು ಹಿಂಪಡೆದುಕೊಂಡಿದ್ದರು. ಈಗ ರಾಯುಡು ತಮ್ಮ ನಿವೃತ್ತಿಯನ್ನು ಹಿಂಪಡೆದಿರುವುದರಿಂದ ಅವರನ್ನು ಭಾರತದ ಅಫ್ರಿದಿ ಎಂದು ಟ್ರೋಲ್ ಮಾಡಲಾಗುತ್ತಿದೆ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top