fbpx
ಸಮಾಚಾರ

ಕಾರ್ಮಿಕ ಇಲಾಖೆಯ ಎಲ್ಲಾ ಮಂಡಳಿ ಮತ್ತು ಏಜನ್ಸಿಗಳಿಗೆ ಇನ್ಮುಂದೆ ಟ್ವಿಟ್ಟರ್ ಖಾತೆ ಕಡ್ಡಾಯ!

ಕರ್ನಾಟಕ ಸರ್ಕಾರ, ಕಾರ್ಮಿಕ ಇಲಾಖೆಯ ಎಲ್ಲಾ ಎಲ್ಲಾ ಮಂಡಳಿ ಮತ್ತು ಏಜನ್ಸಿಗಳು ಅಧಿಕೃತ ಟ್ವಿಟರ್ ಖಾತೆಯನ್ನು ಹೊಂದಿರಬೇಕು ಎಂಬ ಸುತ್ತೋಲೆಯನ್ನು ಕಾರ್ಮಿಕ ಇಲಾಖೆ ಹೊರಡಿಸಿದೆ. ಈ ಮೂಲಕ ಸಾರ್ವಜನಿಕರೊಂದಿಗೆ ಮಾಹಿತಿ ಸಂವಹನ ಹಂಚಿಕೆ ಪ್ರತಿಕ್ರಿಯೆ ಮತ್ತು ಸಂಪರ್ಕ ಸಾಧಿಸಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಲು ಕಾರ್ಮಿಕ ಇಲಾಖೆ ಮುಂದಾಗಿದೆ.

 

 

ಸಾರ್ವಜನಿಕರನ್ನು ತಲುಪಲು ಸುಧಾರಿತ ಕ್ರಮವೇ ಸಾಮಾಜಿಕ ಮಾಧ್ಯಮವಾಗಿದೆ, ಮತ್ತು ವಾಸ್ತವತೆಯು ಕೂಡ ಆಗಿದೆ. ಅಲ್ಲದೆ ಅಲ್ಲಿರುವ ಅನಾಮಧೇಯತೆ ಪ್ರತಿಕ್ರಿಯೆ ಮತ್ತು ವಿಮರ್ಶೆಗಳನ್ನು ನೀಡುವುದರಿಂದ ವಿಷಯವನ್ನು ತಿಳಿಯಲು ಅನುಕೂಲ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

 

 

ಕಾರ್ಮಿಕ ಇಲಾಖೆಯ ಆದೇಶಗಳು ಈರೀತಿ ಇದೆ
1.ಕಾರ್ಮಿಕ ಇಲಾಖೆಯ ಅಧೀನದಲ್ಲಿ ಬರುವ ಎಲ್ಲಾ ಮಂಡಳಿಗಳು ಒಂದು ಅಧಿಕೃತ ಟ್ವಿಟ್ಟರ್ ಖಾತೆಯನ್ನು ಹೊಂದುವುದು.

2.ಹಾಗೆಯೇ ಕಾರ್ಮಿಕ ಇಲಾಖೆಯ ಮುಖ್ಯಸ್ಥರು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೂಡ ಅಧಿಕೃತ ಟ್ವಿಟರ್ ಖಾತೆಯನ್ನು ಹೊಂದಿರಬೇಕು.

3.ಟ್ವಿಟರ್ ಖಾತೆಯ ಮೂಲಕ ಇಲಾಖೆಯ ಯೋಜನೆಗಳು ಕಾರ್ಯಕ್ರಮಗಳು ಮತ್ತು ಮುಖ್ಯವಾದ ಸುತ್ತೋಲೆ, ಅಧಿಸೂಚನೆಗಳು ಇತ್ಯಾದಿಗಳನ್ನು ಪ್ರಸಾರ ಪಡಿಸಬೇಕು.
ಅದರ ಜೊತೆಗೆ ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆಗಳನ್ನು ಪ್ರತಿಕ್ರಿಯಿಸಬೇಕು. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಪ್ರತಿಕ್ರಿಯಿಸಲು ಚಾಲ್ತಿಯಲ್ಲಿರುವ ನಿಯಮಗಳ ಅನುಸಾರ ಸಂವಹನ ನಡೆಸಬೇಕು. ಈ ಕುರಿತು ಯಾವುದೇ ಅನುಮಾನವಿದ್ದರೆ ಸಲಹೆಗಾಗಿ ಸರ್ಕಾರದ ಕಾರ್ಯದರ್ಶಿಗಳು ಕಾರ್ಮಿಕ ಇಲಾಖೆಯ ನ್ನು ಸಂಪರ್ಕಿಸುವುದು.

4.ಅಧಿಕಾರಿಗಳ ಪ್ರಯತ್ನಕ್ಕೆ ಪೂರಕವಾಗಿ ಕಾರ್ಮಿಕ ಆಯುಕ್ತರು ಸಾಮಾಜಿಕ ಮಾಧ್ಯಮದ ಕುರಿತು ಕಾರ್ಯಾಗಾರವನ್ನು ಆದೇಶ ಹೊರಡಿಸಿದ 30 ದಿನಗಳ ಒಳಗಾಗಿ ಏರ್ಪಡಿಸಬೇಕು. ಹಾಗೆಯೇ ಸಾಮಾಜಿಕ ಮಾಧ್ಯಮದ ಪ್ರಾರಂಭಿಕ ಪ್ರಗತಿಯನ್ನು ಆರು ತಿಂಗಳ ನಂತರ ಪರಿಶೀಲಿಸಲಾಗುವುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top