fbpx
ಸಮಾಚಾರ

“ಚಿತ್ರ ಬಿಡುಗಡೆಯಾದರೆ ಕೇಸ್ ಹಾಕಿ ಜೈಲಿಗೆ ಕಳಿಸ್ತೀನಿ” ‘ಪರಿಮಳ ಲಾಡ್ಜ್’ ವಿರುದ್ಧ ರೊಚ್ಚಿಗೆದ್ದ ರವಿ ಬೆಳಗೆರೆ.

‘ಪರಿಮಳ ಲಾಡ್ಜ್’ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹವಾ ಎಬ್ಬಿಸಿದ್ದು ಗೊತ್ತೇ ಇದೆ. ಈ ಟೀಸರ್ ನೋಡಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಗರಂ ಆಗಿದ್ದಾರೆ. ಈ ಟೀಸರ್ ಹಿಂಪಡೆಯುವಂತೆ ರವಿ ಬೆಳಗೆರೆ ಆಗ್ರಹಿಸಿದ್ದಾರೆ. ಈ ಸಿನೆಮಾ ರಿಲೀಸ್ ಆದರೆ ಕೇಸ್ ಹಾಕಿ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದಿದ್ದಾರೆ ರವಿ ಬೆಳಗೆರೆ.

 

 

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ವಿಡಿಯೋ ಮಾಡಿರುವ ರವಿ ಬೆಳೆಗೆರೆ, “ಈ ಟೀಸರ್​ನ್ನು ವಾಪಾಸ್ ತೆಗೆದುಕೊಳ್ಳದಿದ್ದರೆ ಖಂಡಿತ ನಾನು ಈ ಚಿತ್ರದ ವಿರುದ್ದ ಕೇಸು ದಾಖಲಿಸುತ್ತೇನೆ. ಮನಸ್ಸಿಗೆ ಬಂದಂತೆ ಬರೆಯುತ್ತೀರಾ, ಮನಸಿಗೆ ಬಂದಂತೆ ಸಿನಿಮಾ ಮಾಡ್ತೀರಾ? ನಮ್ಮ ಸಮಾಜವನ್ನು ಈ ರೀತಿಯಾಗಿ ಬೆಳೆಯಲು ಬಿಡಬಾರದು. ಕಲ್ಲು ಹೊಡೆಯುವ ಹುಚ್ಚ ವೆಂಕಟ್​ಗಿಂತ ‘ಪರಿಮಳ ಲಾಡ್ಜ್’ ಟೀಸರ್ ಮಾಡಿದ್ದಾರಲ್ವಾ, ಅವರು ನಮ್ಮ ಸಮಾಜಕ್ಕೆ ಡೇಂಜರಸ್ ”

“ನಾನು ಯಾರಿಗೂ ಶತ್ರುವಲ್ಲ. ನನಗೆ ಚಿತ್ರರಂಗ ಪರಿಚಿತ. ಅಣ್ಣಾವ್ರ ಅಭಿಮಾನಿಯಾಗಿದ್ದವನು ನಾನು. ವಿಷ್ಣುವರ್ಧನ್ ನನ್ನ ಪರ್ಸನಲ್ ಫ್ರೆಂಡ್. ಅಂಬರೀಷ್ ನಾನು ಏಕವಚನದ ಗೆಳೆಯರು. ಇಂತಹ ದಿಗ್ಗಜರು ಇದ್ದಂತಹ ಚಿತ್ರರಂಗದಲ್ಲಿ ಹೊಳಸು ಮಾತು. ಡಬಲ್ ಮೀನಿಂಗ್ ಅಲ್ಲ. ಇದು ತ್ರಿಬಲ್ ಮೀನಿಂಗ್ ಡೈಲಾಗ್ ಇಟ್ಟುಕೊಂಡು ಟೀಸರ್ ಮಾಡಿದ್ದಾರೆ ಎಂದು ರವಿ ಬೆಳಗೆರೆ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ ಒಂದು ವೇಳೆ ಚಿತ್ರ ಬಿಡುಗಡೆಯಾದರೆ ಸಿನಿಮಾ ವಿರುದ್ಧ ಕೇಸು ಹಾಕುವೆ. ಇನ್ನು ಟೀಸರ್ ವಿರುದ್ಧ ಕೂಡ ಕೇಸ್ ದಾಖಲಿಸುವುದಾಗಿ ಬೆಳಗೆರೆ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top