fbpx
ಸಮಾಚಾರ

ಕರ್ನಾಟಕ ತಂಡಕ್ಕೆ ಗುಡ್​ ಬೈ ಹೇಳಿದ ಬಿನ್ನಿ: ಮುಂದೆ ಯಾವ ರಾಜ್ಯದ ಪರ ಆಡುತ್ತಾರೆ ಗೊತ್ತಾ?

ಇತ್ತೀಚಿಗೆ ವೇಗದ ಬೌಲರ್ ವಿನಯ್ ಕುಮಾರ್ ಕರ್ನಾಟಕ ರಾಜ್ಯ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ್ದರು. ಈ ಬೆನ್ನಲ್ಲೇ ಕನ್ನಡಿಗ ಸ್ಟುವರ್ಟ್ ಬಿನ್ನಿ ಕರ್ನಾಟಕ ತಂಡವನ್ನು ಬಿಟ್ಟು ನಾಗಾಲ್ಯಾಂಡ್ ತಂಡವನ್ನು ಸೇರಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

ಸ್ಟುವರ್ಟ್ ಬಿನ್ನಿ ಈಗಾಗಲೇ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಆಕ್ಷೇಪಣೆ ಇಲ್ಲವೆಂದು NOC (non objection certificate) ಪ್ರಮಾಣಪತ್ರ ಪಡೆದಿದ್ದಾರೆ. ಶೀಘ್ರದಲ್ಲಿಯೇ ನಾಗಾಲ್ಯಾಂಡ್ ತಂಡವನ್ನ ಸೇರಿಕೊಳ್ಳಲಿರುವ ಬಿನ್ನಿ, ಪ್ರಸಕ್ತ ಆವೃತ್ತಿಯಲ್ಲಿ ನಾಗಾಲ್ಯಾಂಡ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ದೇಶಿ ಕ್ರಿಕೆಟ್‍ನಲ್ಲಿ ನಾಗಾಲ್ಯಾಂಡ್ ಅತೀ ಕಡಿಮೆ ಅನುಭವ ಹೊಂದಿರುವ ತಂಡವಾಗಿದೆ. ಹೀಗಾಗಿ ಬೇರೆ ರಾಜ್ಯದ ಅನುಭವಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ, ಕಿರಿಯರಿಗೆ ಮಾರ್ಗದರ್ಶನದ ಜೊತೆಯಲ್ಲಿ ತಂಡವನ್ನು ಬೆಳೆಸುವ ಗುರಿಯನ್ನು ನಾಗಾಲ್ಯಾಂಡ್ ಕ್ರಿಕೆಟ್ ಸಂಸ್ಥೆ ಹೊಂದಿದೆ. ಹಾಗಾಗಿ ವಿವಿಧ ರಾಜ್ಯಗಳ ಅನುಭವಿ ಆಟಗಾರರ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದೆ.

ಇನ್ನು ಸ್ಟುವರ್ಟ್ ಬಿನ್ನಿ ಜೊತೆಗೆ ಮಹಾರಾಷ್ಟ್ರದಿಂದ ಯೋಗೇಶ್ ಟಕವಾಲೆ ಹಾಗೂ ಶ್ರೀಕಾಂತ್ ಮುಂಡೆ ನಾಗಾಲ್ಯಾಂಡ್ ತಂಡ ಸೇರಿಕೊಳ್ಳಲಿದ್ದಾರೆ.

ಈಗಾಗಲೇ ಕರ್ನಾಟಕದ ಪ್ರತಿಭಾವಂತ ಆಟಗಾರರು ಅನ್ಯರಾಜ್ಯದ ಪರವಾಗಿ ಕಣಕ್ಕಿಯುತ್ತಿದ್ದು, ಇದಕ್ಕೆ ಹೊಸ ಸೇರ್ಪಡೆ ಸ್ಟುವರ್ಟ್ ಬಿನ್ನಿ. ಇದಕ್ಕೂ ಮೊದಲು ವಿಕೆಟ್‌ ಕೀಪರ್‌ ಸಿ.ಎಂ ಗೌತಮ್‌, ವಿನಯ್ ಕುಮಾರ್ ಹಾಗೂ ರಾಬಿನ್ ಉತ್ತಪ್ಪ ನಿರಾಕ್ಷೇಪಣ ಪತ್ರ ಪಡೆದು ಬೇರೆ ರಾಜ್ಯದ ಪರ ಆಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top