fbpx
ಸಮಾಚಾರ

ರಸ್ತೆಯಲ್ಲಿ ವಿದ್ಯಾರ್ಥಿನಿಯ ಅದ್ಭುತ ಸ್ಟಂಟ್ ನೋಡಿ ದಂಗಾದ ರೋಮಾನಿಯನ್ ನ ಒಲಿಂಪಿಕ್​ ಚಿನ್ನ ವಿಜೇತೆ.

ಶಾಲಾ ಮಕ್ಕಳಿಬ್ಬರು ಯೂನಿಫಾರ್ಮ್​ನಲ್ಲಿ ಅತಿ ಕಠಿಣವಾದ ಜಿಮ್ನಾಸ್ಟಿಕ್ಸ್​ ಕೌಶಲ್ಯವನ್ನು ಅತಿ ಸುಲಭವಾಗಿ ಪ್ರದರ್ಶಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದು, ಇದನ್ನು ನೋಡಿದ ರೋಮಾನಿಯನ್​ನ ನಿವೃತ್ತ ಜಿಮ್ನಾಸ್ಟಿಕ್ಸ್​ ಸ್ಪರ್ಧಿ ನಾದಿಯಾ ಕೊಮಾನೆಸಿ ಫಿದಾ ಆಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

ವಿಡಿಯೋದಲ್ಲಿ ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಒಟ್ಟಿಗೆ ರಸ್ತೆಯಲ್ಲಿ ಶಾಲಾ ಸಮವಸ್ತ್ರ ಧರಿಸಿಕೊಂಡು ಹೋಗುತ್ತಿದ್ದರು. ಮೊದಲಿಗೆ ಹುಡುಗ ಓಡಿ ಹೋಗಿ ಜಿಮ್ನಾಸ್ಟಿಕ್ಸ್ ಕಸರಸ್ತು ಮಾಡಿದ್ದಾನೆ. ನಂತರ ಬಾಲಕಿ ಕೂಡ ಓಡಿ ಬಂದು ಎರಡು ಬಾರಿ ಜಿಮ್ನಾಸ್ಟಿಕ್ಸ್ ಮಾಡಿರುವುದನ್ನು ನೋಡಬಹುದಾಗಿದೆ.

ಈ ವಿಡಿಯೋ ನೋಡಿದ ರೋಮಾನಿಯನ್ ನ ನಿವೃತ್ತ ಜಿಮ್ನಾಸ್ಟಿಕ್ ಸ್ಪರ್ಧಿ ನಾದಿಯಾ ಕೊಮಾನೆಸಿ ಫಿದಾ ಆಗಿದ್ದು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಟಿಕ್ ಟಾಕ್ ಉದ್ದೇಶಕ್ಕಾಗಿ ಈ ವಿಡಿಯೋವನ್ನು ಮಾಡಲಾಗಿದೆ. ವಿದ್ಯಾರ್ಥಿಗಳಿಬ್ಬರು ಸಮವಸ್ತ್ರದಲ್ಲಿ ನಡು ರಸ್ತೆಯಲ್ಲೇ ಕಠಿಣವಾದ ಜಿಮ್ನಾಸ್ಟಿಕ್ಸ್ ಅನ್ನು ಪ್ರದರ್ಶಿಸಿದ್ದರು.

ಈ ದೃಶ್ಯವನ್ನು ಎಲ್ಲಿ ವಿಡಿಯೋ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ. ಆದರೆ ವಿದ್ಯಾರ್ಥಿಗಳು ಮಾಡಿರುವ ಜಿಮ್ನಾಸ್ಟಿಕ್ಸ್ ಅಷ್ಟು ಸುಲಭವಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವ ಕಳೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಮುಂಜಾಗೃತ ಕ್ರಮವಿಲ್ಲದೆ ಮಾಡುವುದು ಅಪಾಯಕಾರಿ, ಅಂತಹುದರಲ್ಲಿ ಶಾಲಾ ಬ್ಯಾಗ್ ಧರಿಸಿಯೂ ಜಿಮ್ನಾಸ್ಟಿಕ್ಸ್ ಮಾಡಿರುವುದು ಸಾಹಸವೇ ಸರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top