fbpx
ಸಮಾಚಾರ

ಹಿಂದಿಯ ಶೋನಲ್ಲಿ ಕಪಿಲ್ ಶರ್ಮಾರಿಂದ ಕನ್ನಡ ಮಾತನಾಡಿಸಿದ ಸುದೀಪ್- ಕಿಚ್ಚನ ಕನ್ನಡ ಪ್ರೇಮದ ವಿಡಿಯೋ ನೋಡಿ.

ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈಗ ಕೇವಲ ಕನ್ನಡದ ನಟನಾಗಿ ಮಾತ್ರ ಉಳಿದಿಲ್ಲ. ತಮ್ಮ ವಿಭಿನ್ನ ಕಂಠ ಮತ್ತು ಮನೋಜ್ಞ ನಟನೆಯಿಂದಲೇ ಸ್ಟಾರ್ ಅನ್ನಿಸಿಕೊಂಡಿರುವ ಕಿಚ್ಚಾ ಸುದೀಪ್ ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿಯೂ ಬಹು ಬೇಡಿಕೆಯ ನಟ. ಸುದೀಪ್ ಬಾಲಿವುಡ್ ನಲ್ಲಿ ಈಗ ಕಂಪು ಪಸರಿಸುವ ಮೂಲಕ ತಮ್ಮ ಭಾಷಾಭಿಮಾನ ಮೆರೆದಿದ್ದಾರೆ.

 

ವಿಡಿಯೋ ನೋಡಿ👇👇👇

 

 

ಐದು ಭಾಷೆಗಳಲ್ಲಿ ಬಿಡುಗಡೆ ಕಾಣುತ್ತಿರುವ ತಮ್ಮ ಚಿತ್ರ ಪೈಲ್ವಾನ್​ ಪ್ರಚಾರಕ್ಕಾಗಿ ಚಿತ್ರತಂಡ ಬಾಲಿವುಡ್​​ ಫೇಮಸ್ ಶೋ ‘ಕಪಿಲ್ ಶರ್ಮಾ ಶೋ’ ದಲ್ಲಿ ಪಾಲ್ಗೊಂಡಿದ್ದರು. ಶೋದಲ್ಲಿ ಕಿಚ್ಚ ಸುದೀಪ್ ರಾಜಾರೋಷವಾಗಿ ಕನ್ನಡದಲ್ಲಿ ಮಾತನಾಡಿದ್ದು, ಹಿಂದಿನೆಲದಲ್ಲೂ ಕನ್ನಡ ಕಸ್ತೂರಿಯ ಕಂಪು ಬೀರಿದ್ದಾರೆ. ಅಷ್ಟೇ ಅಲ್ಲ ಶೋದ ನಿರೂಪಕ ನಟ ಕಪಿಲ್ ಶರ್ಮಾ ಅವರಿಂದಲೂ ಕನ್ನಡ ಮಾತನಾಡಿಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

“ಪೈಲ್ವಾನ್ ಸಿನಿಮಾ ಸೆಪ್ಟೆಂಬರ್ 12 ರಂದು ಬಿಡುಗಡೆ ಆಗ್ತಿದೆ ತಪ್ಪದೇ ನೋಡಿ” ಅಂತ ಕಪಿಲ್ ಶರ್ಮಾರಿಂದ ಸುದೀಪ್ ಕನ್ನಡದಲ್ಲಿ ಹೇಳಿಸಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದ್ದು ಕಿಚ್ಚನ ಕನ್ನಡ ಪ್ರೇಮ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗೆಯೆ ಒಂದೆರಡು ಪರಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದಂತೆ ಕನ್ನಡವನ್ನೇ ಮರೆತಂತೆ ವರ್ತಿಸುವ ನಟ-ನಟಿಯರು ತಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಕನ್ನಡ ಮರೆಯದ ಕಿಚ್ಚನನ್ನು ನೋಡಿ ಸಾಕಷ್ಟಿದೆ ಎಂಬ ಕಮೆಂಟುಗಳು ಕಾಣುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top