fbpx
ಸಮಾಚಾರ

ಖ್ಯಾತ ಡ್ರಮ್ಮರ್ ದೇವಾ ಅವರು ಆಸ್ಪತ್ರೆಗೆ ದಾಖಲು- ಅಂಥದ್ದೇನಾಯ್ತು?

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಡ್ರಮ್ಮರ್ ದೇವ್ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವು ದಿನಗಳಿಂದ ಅವರು ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿರುವ ದೇವ ತೀವ್ರ ಜ್ವರದಿಂದ ತಲೆ ತಿರುಗಿ ಬಿದ್ದಿದ್ದರು. ಈ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

 

 

 

ಸದ್ಯ ಮೈಸೂರಿನಲ್ಲಿ ಕೆಪಿಎಲ್ ಪಂದ್ಯಾವಳಿ ನಡೆಯುತ್ತಿದ್ದು ಈ ಪಂದ್ಯಗಳಲ್ಲಿ ಡ್ರಮ್ ಬಾರಿಸುವ ಡ್ರಮ್ ದೇವ ಮೂಲಕ ಕ್ರಿಕೆಟ್ ಕದನಕ್ಕೆ ಇನ್ನಷ್ಟು ಉತ್ತೇಜನ ನೀಡುತ್ತಿದ್ದರು. ಜ್ವರದಿಂದ ತೀವ್ರ ಆಯಾಸಗೊಂಡಿದ್ದ ಅವರು ಆಗಸ್ಟ್ 28ರಂದು ತಲೆ ತಿರುಗಿ ಬಿದ್ದು, ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ನಂತರ ಅವರನ್ನು ಕೂಡಲೇ ಅಟ್ರಿಯಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 103 ಡಿಗ್ರಿ ಜ್ವರ ಇದ್ದು ದೇಹದಲ್ಲಿ ಶುಗರ್ ಪ್ರಮಾಣ 500ಕ್ಕಿಂತ ಹೆಚ್ಚಿದೆ.

ಇನ್ನು ತಮ್ಮ ಅನಾರೋಗ್ಯದ ಬಗ್ಗೆ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ದೇವ “ಕೆಲವು ದಿನ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾಗಿದೆ. ಹೀಗಾಗಿ ಅವರು ಕೆಪಿಎಲ್ ಸೆಮಿ ಫೈನಲ್, ಫೈನಲ್ ಪಂದ್ಯಗಳಲ್ಲಿ ಭಾಗಿಯಾಗುತ್ತಿಲ್ಲ” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top