fbpx
ಸಮಾಚಾರ

ತಾಯಿ ಕಳೆದುಕೊಂಡ ದುಃಖದಲ್ಲಿ ನಟ, ನಿರ್ಮಾಪಕ ಮದನ್ ಪಟೇಲ್

ಚಂದನವನದ ನಟ, ನಿರ್ದೇಶಕ ಮತ್ತು ನಿರ್ಮಾಪಕ ಮದನ್ ಪಟೇಲ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಮದನ್ ಪಟೇಲ್ ಅವರ ತಾಯಿ ಅಲುಮೇಲಮ್ಮ ಅವರು ಇಂದು (ಸಪ್ಟೆಂಬರ್ 3) ರಂದು ವಿಧಿವಶರಾಗಿದ್ದಾರೆ.

ಇಂದು ಬೆಳಿಗ್ಗೆ ಸುಮಾರು 6.30ರ ಹೊತ್ತಿಗೆ ಅಲುಮೇಲಮ್ಮ ಅವರು ನಿಧನರಾಗಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಲ್ಪಲ್ಲಿ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ಮಾಡಲಾಯಿತು. ಇದಕ್ಕೂ ಮುಂಚೆ ದಿಮ್ಮಲೂರಿನ ಬಡಾವಣೆಯ ಮನೆಯಲ್ಲಿ ಅಲಮೇಲಮ್ಮ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ಅಲುಮೇಲಮ್ಮ ಅವರು ಮದನ್ ಮಲ್ಲು ಆರ್ಕೇಸ್ಟ್ರಾ ತಂಡವನ್ನು ಕಟ್ಟಿದ್ದರು. ಅದರಿಂದಲೇ ತಮ್ಮ ಜೀವನ ಸಾಗಿಸುತ್ತಿದ್ದರು ಅಲಮೇಲಮ್ಮ. ತಾಯಿಯ ನಂತರ ಅದೇ ಹಾದಿಯಲ್ಲಿ ಬೆಳೆದ ಮಗ ಮದನ್ ಪಟೇಲ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ನಟ, ನಿರ್ಮಾಪಕ, ನಿರ್ದೇಶಕರಾಗಿ ಗುರುತಿಸಿಕೊಂಡರು. ಬಳಿಕ ನಂತರ ರಾಜಕೀಯಕ್ಕೂ ಪ್ರವೇಶಿಸಿದ್ದರು,

ಇನ್ನು ಅಲುಮೇಲಮ್ಮ ಅವರ ಮೊಮ್ಮಗ, ಮದನ್ ಪಟೇಲ್ ಮಗ ಮಯೂರ್ ಪಟೇಲ್ ಅವರು ಕೂಡ ಚಿತ್ರರಂಗದಲ್ಲಿ ನಟನಾಗಿ ಗುರಿತಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top