fbpx
ಸಮಾಚಾರ

ಚೊಚ್ಚಲ ಮಗುವಿಗೆ ಜನ್ಮ ನೀಡಿದ ಪುಟ್ಟಗೌರಿ ನಟಿ.

ಕಿರುತೆರೆಯ ಖ್ಯಾತ ನಟಿ ನಯನಾ ಕೆ.ಎಂ ಅಮ್ಮ ಆದ ಖುಷಿಯಲ್ಲಿದ್ದಾರೆ. ನಯನ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

ಈ ಬಗ್ಗೆ ನಯನಾ ಅವರ ಪತಿ ವೆಂಕಟೇಶ್ ಪ್ರಸಾದ್ ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ವೆಂಕಟೇಶ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ, “ನಮ್ಮ ಮನೆಗೆ ಪುಟಾಣಿ ಅತಿಥಿ ಆಗಮಿಸಿದ್ದಾನೆ. ನಯನಾಗೆ ನಾರ್ಮಲ್ ಡೆಲಿವರಿಯಾಗಿದ್ದು, ಅಮ್ಮ ಹಾಗೂ ಮಗು ಇಬ್ಬರು ಕ್ಷೇಮವಾಗಿದ್ದಾರೆ. ವೈದ್ಯರ ಸಲಹೆ ಹಿನ್ನೆಲೆಯಲ್ಲಿ ನಯನಾ ಅವರು ಮೊಬೈಲ್ ಬಳಸುತ್ತಿಲ್ಲ. ಸದ್ಯದಲ್ಲೇ ಅವರು ಹಿಂತಿರುಗಲಿದ್ದಾರೆ. ನಿಮ್ಮ ಹಾರೈಕೆಗೆ ಧನ್ಯವಾದಗಳು” ಎಂದು ಪೋಸ್ಟ್ ಮಾಡಿದ್ದಾರೆ.

 

 

 

View this post on Instagram

 

A post shared by Nayana Km (@nayana_k.m) on


 

ಇತ್ತೀಚಿಗಷ್ಟೇ ನಯನ ಅವರಿಗೆ ಸೀಮಂತ ಕಾರ್ಯ ಕೂಡ ನೆರವೇರಿತ್ತು, ಚೆಂದದ ಫೋಟೋಶೂಟ್ ಅನ್ನು ಕೂಡ ಮಾಡಿಸಿಕೊಂಡಿದ್ದಾರೆ. ನಯನ ಅವರ ಬೇಬಿ ಬಂಪ್ ಮತ್ತು ಸೀಮಂತ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಅಂದಾಹಾಗೆ ನಯನಾ ಕೆ ಎಂ ‘ಚಿಕ್ಕಮ್ಮ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ‘ಮನೆದೇವ್ರು’ ಸೀರಿಯಲ್ ಬಿಗ್ ಬ್ರೇಕ್ ಕೊಟ್ಟಿತು. ಪುಟ್ಟಗೌರಿ, ವಸುದೈವ ಕುಟುಂಬ, ಕನಕ, ಕರ್ಪೂರದ ಬೊಂಬೆ, ವಾರಸ್ದಾರ ಹಾಗೂ ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಮಿಂಚಿದ್ದಾರೆ. ಖಳ ನಟಿಯಾಗಿಯೇ ಕಿರುತೆರೆಯಲ್ಲಿ ಹೆಚ್ಚು ಮಿಂಚಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top