fbpx
ಸಮಾಚಾರ

ಪೈಲ್ವಾನ್ ತಂಡಕ್ಕೆ ರಮೇಶ್ ಅರವಿಂದ್ ಸೇರ್ಪಡೆ!

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಮೇಲಿನ ಕುತೂಹಲ ದಿನೇ ದಿನೇ ಹೆಚ್ಚುತ್ತಲೇ ಇದೆ. ಕನ್ನಡವೂ ಸೇರಿ ಒಟ್ಟು 5 ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ಸ್ವತಃ ಕಿಚ್ಚನ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದರೇ ಮಾಮೂಲಿ ಪ್ರೇಕ್ಷಕರಲ್ಲೂ ವಿಭಿನ್ನ ಕ್ರೇಜ್ ಹುಟ್ಟುಹಾಕುತ್ತಿದೆ. ಬಿಡುಗಡೆ ದಿನಾಂಕ ಸೆಪ್ಟೆಂಬರ್ 12ಕ್ಕೆ ಫಿಕ್ಸ್ ಆಗಿದೆ.

ಈಗ ರಮೇಶ್ ಅರವಿಂದ್ ಕೂಡ ಈ ಚಿತ್ರದ ಭಾಗವಾಗಿದ್ದಾರೆ. ಹಾಗಿದ್ದರೆ ರಮೇಶ್ ಅರವಿಂದ್ ಯಾವ ಪಾತ್ರ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಕಾಡುವುದು ಸಹಜ. ಆದರೆ ರಮೇಶ್ ಇಲ್ಲಿ ಯಾವುದೇ ಪಾತ್ರವನ್ನು ಮಾಡುತ್ತಿಲ್ಲ ಬದಲಾಗಿ ಕುಸ್ತಿ ಬಗ್ಗೆ ಸಿನಿಮಾದ ಪ್ರಾರಂಭದಲ್ಲಿ ಕೆಲವೊಂದಿಷ್ಟು ವಿವರಣೆ ನೀಡಿ ಬರುತ್ತದೆಯಂತೆ. ಅದನ್ನು ರಮೇಶ್ ಅವರು ನೀಡುತ್ತಾರಂತೆ. ಕನ್ನಡ ಅವತರಣಿಕೆಗೆ ಮಾತ್ರ ರಮೇಶ್ ಹಿನ್ನಲೆ ಧ್ವನಿ ನೀಡಿದ್ದಾರೆ. ‘ಪೈಲ್ವಾನ್’ ಚಿತ್ರತಂಡದ ಒತ್ತಾಸೆಯ ಮೇರೆಗೆ ರಮೇಶ್ ಶನಿವಾರ ಹಿನ್ನೆಲೆ ಧ್ವನಿ ನೀಡಿ ಮುಗಿಸಿದ್ದಾರೆ.

‘ಪೈಲ್ವಾನ್’ ಸಿನೆಮಾ ಕುವೈತ್, ಯುಎಸ್ಎ, ಯುಕೆ, ಸಿಂಗಾಪುರ ಸೇರಿದಂತೆ ಹಲವಾರು ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಮೂರು ಸಾವಿರಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಈ ಸಿನೆಮಾ ಬಿಡುಗಡೆಯಾಗುತ್ತಿದ್ದು, ಅತಿ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಸಿನೆಮಾ ಎಂಬ ಖ್ಯಾತಿಯನ್ನು ಗಳಿಸಲಿದೆ.

ಪೈಲ್ವಾನ್ ಬಗ್ಗೆ:
ಪೈಲ್ವಾನ್ ಚಿತ್ರದ ಬಗ್ಗೆ ಹೇಳಬೇಕೆಂದರೆ ಮುಂಬೈ ಬೆಡಗಿ ಆಕಾಂಕ್ಷ ಸಿಂಗ್ ಸುದೀಪ್’ಗೆ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕರುಣ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಅವಿನಾಶ್ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. RRR ಮೋಶನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಪೈಲ್ವಾನ್ ಚಿತ್ರವನ್ನು ನಿರ್ದೇಶಕ ಕೃಷ್ಣಾ ಅವರ ಪತ್ನಿ ಸ್ವಪ್ನ ಕೃಷ್ಣಾ ನಿರ್ಮಾಣ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಕರುಣಾಕರ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top