fbpx
ಸಮಾಚಾರ

ಮೋದಕ ತಿನ್ನಲು ಅಪ್ಪ ಮಗಳ ನಡುವೆ ಪೈಪೋಟಿ‌.

ನಾಡಿನೆಲ್ಲೆಡೆ ಗೌರಿ- ಗಣೇಶ ಹಬ್ಬದ ಸಂಭ್ರಮ. ಎಲ್ಲರ ಮನೆ ಮನಗಳಲ್ಲೂ ವಿಘ್ನ ನಿವಾರಕ ಇದ್ದಾನೆ. ಸಡಗರ- ಸಂಭ್ರಮ ಮನೆ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ದಂಪತಿ ಪುಟ್ಟ ಗೌರಿ ಜೊತೆ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಹಬ್ಬದ ಸಂಭ್ರಮದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ.

 

 

 

ಯಶ್ ತಮ್ಮ ಮಗಳು ಐರಾಗೆ ಮುತ್ತು ನೀಡುತ್ತಿರುವ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ, “ನಮ್ಮಪ್ಪ ತಿನ್ನೋ ಮುಂಚೆ ಮೋದಕ ಎಲ್ಲಾ ನಾನೇ ತಿಂದ್ ಬಿಡೋಣ ಎಂದು ಯೋಚ್ನೆ ಮಾಡ್ತಾ ಇದ್ದೀನಿ?”. ನಿಮ್ಮ ಈ ಪುಟ್ಟ ಗೌರಿಯಿಂದ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು” ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

 

 

 

View this post on Instagram

 

Yellarigu Ganesha Habbada Shubhashayagalu.. nam mane putta Gowri kade inda 😍 @thenameisyash #radhikapandit #nimmaRP

A post shared by Radhika Pandit (@iamradhikapandit) on

 

ಇತ್ತ ನಟಿ ರಾಧಿಕಾ ಪಂಡಿತ್ ಐರಾಳನ್ನು ತೊಡೆ ಮೇಲೆ ಕೂರಿಸಿಕೊಂಡಿರುವ ಫೋಟೋ ಹಾಗೂ ಐರಾಳ ಸಿಂಗಲ್ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು. ನಮ್ಮನೆಯ ಪುಟ್ಟ ಗೌರಿ ಕಡೆಯಿಂದ” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top