fbpx
ಸಮಾಚಾರ

ಕೇಂದ್ರ ಗೃಹಸಚಿವ ಅಮಿತ್​ ಶಾ ಆಸ್ಪತ್ರೆಗೆ ದಾಖಲು!

ಕೇಂದ್ರ ಗೃಹ ಸಚಿವ ಮತ್ತು ಭಾರತೀಯ ಜನಪ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅಸ್ವಸ್ಥರಾಗಿದ್ದು, ಅಹಮದಬಾದ್​ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

 

 

ಅಹಮದಾಬಾದ್​ನ ಕುಸುಮ್​ ದೀರ್ಜಲ್​(ಕೆಡಿ) ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರಿಗೆ ಲಿಪ್ಮೋ ಇಂದು ಶಸ್ತ್ರ ಚಿಕಿತ್ಸೆ ನಡೆದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಇಂದು ಸಂಜೆಯೇ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ..

ಇಂದು ಲಿಪ್ಮೋ ಶಸ್ತ್ರ ಚಿಕಿತ್ಸೆ ಅಮಿತ್ ಶಾ ಒಳಗಾಗಿದ್ದು, ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾದಾಗ ಚರ್ಮದ ಕೆಳಗೆ ಬೆಳೆಯುವ ಗಡ್ಡೆಗಳಾಗಿವೆ. ನೋವು ಕಾರಕ ಈ ಗಡ್ಡೆಗಳು ಹಾನಿಕಾರಕವಲ್ಲವಾದರೂ ತೀವ್ರ ನೋವು ನೀಡುವುದರಿಂದ ಈ ಗಡ್ಡೆಗಳನ್ನ ತೆಗೆಸುವುದು ಉತ್ತಮ ಎಂಬುದು ವೈದ್ಯರ ಸಲಹೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top