fbpx
ಸಮಾಚಾರ

ಕನ್ನಡ ಸಿನಿಮಾವೊಂದು ಏಕಕಾಲಕ್ಕೆ ಇಷ್ಟೊಂದು ದೇಶಗಳಲ್ಲಿ ತೆರೆಕಾಣುತ್ತಿರುವುದು ಇದೇ ಮೊದಲು.

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಮೇಲಿನ ಕುತೂಹಲ ದಿನೇ ದಿನೇ ಹೆಚ್ಚುತ್ತಲೇ ಇದೆ. ಕನ್ನಡವೂ ಸೇರಿ ಒಟ್ಟು 5 ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ಸ್ವತಃ ಕಿಚ್ಚನ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದರೇ ಮಾಮೂಲಿ ಪ್ರೇಕ್ಷಕರಲ್ಲೂ ವಿಭಿನ್ನ ಕ್ರೇಜ್ ಹುಟ್ಟುಹಾಕುತ್ತಿದೆ. ಬಿಡುಗಡೆ ದಿನಾಂಕ ಸೆಪ್ಟೆಂಬರ್ 12ಕ್ಕೆ ಫಿಕ್ಸ್ ಆಗಿದೆ.

 

 

ವಿಶೇಷವಾಗಿ ಯುಎಸ್ಎ, ಕೆನಡಾ, ಯುಕೆ, ಸಿಂಗಾಪುರ, ಮಲೇಷಿಯಾ, ಶ್ರೀಲಂಕಾ, ಯುಎಇ, ಕತಾರ್, ಓಮನ್, ಕುವೈತ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ನೈಜೀರಿಯಾ, ಲಿಬೆರಿಯಾ, ಘಾನಾ ಮುಂತಾದ ರಾಷ್ಟ್ರಗಳಲ್ಲಿ ‘ಪೈಲ್ವಾನ್’ ರಿಲೀಸ್ ಆಗುತ್ತಿದೆ. ಒಟ್ಟಾರೆಯಾಗಿ ಜಗತ್ತಿನಾದ್ಯಂತ ಒಂದೇ ದಿನ 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆಯಂತೆ.

ಉತ್ತರ ಭಾರತದಲ್ಲಿಯೇ 1500ಕ್ಕೂ ಹೆಚ್ಚು ಥಿಯೇಟರ್ಸ್, ಕರ್ನಾಟಕದಲ್ಲಿ 500+, ಆಂಧ್ರದಲ್ಲಿ 300+, ತಮಿಳಿನಲ್ಲಿ 200+, ಕೇರಳದಲ್ಲಿ 100+ ಹಾಗೂ ಹೊರ ದೇಶಗಳಲ್ಲಿ ಸುಮಾರು 500 ಥಿಯೇಟರುಗಳಲ್ಲಿ ಪೈಲ್ವಾನ್ ರಿಲೀಸ್ ಆಗಲಿದೆ. ಈ ಮೂಲಕ ಅತಿ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸಿನೆಮಾ ಎಂಬ ಖ್ಯಾತಿ ಗಳಿಸುತ್ತಿದೆ. ಈ ಹಿಂದೆ ಕೆಜಿಎಫ್ ಚಿತ್ರ ಚಿತ್ರಮಂದಿರಗಳಲ್ಲಿ 2500 ತೆರೆಕಂಡಿತ್ತು.

ಚಿತ್ರ ಕಥೆ ಹಾಗೂ ಮೇಕಿಂಗ್​ನಿಂದಾಗಿ ಪೈಲ್ವಾನ್​​ ತುಂಬಾನೇ ಗಮನ ಸೆಳೆದಿದೆ. ಚಿತ್ರದಲ್ಲಿ ಆಕಾಂಕ್ಷ ಸಿಂಗ್, ಕಬೀರ್ ದುಹಾನ್ ಸಿಂಗ್, ಸುನೀಲ್ ಶೆಟ್ಟಿ ಸೇರಿದಂತೆ ಬಹುತೇಕರು ನಟಿಸಿದ್ದಾರೆ. ಚಿತ್ರ ಇದೇ ಸೆಪ್ಟಂಬರ್ 12ಕ್ಕೆ ವಿಶ್ವದಾದ್ಯಂತ ತೆರೆಕಾಣಲಿದೆ. ಚಿತ್ರಕ್ಕೆ ಕೃಷ್ಣ ನಿರ್ದೇಶನ ಮಾಡಿದ್ದಾರೆ ಹಾಗೂ ಅರ್ಜನ್ ಜನ್ಯಾ ಸಂಗೀತವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top